ವೀರಾಜಪೇಟೆ, ಜು. ೨: ಕ್ರೀಡಾ ತರಬೇತಿ ಕೇಂದ್ರ ನಿರ್ಮಾಣ ಉದ್ದೇಶಕ್ಕೆ ವಿ. ಬಾಡಗ ಗ್ರಾಮದಲ್ಲಿ ೧೧ ಎಕರೆ ಸರಕಾರಿ ಜಾಗವನ್ನು ಕಂದಾಯ ಇಲಾಖೆ ಸ್ವಾಧೀನಪಡಿಸಿಕೊಂಡಿದೆ.

ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರÀ ಎ.ಎಸ್. ಪೊನ್ನಣ್ಣ ಅವರು ವೀರಾಜಪೇಟೆಯ ತಾಲೂಕಿನ ವಿ ಬಾಡಗದಲ್ಲಿ ಮಹತ್ವಕಾಂಕ್ಷೆಯ ವಿವಿಧ ಕ್ರೀಡಾ ತರಬೇತಿ ಕೇಂದ್ರಕ್ಕೆ ಈ ಹಿಂದೆ ಹನ್ನೊಂದು ಎಕರೆ ಸರಕಾರಿ ಜಾಗವನ್ನು ಕಾಯ್ದಿರಿಸುವಂತೆ ತಹಶೀಲ್ದಾರರಿಗೆ ಸೂಚಿಸಿದ್ದರು.

ಶಾಸಕರ ಸೂಚನೆ ಮೇರೆಗೆ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಅನಂತ ಶಂಕರ ಅವರ ನೇತೃತ್ವದಲ್ಲಿ ಜಾಗಕ್ಕೆ ತೆರಳಿದ ಕಂದಾಯ ಇಲಾಖೆಯ ಅಧಿಕಾರಿಗಳು ಈ ೧೧ ಎಕರೆ ಜಾಗವನ್ನು ಸ್ವಾಧೀನ ಪಡಿಸಿಕೊಂಡರು.

ಬಳಿಕ ಸ್ಥಳದಲ್ಲಿ ವೀರಾಜಪೇಟೆ ಹೋಬಳಿ ವಿ ಬಾಡಗ ಗ್ರಾಮದ ೧೧ ಎಕರೆ ಜಾಗವನ್ನು ಸರಕಾರದ ವಶಕ್ಕೆ ಪಡೆಯಲಾಗಿದ್ದು, ಸದರಿ ಪ್ರದೇಶದಲ್ಲಿ ಅತಿಕ್ರಮ ಪ್ರವೇಶ £ಷೇಧಿಸಿದ್ದು, ಒತ್ತುವರಿ ಕಂಡು ಬಂದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ರ ಕಲಂ ೧೯೨ ಎ ರಡಿ ಕಾನೂ£ನ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಎಚ್ಚರಿಕೆ ಫಲಕ ಅಳವಡಿಸಲಾಗಿದೆ.

ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಪರಿವೀಕ್ಷಕ ಹರೀಶ್ ಎಂ.ಎಲ್., ಗ್ರಾಮ ಲೆಕ್ಕಿಗರು ಹಾಗೂ ಸಿಬ್ಬಂದಿಗಳು ಇದ್ದರು.