ಮಡಿಕೇರಿ, ಜೂ. ೨ : ಜಿಲ್ಲೆಯಲ್ಲಿ ಕೆಲ ದಿನಗಳಿಂದ ಒಂದಷ್ಟು ಇಳಿಮುಖವಾದಂತಿದ್ದ ಮಳೆ ಇದೀಗ ಮತ್ತೆ ಬಿರುಸುಗೊಳ್ಳುತ್ತಿದೆ. ಜುಲೈ ೫ ರಿಂದ ಪುನರ್ವಸು ಮಳೆ ಆರಂಭಗೊಳ್ಳಲಿದ್ದು ಇದೀಗ ಆರ್ದ್ರಾ ಮಳೆ ನಕ್ಷತ್ರ ಮುಂದುವರಿದಿದೆ. ಆರಂಭದಲ್ಲಿ ತೀರಾ ರಭಸ ತೋರಿದ ಆರ್ದ್ರಾ ನಂತರ ಸ್ವಲ್ಪ ಕಡಿಮೆಯಾದಂತಿತ್ತು. ಇದೀಗ ಮತ್ತೆ ಬುಧವಾರದಿಂದ ಒಂದಷ್ಟು ರಭಸ ಕಾಣುತ್ತಿದೆ. ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳಲ್ಲಿ ಸರಾಸರಿ ೦.೭೬ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೦.೮೧, ವೀರಾಜಪೇಟೆ ೦.೩೭, ಪೊನ್ನಂಪೇಟೆ ೦.೮೫, ಸೋಮವಾರಪೇಟೆ ೧.೨೮, ಕುಶಾಲನಗರದಲ್ಲಿ ೦.೪೭ ಇಂಚು ಮಳೆಯಾಗಿದೆ.

ಕಳೆದ ೨೪ ಗಂಟೆಗಳಲ್ಲಿ ಶ್ರೀಮಂಗಲ ಹೋಬಳಿಯಲ್ಲಿ ೨.೫೮, ಶಾಂತಳ್ಳಿ ೨.೭೬, ಸಂಪಾಜೆ ೨.೧೦, ಭಾಗಮಂಡಲ ೨, ಸೋಮವಾರಪೇಟೆ ಹೋಬಳಿಯಲ್ಲಿ ೧.೨೧, ಶನಿವಾರಸಂತೆ ೧.೦೨ ಇಂಚು ಮಳೆ ಸುರಿದಿದೆ. ಬುಧವಾರ ಬೆಳಿಗ್ಗೆಯಿಂದ ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಜಿಲ್ಲೆಯ ಹಲವೆಡೆಗಳಲ್ಲಿ ಮಳೆ ಹೆಚ್ಚಾದಂತಿತ್ತು.