ವಿಶೇಷ ವರದಿ : ಕೋವರ್ ಕೊಲ್ಲಿ ಇಂದ್ರೇಶ್

ಬೆAಗಳೂರು, ಜು. ೨ : ರಾಜ್ಯದಲ್ಲಿ ಮುಂಗಾರು ಅಬ್ಬರ ತೀವ್ರವಾಗಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಪ್ರವಾಹ ಭೂ ಕುಸಿತ ಸಂಭವಿಸುತ್ತಿದೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಭೂ ಕುಸಿತ ಹಾಗೂ ಇತರೆ ವಿಪತ್ತುಗಳಿಗೆ ತುತ್ತಾಗಬಹುದಾದ ಪ್ರದೇಶಗಳನ್ನು ಗುರುತಿಸಿ ಪಟ್ಟಿ ಮಾಡಿದ್ದು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.

ರಾಜ್ಯದಲ್ಲಿ ಸುಮಾರು ೩೧,೨೬೧ ಚದರ ಕಿ.ಮೀ ಪ್ರದೇಶದಲ್ಲಿ ಭೂ ಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿಸಿರುವ ಪ್ರಾಧಿಕಾರ ಸುಮಾರು ೨೯ ತಾಲೂಕುಗಳ ೨೨೫೨ ಗ್ರಾಮಗಳನ್ನೂ ಗುರುತಿಸಿದೆ. ಈ ಪೈಕಿ ೧,೧೬೪.೫೨ ಚ.ಕಿಮೀ. ಪ್ರದೇಶ ಅತಿ ಹೆಚ್ಚು ಭೂ ಕುಸಿತ ಅಪಾಯ ಹೊಂದಿದ್ದರೆ, ೫,೩೮೬.೭೯ ಚ.ಕಿ.ಮೀ. ಮಧ್ಯಮ ಅಪಾಯ ಹೊಂದಿದೆ. ಇನ್ನು ೨೪,೭೧೦.೧೧ ಚ.ಕಿ.ಮೀ. ಕಡಿಮೆ ಭೂ ಕುಸಿತದ ಅಪಾಯ ಹೊಂದಿದೆ ಎಂದು ವರದಿ ತಿಳಿಸಿದೆ. ವರದಿಯ ಪ್ರಕಾರ ಈ ಹಿಂದೆ ಭೂ ಕುಸಿತ ಸಂಭವಿಸಿದ ಜಿಲ್ಲೆಗಳಾದ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಉಡುಪಿ ಹಾಗೂ ಹಾಸನ ಜಿಲ್ಲೆಗಳಲ್ಲಿ ಹೆಚ್ಚಿನ ಭೂ ಕುಸಿತ ಉಂಟಾಗುತ್ತಿದೆ. ಭಾರತೀಯ ಭೂ ವಿಜ್ಞಾನ ಸಮೀಕ್ಷೆ ಹಾಗೂ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿ ಪ್ರಕಾರ ಕರ್ನಾಟಕದಲ್ಲಿ ಕನಿಷ್ಟ ೧೫.೩೦% ಭೂ ಪ್ರದೇಶ ಭೂ ಕುಸಿತದ ಅಪಾಯ ಹೊಂದಿದೆ. ಕಂದಾಯ ಇಲಾಖೆ ನೀಡಿದ ಅಂಕಿ-ಅAಶದ ಪ್ರಕಾರ ರಾಜ್ಯದಲ್ಲಿ ೨೦೦೬ರಿಂದ ಈವರೆಗೆ ಸುಮಾರು ೧,೫೪೧ ಭೂ ಕುಸಿತಗಳು ಸಂಭವಿಸಿದ್ದು, ೧೦೧ ಸಾವುಗಳು ವರದಿಯಾಗಿವೆ.

ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರದ ವರದಿ ಪ್ರಕಾರ, ಉತ್ತರ ಕನ್ನಡದಲ್ಲಿ ಅತಿ ಹೆಚ್ಚು ೮,೩೮೯.೨೬ ಚ.ಕಿ.ಮೀ. ಪ್ರದೇಶ ಭೂ ಕುಸಿತದ ಅಪಾಯ ಹೊಂದಿದೆ. ಶಿವಮೊಗ್ಗದಲ್ಲಿ ೪,೭೯೭.೯೭ ಚ.ಕಿ.ಮೀ. ಪ್ರದೇಶ ಭೂ ಕುಸಿತಕ್ಕೆ ತುತ್ತಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ೪,೬೦೦ ಚ.ಕಿ.ಮೀ. ಪ್ರದೇಶ ಭೂ ಕುಸಿತಕ್ಕೆ ತುತ್ತಾಗುತ್ತಿರುತ್ತದೆ. ಕೊಡಗಿನಲ್ಲಿ ಸುಮಾರು ೪,೧೫೦ ಚ.ಕಿ.ಮೀ. ಪ್ರದೇಶ ಭೂ ಕುಸಿತದ ಅಪಾಯ ಹೊಂದಿದೆ. ಚಿಕ್ಕಮಗಳೂರಲ್ಲಿ ಸುಮಾರು ೪,೧೦೦ ಚ.ಕಿ.ಮೀ. ಪ್ರದೇಶಗಳು ಭೂ ಕುಸಿತದ ಅಪಾಯ ಹೊಂದಿದೆ. ಇನ್ನು ಉಡುಪಿಯಲ್ಲಿ ಸುಮಾರು ೨,೬೫೦ ಚ.ಕಿ.ಮೀ ಪ್ರದೇಶ ಭೂ ಕುಸಿತಕ್ಕೆ ತುತ್ತಾಗುತ್ತಿದೆ. ಹಾಸನದಲ್ಲಿ ೧,೧೦೦ ಚ.ಕಿ.ಮೀ. ಪ್ರದೇಶದಲ್ಲಿ ಅಪಾಯ ಇದೆ.

ಕಂದಾಯ ಇಲಾಖೆಯ ಮಾಹಿತಿಯಂತೆ ಕಳೆದ ೧೦-೧೫ ವರ್ಷಗಳಿಂದ ಉತ್ತರ ಕನ್ನಡದ ೮ ತಾಲೂಕುಗಳಲ್ಲಿ ೪೪೦ ಕಡೆ ಭೂ ಕುಸಿತ ಸಂಭವಿಸುತ್ತಿದೆ. ಅದೇ ರೀತಿ ಶಿವಮೊಗ್ಗದ ಮೂರು ತಾಲೂಕುಗಳಲ್ಲಿ ೩೬೦ ಕಡೆ ಭೂ ಕುಸಿತ ಉಂಟಾಗುತ್ತಿದೆ. ದಕ್ಷಿಣ ಕನ್ನಡದ ೬ ತಾಲೂಕುಗಳಲ್ಲಿ ೯೬ ಕಡೆ ಭೂ ಕುಸಿತಗಳು ಉಂಟಾಗುತ್ತಿದೆ. ಚಿಕ್ಕಮಗಳೂರಿನ ೪ ತಾಲೂಕುಗಳಲ್ಲಿ ೨೦೦ ಕಡೆ ಭೂ ಕುಸಿತ ಸಂಭವಿಸುತ್ತಿರುತ್ತಿದೆ. ಕೊಡಗಿನ ೩ ತಾಲೂಕುಗಳಲ್ಲಿ ೧೦೪ ಕಡೆ ಭೂ ಕುಸಿತ ಸಂಭವಿಸುತ್ತಿದೆ. ಅದೇ ರೀತಿ ಉಡುಪಿಯ ೪ ತಾಲೂಕುಗಳಲ್ಲಿ ೧೦೨ ಕಡೆ ಭೂ ಕುಸಿತ ಸಂಭವಿಸುತ್ತಿದೆ. ಹಾಸನದ ಸಕಲೇಶಪುರ ತಾಲೂಕಿನಲ್ಲಿ ೨೦ಕ್ಕೂ ಅಧಿಕ ಕಡೆ ಪದೇ ಪದೆ ಭೂ ಕುಸಿತ ಸಂಭವಿಸುತ್ತಿದೆ.

ಈ ಬಾರಿ ಮುಂಗಾರು ವೇಳೆ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯು ರಾಜ್ಯಾದ್ಯಂತ ಸುಮಾರು ೨,೨೫೨ ಗ್ರಾಮಗಳನ್ನು ಪ್ರವಾಹ/ಭೂ ಕುಸಿತಕ್ಕೆ ತುತ್ತಾಗಬಹುದೆಂದು ಗುರುತಿಸಿದೆ. ಆ ಮೂಲಕ ಸುಮಾರು ೧೯,೩೨,೧೮೫ ಜನಸಂಖ್ಯೆ ಪ್ರವಾಹ/ಭೂಕುಸಿತಕ್ಕೆ ತುತ್ತಾಗಬಹುದು ಎಂದು ಅಂದಾಜಿಸಿದೆ. ಒಟ್ಟು ೧೭೧ ತಾಲೂಕುಗಳನ್ನು ಪ್ರವಾಹ/ಭೂ ಕುಸಿತಕ್ಕೆ ತುತ್ತಾಗಬಹುದು ಎಂದು ಗುರುತಿಸಿದೆ. ಒಟ್ಟು ೧,೨೮೮ ಗ್ರಾಮ ಪಂಚಾಯಿತಿಗಳು ಪ್ರವಾಹ/ಭೂ ಕುಸಿತಕ್ಕೆ ತುತ್ತಾಗಬಹುದೆಂದು ಗುರುತಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ೨೦೧ ಸ್ಥಳಗಳಲ್ಲಿ ಪ್ರವಾಹ ಪೀಡಿತವೆಂದು ಗುರುತಿಸಲಾಗಿದೆ.

ಮಂಡ್ಯದಲ್ಲಿ ೧೧೨ ಗ್ರಾಮಗಳು, ಚಾಮರಾಜನಗರದಲ್ಲಿ ೨೧ ಗ್ರಾಮಗಳು, ಚಿಕ್ಕಮಗಳೂರಲ್ಲಿ ೮೫ ಗ್ರಾಮಗಳು, ಕೊಡಗಿನಲ್ಲಿ ೮೮ ಗ್ರಾಮಗಳು, ಯಾದಗಿರಿಯಲ್ಲಿ ೮೦ ಗ್ರಾಮಗಳು, ಹಾಸನದಲ್ಲಿ ೮೧ ಗ್ರಾಮಗಳು, ಧಾರವಾಡದಲ್ಲಿ ೫೬ ಗ್ರಾಮಗಳು, ತುಮಕೂರಿನಲ್ಲಿ ೧೩ ಗ್ರಾಮಗಳು, ರಾಯಚೂರಿನಲ್ಲಿ ೨೬ ಗ್ರಾಮಗಳು, ವಿಜಯನಗರದಲ್ಲಿ ೨೨ ಗ್ರಾಮಗಳು,

(ಮೊದಲ ಪುಟದಿಂದ) ಮೈಸೂರಲ್ಲಿ ೬೩ ಗ್ರಾಮಗಳು, ರಾಮನಗರದಲ್ಲಿ ೧೭ ಗ್ರಾಮಗಳು ಮತ್ತು ದಾವಣಗೆರೆಯಲ್ಲಿ ೫೫ ಗ್ರಾಮಗಳನ್ನು ಪ್ರವಾಹ/ಭೂ ಕುಸಿತ ತುತ್ತಾಗಬಹುದಾದ ಪ್ರದೇಶ ಎಂದು ಗುರುತಿಸಲಾಗಿದೆ.

ಮುನ್ನೆಚ್ಚರಿಕಾ ಕ್ರಮಗಳು

ಪ್ರವಾಹ ಮತ್ತು ಭೂ ಕುಸಿತ ಪೀಡಿತ ಪ್ರದೇಶಗಳಲ್ಲಿ ವಾರ್ಡಿನ ಕಂದಾಯಾಧಿಕಾರಿ/ಪAಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಆಡಳಿತ ಅಧಿಕಾರಿ, ಪೊಲೀಸ್ ಪ್ರತಿನಿಧಿ, ಅಗ್ನಿಶಾಮಕ ಇಲಾಖೆಯ ಪ್ರತಿನಿಧಿ, ಆರೋಗ್ಯ ಇಲಾಖೆಯ ಪ್ರತಿನಿಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರತಿನಿಧಿ ಹಾಗೂ ಪÀಶು ಸಂಗೋಪನೆ ಇಲಾಖೆಯ ಪ್ರತಿನಿಧಿಗಳನ್ನೊಳಗೊಂಡ ನಗರ ಸ್ಥಳೀಯ ಸಂಸ್ಥೆ/ಗ್ರಾಮೀಣ ಸ್ಥಳೀಯ ಸಂಸ್ಥೆ ವಿಪತ್ತು ನಿರ್ವಹಣಾ ಟಾಸ್ಕ್ ಫೋರ್ಸ್ ರಚಿಸಲು ಸೂಚಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆ/ಗ್ರಾಮೀಣ ಸ್ಥಳೀಯ ಸಂಸ್ಥೆ ವಿಪತ್ತು ನಿರ್ವಹಣಾ ಟಾಸ್ಕ್ ಫೋರ್ಸ್ ಸ್ಥಳೀಯ ಜ್ಞಾನ ಹಾಗೂ ಏSಓಆಒಅ ಸಹಯೋಗದೊಂದಿಗೆ ಅವರ ವ್ಯಾಪ್ತಿಯಲ್ಲಿ ಎದುರಾಗಬಹುದಾದ ವಿವಿಧ ರೀತಿಯ ವಿಪತ್ತುಗಳನ್ನು ಗುರುತಿಸುವುದು. ಶೋಧನೆ, ಸ್ಥಳಾಂತರ, ರಕ್ಷಣಾ ಮತ್ತು ಪ್ರತಿಕ್ರಿಯೆ ತಂಡ ರಚಿಸುವುದು ಹಾಗೂ ತಂಡವು ಹೊಂದಿರುವ ರಕ್ಷಣಾ ಪರಿಕರಗಳ ಕಾರ್ಯಶೀಲತೆ ಮತ್ತು ಸನ್ನದ್ಧತೆಯನ್ನು ದೃಢಪಡಿಸಿಕೊಳ್ಳಬೇಕು ಎಂದು ನಿರ್ದೇಶಿಸಲಾಗಿದೆ.

ನೋಡಲ್ ಅಧಿಕಾರಿಗಳು ಮುಂಗಾರು ಅವಧಿಯಲ್ಲಿ ಪ್ರತಿ ೧೦ ದಿನಗಳಿಗೊಮ್ಮೆ ಪ್ರವಾಹ / ಭೂಕುಸಿತ ಪೀಡಿತ ಗ್ರಾಮಗಳಿಗೆ ಭೇಟಿ ನೀಡುವುದು ಹಾಗೂ ಸಭೆ ನಡೆಸುವುದು ಮತ್ತು ಭಾರೀ ಮಳೆ (ಖeಜ ಚಿಟeಡಿಣ)/ಪ್ರವಾಹ ಉಂಟಾಗುವ ಸಾಧ್ಯತೆ ಇದ್ದಾಗ ಸ್ಥಳೀಯವಾಗಿ ವಾಸ್ತವ್ಯ ಹೂಡಿ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡಬೇಕು. ಟಾಸ್ಕ್ ಫೋರ್ಸ್ ಸಮಿತಿಯು ಪ್ರವಾಹ / ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಪ್ರವಾಹ/ಭೂ ಕುಸಿತ ಆಗುವ ಸಂಭವವಿದ್ದಲ್ಲಿ ಪೂರ್ವಭಾವಿಯಾಗಿ ಜನ-ಜಾನುವಾರುಗಳನ್ನು ಸ್ಥಳಾಂತರಗೊಳಿಸುವAತೆ ಸೂಚಿಸಲಾಗಿದೆ. ಭಾರೀ ಮಳೆ ಬರುವ ಸೂಚನೆಯಿದ್ದಾಗ ಉಕ್ಕಿ ಹರಿಯುವ ಸೇತುವೆಗಳು/ನದಿಗಳು/ತೊರೆಗಳ ಸ್ಥಳಗಳಲ್ಲಿ ಗಸ್ತು ಮಾಡುವುದು ಹಾಗೂ ಅಪಾಯ ಮುನ್ಸೂಚನೆಯ ಸೂಚನಾ ಫಲಕಗಳನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಪೂರ್ವಭಾವಿಯಾಗಿ ಅಳವಡಿಸಬೇಕು. ಶಿಥಿಲವಾದ ಶಾಲೆಗಳು / ಅಂಗನವಾಡಿಗಳು / ಮನೆಗಳನ್ನು ಗುರುತಿಸಿ ಪರ್ಯಾಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.