ಮಡಿಕೇರಿ, ಜು. ೨ : ಜುಲೈ ೮ ರಿಂದ ೨೦ರವರೆಗೆ ಆರು ರಾಷ್ಟçಗಳು ಭಾಗವಹಿಸಲಿರುವ ಯೂರೋಪ್‌ನಲ್ಲಿ ನಡೆಯುವ ಹಾಕಿ ಪಂದ್ಯಾವಳಿಯಲ್ಲಿ ಭಾರತ ಎ ಹಾಕಿ ತಂಡವೂ ಪಾಲ್ಗೊಳ್ಳುತ್ತಿದೆ. ಯೂರೋಪ್ ಪ್ರವಾಸದ ಈ ಹಾಕಿ ಪಂದ್ಯಾವಳಿಗೆ ಭಾರತ ಎ ತಂಡವನ್ನು ಹಾಕಿ ಇಂಡಿಯಾ ಪ್ರಕಟಿಸಿದ್ದು ತಂಡದಲ್ಲಿ ಕೊಡಗಿನವರಾದ ಯುವ ಆಟಗಾರ ಚಂದೂರ ಬಿ. ಪೂವಣ್ಣ ಸ್ಥಾನ ಪಡೆದಿದ್ದಾರೆ.

ತಂಡದಲ್ಲಿ ಪೂವಣ್ಣ ಅವರೊಂದಿಗೆ ರಾಜ್ಯದ ಇನ್ನಿತರ ಇಬ್ಬರು ಆಟಗಾರರಾದ ಮೋಹಿತ್ ಹೆಚ್.ಎಸ್. ಹಾಗೂ ಮೊಹಮದ್ ರಹೀಲ್ ಅವರುಗಳೂ ಸ್ಥಾನ ಪಡೆದಿದ್ದಾರೆ.

ಪೂವಣ್ಣ ಕಂಡAಗಾಲ ನಿವಾಸಿ ಚಂದೂರ ಎಸ್. ಪ್ರಭು (ಬಾಬಿ) ಹಾಗೂ ಅನಿಲ (ತಾಮನೆ ಮಲ್ಲೇಂಗಡ) ೨೦ ಆಟಗಾರರನ್ನು ಒಳಗೊಂಡ ಭಾರತ ತಂಡವನ್ನು ಹಾಕಿ ಇಂಡಿಯಾ ಪ್ರಕಟಿಸಿದ್ದು ಹರಿಯಾಣದ ಸಂಜಯ್ ತಂಡವನ್ನು ಮುನ್ನಡೆಸಲಿದ್ದಾರೆ. ಉದಯೋನ್ಮುಖ ಆಟಗಾರರ ತಂಡ ಇದಾಗಿದ್ದು ಭಾರತ ಫ್ರಾನ್ಸ್, ಐರ್ಲೆಂಡ್, ನೆದರ್ಲೇಂಡ್ ವಿರುದ್ಧ ತಲಾ ೨ ಮತ್ತು ಇಂಗ್ಲೆAಡ್ ಹಾಗೂ ಬೆಲ್ಜಿಯಂನೊAದಿಗೆ ತಲಾ ೧ ಪಂದ್ಯವನ್ನಾಡಲಿದೆ. ಭಾರತ ರಾಷ್ಟಿçÃಯ ತಂಡದ ಸಹಾಯಕ ಕೋಚ್ ಶಿವೇಂದ್ರ ಸಿಂಗ್ ಈ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದು ತಂಡ ತಾ. ೫ರಂದು ತೆರಳಲಿದೆ.