ಮಡಿಕೇರಿ, ಜು. ೧: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ವತಿಯಿಂದ ಭವಿಷ್ಯ ನಿಧಿ ನಿಮ್ಮ ಹತ್ತಿರ ೨.೦ ಅಡಿಯಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯ ಮಾಹಿತಿ ಕಾರ್ಯಕ್ರಮವನ್ನು ಸಂಘಟನೆಯ ಮೈಸೂರು ಪ್ರಾದೇಶಿಕ ಕಚೇರಿಯಿಂದ ಬೈಚನಹಳ್ಳಿ ಸ್ವತಂತ್ರ ಪಿಯು ಕಾಲೇಜಿನಲ್ಲಿ ನಡೆಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಎ.ಎ. ಜೋಯಪ್ಪ, ಉಪಪ್ರಾಂಶುಪಾಲ ಎ.ಎಸ್ ಮದನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಭವಿಷ್ಯ ನಿಧಿ ಕಚೇರಿಯ ಸೌರಭ್, ಜ್ಯೋತಿ, ಲಕ್ಷಿö್ಮÃ ಎಂ, ಪಿ.ಎಂ. ಸ್ವಸ್ತಿಕ್, ರವಿನಂದನ್ ಹಾಗೂ ಇತರರು ಇದ್ದರು. ಪಿ.ಎಫ್. ಸದಸ್ಯರು, ಪಿಂಚಣಿದಾರರು, ಉದ್ಯೋಗದಾತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಹಿತಿ ಪಡೆದುಕೊಂಡರು.