ಶ್ರೀಮಂಗಲ, ಜು. ೧: ವೀರಾಜಪೇಟೆ ತಾಲೂಕು ವಿ.ಬಾಡಗದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ, ವಿವಿಧ ಕ್ರೀಡೆಗಳ ತರಬೇತಿ ಕೇಂದ್ರಕ್ಕೆ, ಲಭ್ಯ ಇರುವ ಸ್ಥಳದ ಪೂರ್ವಭಾವಿ ವೀಕ್ಷಣೆಯನ್ನು, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಕೈಗೊಂಡರು.
ಕ್ರೀಡೆಯ ಉತ್ತೇಜನ ಹಾಗೂ ಅಭಿವೃದ್ಧಿಗೆ ಮಹತ್ವಾಕಾಂಕ್ಷೆಯಿAದ ಈ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ. ಹಾಗಾಗಿ ಈ ಯೋಜನೆಯ ಶೀಘ್ರ ಹಾಗೂ ಯಶಸ್ವಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ.
ಕ್ರೀಡಾ ತರಬೇತಿ ಕೇಂದ್ರಕ್ಕೆ ಜಾಗ ಕಾಯ್ದಿರಿಸುವ ಸಂಬAದ, ಸ್ಥಳ ಪರಿಶೀಲನೆ ನಡೆಸಲಾಗಿದೆ. ಖಾಲಿ ಇರುವ ಸುಮಾರು ೧೧ ಎಕರೆಯಷ್ಟು ಸರಕಾರಿ ಜಾಗವನ್ನು, ಕೂಡಲೇ ಪರಿಗಣಿಸಿ, ತಹಶೀಲ್ದಾರ್ ಅವರು ಒಂದು ವಾರದೊಳಗೆ ಸರ್ವೆ ನಕ್ಷೆ ನೀಡುವಂತೆ ಸರ್ವೆ ಇಲಾಖೆಗೆ ಸೂಚಿಸಲಾಗಿದೆ ಎಂದು ಶಾಸಕ ಪೊನ್ನಣ್ಣ ತಿಳಿಸಿದರು.
ಈ ಸಂದರ್ಭ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಕಂಜಿತAಡ ಗಿಣಿ ಮೊಣ್ಣಪ್ಪ, ಕಂಜಿತAಡ ರಘು ಮಾಚಯ್ಯ, ಕಂಜಿತAಡ ಪೂವಣ್ಣ, ಕೊಂಗAಡ ಕಾಶಿ ಕಾರ್ಯಪ್ಪ, ಚೇಮಿರ ಪ್ರಕಾಶ್, ವೀರಾಜಪೇಟೆ ತಹಶೀಲ್ದಾರ್, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.