ಸೋಮವಾರಪೇಟೆ, ಜು. ೧: ರಾಷ್ಟಿçÃಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ ರಾಷ್ಟ ಮಟ್ಟದಲ್ಲಿ ೮೪ನೇ ಸ್ಥಾನ, ರಾಜ್ಯಮಟ್ಟದಲ್ಲಿ ೭ನೇ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿರುವ ಪಟ್ಟಣ ಸಮೀಪದ ಚೌಡ್ಲು ಆಲೇಕಟ್ಟೆ ನಿವಾಸಿ ಕೆ.ಜಿ. ನಿಧಿ ಅವರನ್ನು ಇಲ್ಲಿನ ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ರೋಟರಿ ಸಭಾಂಗಣದಲ್ಲಿ ನಡೆದ ನೂತನ ಸಾಲಿನ ಆಡಳಿತ ಮಂಡಳಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಮುಖರು ವಿದ್ಯಾರ್ಥಿನಿ ನಿಧಿ ಅವರನ್ನು ಸನ್ಮಾನಿಸಿದರು.

ಈ ಸಂದರ್ಭ ರೋಟರಿ ಅಧ್ಯಕ್ಷೆ ವೀಣಾ ಮನೋಹರ್, ರೋಟರಿ ಪ್ರಮುಖರಾದ ಸತೀಶ್ ಬೋಳಾರ್, ಡಾ. ಹರಿ. ಎ. ಶೆಟ್ಟಿ, ಉಲ್ಲಾಸ್ ಕೃಷ್ಣ, ಪ್ರಕಾಶ್ ಕುಮಾರ್, ಡಾ. ರಾಕೇಶ್ ಪಟೇಲ್, ಕಾರ್ಯದರ್ಶಿ ಡಿ.ಪಿ. ರಮೇಶ್, ಮಾಜಿ ಅಧ್ಯಕ್ಷ ಜೆ.ಕೆ. ಪೊನ್ನಪ್ಪ, ಕೆ.ಡಿ. ಬಿದ್ದಪ್ಪ, ವಿದ್ಯಾರ್ಥಿನಿಯ ಪೋಷಕರಾದ, ಪೊಲೀಸ್ ಇಲಾಖೆಯ ಎಎಸ್‌ಐ ಕೆ.ಎಸ್. ಗಣಪತಿ, ಮುಖ್ಯ ಶಿಕ್ಷಕಿ ಗುಣವತಿ ಅವರುಗಳು ಉಪಸ್ಥಿತರಿದ್ದರು.