ಶನಿವಾರಸಂತೆ, ಜು. ೧: ಸಮೀಪದ ಗೌಡಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಲೇರಿಯಾ ಹಾಗೂ ಡೆಂಗ್ಯೂ ವಿರುದ್ಧ ಮಾಸಾಚರಣೆ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು.

ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವಜ್ಞ, ಎಸ್ಟಿಎಲ್ ಎಸ್ ಪುಟ್ಟರಾಜ್ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕೇಂದ್ರದ ಪಿ.ಎಚ್. ಸಿವೊ ಪಾರ್ವತಿ ಅವರ ಸಮ್ಮುಖದಲ್ಲಿ ದಾಖಲಾತಿಗಳನ್ನು ಪರಿಶೀಲಿಸಿ ಸೂಕ್ತ ಸಲಹೆಗಳನ್ನು ನೀಡಿದರು. ನಂತರ ನಡೆದ ಅಂಗನವಾಡಿ ಕಾರ್ಯಕರ್ತೆಯರ ಸಭೆಯಲ್ಲಿ ಮಲೇರಿಯ ಜ್ವರದ ಕುರಿತು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವಜ್ಞ ಮಾತನಾಡಿ, ಮಲೇರಿಯ ಜ್ವರವನ್ನು ಶೀಘ್ರವಾಗಿ ಪತ್ತೆಹಚ್ಚಿ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಬಹುದು ಎಂದು ತಿಳಿಸಿದರು.

ಮಲೇರಿಯ, ಡೆಂಗ್ಯೂ, ಚಿಕನ್ ಗುನ್ಯಾ ಜ್ವರದ ಲಕ್ಷಣ, ಸೊಳ್ಳೆಯ ಜೀವನ ಚಕ್ರ ಹಾಗೂ ಕ್ಷಯ ಮತ್ತು ಕುಷ್ಟ ರೋಗ ನಿರ್ಮೂಲನೆ ಕಾರ್ಯಕ್ರಮದ ಬಗ್ಗೆ ಎಎಂಸಿ ಟಿ.ಬಿ. ಕಾರ್ಡ್ಗಳನ್ನು ಪರಿಶೀಲಿಸಿ ಎಲ್ಲಾ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಸೂಕ್ತ ಸಲಹೆ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷತಾ ಅಧಿಕಾರಿಗಳಾದ ದಿವ್ಯಾ, ಶ್ವೇತಾ, ಸಿಎಚ್‌ಒ ಭೂಮಿಕಾ, ಶುಶ್ರೂಷಾ ಧಿಕಾರಿ ವಾಸಂತಿ, ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿ ಪ್ರಜ್ವಲ್, ಅಂಗನ ವಾಡಿ ಕೇಂದ್ರದ ಕಾರ್ಯಕರ್ತೆಯರು ಹಾಜರಿದ್ದರು.