ಗೋಣಿಕೊಪ್ಪ ವರದಿ: ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ಆಚರಿಸಲಾಯಿತು. ಶಾಲೆಯ ಸಂಸ್ಥಾಪಕಿ ಡಾ. ಅಪ್ಪನೆರವಂಡ ಶಾಂತಿ ಅಚ್ಚಪ್ಪ, ಪ್ರಾಂಶುಪಾಲೆ ಕೂತಂಡ ಪುಷ್ಪಾ ಸುಬ್ಬಯ್ಯ ಯೋಗಾಸನದಲ್ಲಿ ಭಾಗವಹಿಸಿ ಪ್ರೇರಣೆಯಾದರು.

ವಿದ್ಯಾರ್ಥಿನಿ ಕುಟ್ಟಂಡ ಲೀಷ ಯೋಗಾಸನದ ಬಗ್ಗೆ ಮಾಹಿತಿ ನೀಡಿದರು. ಯೋಗ ಶಿಕ್ಷಕಿ ಕುಟ್ಟಂಡ ಯಶ್ಮ ತಿಮ್ಮಯ್ಯ ಮತ್ತು ಮಚ್ಚಾರಂಡ ಮಾಲಿನಿ ನೇತೃತ್ವದಲ್ಲಿ ಯೋಗಾಸನ ಅಭ್ಯಾಸ ನಡೆಸಲಾಯಿತು. ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರು ಯೋಗಾಸನ ಮಾಡಿದರು.ಶನಿವಾರಸಂತೆ: ಯೋಗ ವಿಶ್ವಕ್ಕೆ ಭಾರತ ಕೊಟ್ಟ ಕೊಡುಗೆಯಾಗಿದ್ದು, ಯೋಗ ಎಂದರೆ ಜೀವನ ವಿಕಾಸ. ಯೋಗಾಭ್ಯಾಸದಿಂದ ಅಧ್ಯಾತ್ಮಿಕತೆಯ ಜತೆಗೆ ಬೌದ್ಧಿಕ, ನೈತಿಕ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದು ಎಂದು ಅರಕಲಗೂಡು ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹಾಗೂ ರೇಖಿ ಮತ್ತು ಸಂಮೋಹನ ಚಿಕಿತ್ಸಕ ಡಾ. ಕುಮಾರ್ ಹೇಳಿದರು. ಪಟ್ಟಣದ ಸಹಕಾರ ಬ್ಯಾಂಕ್‌ನ ಸಭಾಂಗಣದಲ್ಲಿ ಪತಂಜಲಿ ಯೋಗ ಸಮಿತಿ ಹಾಗೂ ಯೋಗ ಬಂಧುಗಳು ವತಿಯಿಂದ ನಡೆದ ಅಂತರರಾಷ್ಟಿçÃಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಮಹಿಳಾ ಸಹಕಾರ ಸಮಾಜದ ಅಧ್ಯಕ್ಷೆ ಭುವನೇಶ್ವರಿ ಹರೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿ ಡಾ. ಚಿದಾನಂದ್, ಇಂಜಿನಿಯರ್ ಸೋಮಣ್ಣ, ವಕೀಲರಾದ ಶಶಿಕುಮಾರ್, ಸತೀಶ್, ಪ್ರಮುಖ ಎನ್.ವಿ. ಹರೀಶ್ ಯೋಗದ ಮಹತ್ವ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಶ್ರಾವ್ಯ ಶೆಟ್ಟಿ ಹಾಗೂ ಸ್ಫೂರ್ತಿ ಪ್ರತಾಪ್ ನೃತ್ಯ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು. ಡಾ. ಕುಮಾರ್ ಹಾಗೂ ಯೋಗ ಗುರು ಮೋಹನ್ ಕುಮಾರ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಯೋಗಗುರು ಎ.ಡಿ. ಮೋಹನ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್ ಮಾತನಾಡಿದರು. ಶಿಕ್ಷಕಿ ಸುಮಾ, ಹಸೀನಾ, ಯೋಗಿತಾ, ಸರೋಜಮ್ಮ, ವಿಜಯ, ಮಂಜು, ಎನ್.ವಿ. ಹರೀಶ್, ೨೦ ಮಂದಿ ಶಿಬಿರಾರ್ಥಿಗಳು, ಇತರ ಪ್ರಮುಖರು ಹಾಜರಿದ್ದರು.ಮಡಿಕೇರಿ: ೧೧ನೇ ವಿಶ್ವ ಯೋಗ ದಿನವನ್ನು ಬಿರುನಾಣಿಯ ಸುಜ್ಯೋತಿ ಶಾಲೆಯಲ್ಲಿ ಮಕ್ಕಳು ಹಾಗೂ ಶಿಕ್ಷಕರು ವಿವಿಧ ಆಸನಗಳನ್ನು ಮಾಡುವುದರ ಮೂಲಕ ಆಚರಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಲತಾ ಯೋಗ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿನಿತ್ಯ ಯೋಗಾಸನ ಮಾಡುವ ಮೂಲಕ ವಿದ್ಯಾರ್ಥಿಗಳು ಹೇಗೆ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಎಂದು ವಿವರಿಸಿದರು.ಮಡಿಕೇರಿ: ಬೆಟ್ಟಗೇರಿ ಉದಯ ಶಾಲೆಯಲ್ಲಿ ಅಂತರರಾಷ್ಟಿçÃಯ ಯೋಗ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಯೋಗ ಪರಿಣಿತರಾದ ಶೃತಿ ನಾಣಯ್ಯ ಅವರು ಭಾಗವಹಿಸಿದ್ದರು. ಇವರು ಮಕ್ಕಳಿಗೆ ಮೊದಲಿಗೆ ಧ್ಯಾನವನ್ನು ಮಾಡಿಸಿ ಪರೀಕ್ಷೆಯ ಒತ್ತಡ ನಿವಾರಣೆಯ ವ್ಯಾಯಾಮ ಮಾಡಿಸಿದರು.

ನಂತರ ವಿವಿಧ ಯೋಗದ ಆಸನಗಳನ್ನು ಮಾಡಿಸಿದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ರೀನಾ ಮುತ್ತಮ್ಮ ಅವರು ಕೂಡ ಮಕ್ಕಳು ಈ ಹಿಂದೆ ಅಭ್ಯಸಿಸಿದ್ದ ಹಲವು ಯೋಗದ ಆಸನಗಳನ್ನು ಮಾಡಿಸಿದರು.ಗೋಣಿಕೊಪ್ಪಲು: ಗೋಣಿಕೊಪ್ಪಲು ಅರುವತ್ತೊಕ್ಲುವಿನಲ್ಲಿರುವ ಕಾಫಿ ಮಂಡಳಿ ಕಚೇರಿಯಲ್ಲಿ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಆರ್ಟ್ ಆಫ್ ಲಿವಿಂಗ್‌ನ ಶಾಂತೆಯAಡ ಮಧು ಮಾಚಯ್ಯ ಯೋಗಾಭ್ಯಾಸದ ಬಗ್ಗೆ ಜಾಗೃತಿ - ಮಾಹಿತಿ ನೀಡಿದರು. ಕಾಫಿ ಮಂಡಳಿ ಉಪನಿರ್ದೇಶಕಿ ಡಾ. ಶ್ರೀದೇವಿ ಹಾಗೂ ಸಿಬ್ಬಂದಿಗಳು ಯೋಗ ಪ್ರದರ್ಶನ ನೀಡಿದರು.