ಗೋಣಿಕೊಪ್ಪ ವರದಿ, ಜು. ೧: ಕ್ಯಾಲ್ಸ್ ಎಸ್‌ಎಸ್‌ಎಫ್ ಶೂಟಿಂಗ್ ರೇಂಜ್‌ನಲ್ಲಿ ಸಿಐಎಸ್‌ಸಿಇ ನ್ಯಾಷನಲ್ ಸ್ಪೋರ್ಟ್ಸ್ ಆ್ಯಂಡ್ ಗೇಮ್ಸ್ ಹಾಗೂ ಕರುಂಬಯ್ಯಾಸ್ ಅಕಾಡೆಮಿ ಆ್ಯಂಡ್ ಸ್ಪೋರ್ಟ್ ಸಹಯೋಗದಲ್ಲಿ ವಲಯ ಮಟ್ಟದ ಶೂಟಿಂಗ್ ಸ್ಪರ್ಧೆ ನಡೆಯಿತು.
೧೪, ೧೭ ಮತ್ತು ೧೯ ವಯೋಮಿತಿಯಲ್ಲಿ ಸುಮಾರು ೪೬ ಸ್ಪರ್ಧಿಗಳು ಭಾಗವಹಿಸಿದ್ದರು.ಚಿನ್ನದ ಪದಕ ಗೆದ್ದವರು ರೀಜಿನಲ್ ಮಟ್ಟಕ್ಕೆ ಪ್ರವೇಶ ಪಡೆದುಕೊಂಡರು.
೧೯ ವಯೋಮಿತಿಯ ಪುರುಷರ ಪಿಸ್ತೂಲ್ ವಿಭಾಗದಲ್ಲಿ ಮಿತಿನ್ ಗೌಡ ಚಿನ್ನದ ಪದಕ ಗೆದ್ದರು. ಓಪನ್ ಸೈಟ್ ರೈಫಲ್ ಪುರುಷರಲ್ಲಿ ಎನ್.ಯು. ಕೃಷ್ ಗಣಪತಿ ಪ್ರಥಮ, ತನೀಶ್ ತಿಮ್ಮಯ್ಯ ದ್ವಿತೀಯ, ಕೆ.ಆರ್. ರಿತ್ವಿಕ್ ತೃತೀಯ ಸ್ಥಾನ ಪಡೆದರು. ಮಹಿಳೆಯರಲ್ಲಿ ಕೆ.ಎಂ. ಅದಿತಿ ಮುತ್ತಮ್ಮ (ಪ್ರ), ಜಿ.ಎ. ದಿಯಾ ಕಾರಿಣ್ಯ (ದ್ವಿ), ಬಿ.ಕೆ. ಚಿನ್ಮಯಿ (ತೃ), ೧೭ ವಯೋಮಿತಿಯ ಓಪನ್ ಸೈಟ್ ರೈಫಲ್ ಬಾಲಕರಲ್ಲಿ ಮಳವಂಡ ಪೂಜಿತ್ ಕಾವೇರಪ್ಪ (ಪ್ರ), ಮಯಾಂಕ್ ಮುತ್ತಣ್ಣ (ದ್ವಿ), ಶಾವ್ನ್ ಈತನ್ (ತೃ), ಬಾಲಕಿಯರಲ್ಲಿ ಶನೈಕ ಸಚಿನ್ (ಪ್ರ), ಕ್ಷಮ್ಯ ಅನಿಲ್ (ದ್ವಿ), ಜಿ. ಪ್ರಣವಿ (ತೃ), ೧೪ ವಯೋಮಿತಿಯ ಬಾಲಕರಲ್ಲಿ ಜಿ. ಮಯಾಂಕ್ (ಪ್ರ), ಬೊಳ್ಳೆರ ಕುಟ್ಟಪ್ಪ (ತೃ), ಬಾಲಕಿಯರಲ್ಲಿ ಟಿಯಾನಾ ತಂಗಮ್ಮ (ಪ್ರ), ಗಾನಾ ಗಂಗಮ್ಮ (ದ್ವಿ), ಕೆ.ಕೆ. ಮುತ್ತಮ್ಮ (ತೃ) ಸ್ಥಾನ ಪಡೆದರು.
೧೯ ವಯೋಮಿತಿಯ ಪೀಪ್ ಸೈಟ್ ರೈಫಲ್ ವಿಭಾಗದಲ್ಲಿ ಕೊಣೇರಿರ ಬಿದ್ದಪ್ಪ ನಾಣಯ್ಯ (ಪ್ರ), ಎಸ್. ಗಿರಿವರ್ (ದ್ವಿ), ಎನ್. ಪಿ. ವಿಹಾನ್ (ತೃ), ಬಾಲಕಿಯರಲ್ಲಿ ವಿಹಾ ಪೊನ್ನಮ್ಮ (ಪ್ರ), ಅಕ್ಷಯ ಪ್ರಸಾದ್ (ದ್ವಿ), ಆಂಚಲ್ ಗಂಗಾ (ತೃ), ೧೭ ವಯೋಮಿತಿ ಬಾಲಕರಲ್ಲಿ ಡಿ. ಸಮರ್ಥ್ (ಪ್ರ), ದೃವಂತ್ ಗೌಡ (ದ್ವಿ), ಬಾಲಕಿಯರಲ್ಲಿ ಸಾಶ್ಯ ನಿಶಾಂತ್ (ಪ್ರ), ಪಿ.ಆರ್. ಸಾನ್ವಿ (ದ್ವಿ), ೧೪ ವಯೋಮಿತಿಯ ಬಾಲಕರಲ್ಲಿ ಟಿ.ಟಿ. ನರೇನ್ ಅಯ್ಯಪ್ಪ ಪ್ರಥಮ ಸ್ಥಾನ ಪಡೆದರು.