ನಾಪೋಕ್ಲು, ಜು. ೧: ನಾಪೋಕ್ಲು - ಬೆಟ್ಟಗೇರಿ ಸಂಪರ್ಕ ರಸ್ತೆ ಕುಸಿದು ಅಪಾಯ ಮಟ್ಟಕ್ಕೆ ತಲುಪಿದ್ದು, ವಾಹನ ಸಂಪರ್ಕ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ನಾಪೋಕ್ಲು - ಬೆಟ್ಟಗೇರಿ - ಮಡಿಕೇರಿ ಮುಖ್ಯ ಸಂಪರ್ಕರಸ್ತೆಯ ಕೊಟ್ಟಮುಡಿ ಜಂಕ್ಷನ್ ಸಮೀಪ ರಸ್ತೆಯ ಒಂದು ಬಾಗ ಕುಸಿದಿದ್ದು, ಜೀವಪಾಯಕ್ಕೆ ಆಹ್ವಾನ ನೀಡುವಂತಿದೆ. ಕಿರಿದಾದ ರಸ್ತೆಯ ಒಂದೇ ಭಾಗದಲ್ಲಿ ವಾಹನಗಳು ಸಂಚರಿಸುತ್ತಿದ್ದು, ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಕಳೆದ ವರ್ಷ ಈ ರಸ್ತೆ ಕಾವೇರಿ ಪ್ರವಾಹದಿಂದ ಮುಳುಗಡೆಯಾಗಿದ್ದು, ಈ ಮಳೆಗಾಲದಲ್ಲಿಯೂ ಮುಳುಗಡೆಯಾದರೆ ರಸ್ತೆ ಸಂಪೂರ್ಣ ಕುಸಿದು ಭಾರೀ ಅನಾಹುತ ಸಂಭವಿಸುವ ಸಾಧ್ಯತೆಗಳು ಇವೆ. ಸಂಬAಧಪಟ್ಟವರು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.