ನಾಪೋಕ್ಲು, ಜೂ. ೩೦: ಸಮೀಪದ ಕಿರುಂದಾಡು ಗ್ರಾಮದ ತೋಟಗಳಲ್ಲಿ ಕಾಡಾನೆಗಳು ದಾಂಧಲೆ ಮಾಡಿ ಕೃಷಿ ಗಿಡಗಳನ್ನು ನಾಶ ಮಾಡಿರುವ ಘಟನೆ ನಡೆದಿದೆ. ಕಾಡಾನೆಗಳು ದಾಂಧಲೆ ನಡೆಸಿದ್ದು ತೆಂಗು, ಅಡಿಕೆ, ಕಾಫಿ, ಬಾಳೆೆ ಗಿಡಗಳನ್ನು ನಾಶಪಡಿಸಿವೆ.

ಪಾರಾಣೆ ಗ್ರಾಮ ಪಂಚಾಯಿತಿಯ ಕಿರುಂದಾಡು ಗ್ರಾಮದ ಕಲಿಯಂಡ ಪೂವಣ್ಣ ಅವರ ತೋಟದÀಲ್ಲಿ ದಾಳಿ ನಡೆಸಿರುವ ಕಾಡಾನೆಗಳ ಹಿಂಡು ೩ ತೆಂಗು ಸುಮಾರು ೬೦ಅಡಿಕೆ ಗಿಡ, ಕಾಫಿ, ಬಾಳೆ ಗಿಡಗಳನ್ನು ಧ್ವಂಸಗೊಳಿಸಿವೆ.

ಕಿರುಂದಾಡು , ಕೈಕಾಡು ಗ್ರಾಮದ ಕೆ.ಡಿ ಮೋಹನ್, ಹಂಸ, ಅಬ್ದುಲ್ಲಾ ಸೇರಿದಂತೆ ಇನ್ನಿತರರ ತೋಟಗಳÀಲ್ಲೂ ಕೃಷಿ ಗಿಡಗಳನ್ನು ಕಾಡಾನೆಗಳು ಹಾಳುಗೆಡವಿ ಭಾರೀ ನಷ್ಟ ಉಂಟಾಗಿದೆ. ಸೂಕ್ತ ಪರಿಹಾರ ನೀಡುವಂತೆ ಬೆಳೆಗಾರರು ಆಗ್ರಹಿಸಿದ್ದಾರೆ.