ಐಗೂರು, ಜೂ. ೩೦: ಸೋಮವಾರಪೇಟೆ ತಾಲೂಕು ಹಿಂದೂ ಮಲಯಾಳ ಸಮಾಜದ ೨೦೨೪ -೨೫ರ ವಾರ್ಷಿಕ ಸಭೆಯು ಜಿಲ್ಲಾಧ್ಯಕ್ಷರಾದ ವಿ.ಎಂ. ವಿಜಯ ಅವರ ಅಧ್ಯಕ್ಷತೆಯಲ್ಲಿ ಸಮಾಜದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಕಾಶ್ಮೀರದ ಪೆಹಲ್‌ಗಾಮ್‌ನಲ್ಲಿ ಭಯೋತ್ಪಾದನಾ ಘಟನೆಯಿಂದ ಮೃತಪಟ್ಟವರಿಗೆ ಸಂತಾಪ ಸೂಚಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ವಿಜಯ ಅವರು ಮಾತನಾಡಿ, ಸದೃಢ ಸಮಾಜ ನಿರ್ಮಿಸಲು ಎಲ್ಲರ ಸಹಕಾರ ಅಗತ್ಯವಾಗಿದ್ದು ಸಮಾಜ ಬಾಂಧವರು ಸಮಾಜದ ಜೊತೆ ಒಗ್ಗಟ್ಟಾಗಿ ಕೈಜೋಡಿಸಬೇಕಾಗಿದೆ ಎಂದರು. ಹಿಂದೂ ಮಲಯಾಳ ಸಮಾಜದ ಕಟ್ಟಡದ ಭೂ ಪರಿವರ್ತನೆಯ ದಾಖಲೆಗಳನ್ನು ಸರಿಪಡಿಸಲು ಸಹಕರಿಸಿದ ಹೊಸತೋಟದ ಕೆ.ಪಿ. ದಿನೇಶ್ ಅವರ ಕಾರ್ಯವನ್ನು ವಿಜಯ ಅವರು ಶ್ಲಾಘಿಸಿದರು.

೨೦೨೪-೨೫ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಕಾರುಣ್ಯ ಟಿ.ವಿ, ಚಿಂತನ್ ವಿ.ಎ. ವಿದ್ಯಾ ಲಕ್ಷಿö್ಮ ಮತ್ತು ನಿಷ್ಮ ಪಿ. ಅವರುಗಳಿಗೆ ನೆನಪಿನ ಕಾಣಿಕೆಗಳನ್ನು ನೀಡಲಾಯಿತು.

ಕಾರ್ಯಕ್ರಮದ ಕುರಿತು ಟಿ.ಕೆ. ಸುಧೀರ್, ಟಿ.ಆರ್. ವಾಸುದೇವ್ ಮಾತನಾಡಿದರು. ತಾಲೂಕು ಹಿಂದೂ ಮಲಯಾಳ ಸಮಾಜದ ಮುಂದಿನ ಸಾಲಿನ ಅಧ್ಯಕ್ಷರಾಗಿ ಸರ್ವಾನುಮತದಿಂದ ವಿ.ಎಂ. ವಿಜಯ ಅವರನ್ನು ಮರು ಆಯ್ಕೆಗೊಳಿಸಲಾಯಿತು. ಗೌರವಾಧ್ಯಕ್ಷರಾಗಿ ಪಿ.ಡಿ. ಪ್ರಕಾಶ್ ಆಯ್ಕೆಯಾದರು. ಎನ್. ಆರ್. ಅಜೀಶ್ ಕುಮಾರ್ ವಂದಿಸಿ, ಜ್ಯೋತಿ ಅರುಣ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ. ವಿಜಯ, ಉಪಾಧ್ಯಕ್ಷರಾದ ಟಿ.ಕೆ. ಸುಧೀರ್, ಪ್ರಧಾನ ಕಾರ್ಯದರ್ಶಿ ಉಣ್ಣಿಕೃಷ್ಣ, ಖಜಾಂಚಿ ಬಾಬು, ಜಿಲ್ಲಾ ಸಮಿತಿಯ ವಾಸುದೇವ, ಸೋಮವಾರಪೇಟೆ ಸಮಾಜದ ಸ್ಥಾಪಕ ಅಧ್ಯಕ್ಷ ಪಿ.ಡಿ. ಪ್ರಕಾಶ್, ಉಪಾಧ್ಯಕ್ಷ ಎನ್.ಆರ್. ಅಜೀಶ್ ಕುಮಾರ್, ಪುರುಷೋತ್ತಮ, ಪ್ರಧಾನ ಕಾರ್ಯದರ್ಶಿ ಎಂ.ಕೆ. ಮೋಹನ್, ಖಜಾಂಚಿ ದಯಾನಂದ, ಅಯ್ಯಪ್ಪ, ಮಹಿಳಾ ಅಧ್ಯಕ್ಷೆ ಅನಿತಾ ಮಾಧವನ್ ಮತ್ತು ಸಮಾಜ ಬಾಂಧವರು ಭಾಗವಹಿಸಿದ್ದರು.