ನಾಪೋಕ್ಲು, ಜೂ. ೨೯: ಇಲ್ಲಿಗೆ ಸಮೀಪದ ಎಮ್ಮೆಮಾಡು ಗ್ರಾಮ ಪಂಚಾಯಿತಿಯ ಸುಧಾರಿತ ಆಡಳಿತ ಮತ್ತು ಅಂಗನವಾಡಿ ಪೋಷಣ ಅಭಿಯಾನದಲ್ಲಿ ಉತ್ತಮ ಪ್ರಗತಿಯನ್ನು ಗುರುತಿಸಿ ಅಸ್ಸಾಂ ರಾಜ್ಯ ಸರಕಾರದ ಪ್ರತಿನಿಧಿಗಳು ಭೇಟಿ ನೀಡಿದರು.
ಅಸ್ಸಾಂ ರಾಜ್ಯ ಸರಕಾರದ ಪ್ರತಿನಿಧಿಗಳಾಗಿ ಸಬೀತಾ ರಾಥೋಡ್, ಮಲ್ಲಿಕಾ, ಪದ್ಮಜಾ ಅವರುಗಳು ಎಮ್ಮೆಮಾಡು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿಯ ಆಡಳಿತ ಸುಧಾರಣೆ ಮತ್ತು ಬಾಪೂಜಿ ಸೇವಾ ಕೇಂದ್ರದಿAದ ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳ ವಿವರ ಮತ್ತು ಗ್ರಾಮ ಪಂಚಾಯಿತಿಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪೋಷಣ ಅಭಿಯಾನದ ಸಂಬAಧಪಟ್ಟವರಿAದ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು.
ಇದಕ್ಕೂ ಮೊದಲು ಅಸ್ಸಾಂ ರಾಜ್ಯದಿಂದ ಪ್ರತಿನಿಧಿಗಳನ್ನು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಸದಸ್ಯರುಗಳು ಹಾಗೂ ಸಿಬ್ಬಂದಿ ವರ್ಗ ಸ್ವಾಗತಿಸಿಕೊಂಡರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ ಐಸಮ್ಮ, ನ್ಯಾಯ ಸಮಿತಿ ಅಧ್ಯಕ್ಷ ಗಫೂರ್, ಸದಸ್ಯರಾದ ಚೆಕ್ಕೇರ ಇಸ್ಮಾಯಿಲ್, ಟಿ.ಕೆ. ಯೂಸುಫ್, ಮಾಹಿನ್ ಕನ್ನಡಿಯಂಡ ಆಯಿಷಾ, ಪಿ.ಎ. ಹಫ್ಸತ್ ಕಂಬೇರ ಮತ್ತು ಸಿ.ಡಿ.ಪಿ.ಓ. ಸೀತಾಲಕ್ಷಿö್ಮ, ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಚಂದಕ್ಕಿ, ಕಾರ್ಯದರ್ಶಿ ಪಾರ್ವತಿ ಮತ್ತು ಶೀಲಾ ಉಪಸ್ಥಿತರಿದ್ದರು.