ಮಡಿಕೇರಿ, ಜೂ. ೨೯: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮೀಣ್ಯಂ ವನ್ಯಧಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಹಾಗೂ ನಾಲ್ಕು ಹುಲಿಮರಿಗಳ ಸಾವಿಗೆ ಅರಣ್ಯ ಇಲಾಖಾ ಹಿರಿಯ ಅಧಿಕಾರಿಗಳ ನಿರ್ಲಕ್ಷö್ಯವೇ ಕಾರಣವೆಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಆರೋಪಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಲಿ ರಾಷ್ಟಿçÃಯ ಪ್ರಾಣಿಯಾಗಿದ್ದು, ಅವುಗಳ ರಕ್ಷಣೆಗಾಗಿ ಹುಲಿ ಸಂರಕ್ಷಣಾ ಪ್ರಾಧಿಕಾರ ಇದೆ. ೧೭ ರಾಜ್ಯಗಳಲ್ಲಿ ಹುಲಿಗಳ ಸಂತತಿ ಹೆಚ್ಚಿದ್ದು, ಕರ್ನಾಟಕ ರಾಜ್ಯದಲ್ಲಿ ೫೬೩ ಹುಲಿಗಳಿದ್ದು, ೨ನೇ ಸ್ಥಾನದಲ್ಲಿದೆ. ಅಂತಹದ್ದರಲ್ಲಿ ವನ್ಯಜೀವಿ ಮೀಸಲು ಅರಣ್ಯದಲ್ಲಿ ಹುಲಿಗಳು ಸಾವಿ ಗೀಡಾಗಿರುವುದು ದುರಂತದ ಸಂಗತಿ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷö್ಯ ಕಾರಣವೆಂದು ಆರೋಪಿಸಿದರು.
ಪ್ರವಾಸಿಗರು ಅರಣ್ಯದಲ್ಲಿ ಹುಲಿಗಳನ್ನು ಕಂಡು ಖುಷಿಪಡುತ್ತಾರೆ. ಆದರೆ, ಅರಣ್ಯದ ಅಂಚಿನ ಗ್ರಾಮದಲ್ಲಿ ವಾಸಿಸುವ ಜನರು ವನ್ಯಜೀವಿ ಹಾವಳಿಯಿಂದಾಗಿ ಭಯದಿಂದ ವಾಸಿಸುವಂತಾಗಿದೆ. ಕೇಂದ್ರ, ರಾಜ್ಯ ಸರಕಾರಗಳು ಅರಣ್ಯ ಇಲಾಖೆಗೆ ಕೋಟ್ಯಾಂತರ ಹಣ ವೆಚ್ಚ ಮಾಡುತ್ತಿದೆ. ಆದರೆ, ಅಧಿಕಾರಿಗಳು ವೈಜ್ಞಾನಿಕವಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದಕ್ಕೆ ಈ ದುರ್ಘಟನೆ ಸಾಕ್ಷಿ ಎಂದು ಹೇಳಿದರು.
ಅರಣ್ಯ ರಕ್ಷಣೆ, ವನ್ಯಜೀವಿಗಳ ಸಂರಕ್ಷಣೆಗಾಗಿ ಇಲಾಖೆಗೆ ಅನುದಾನ ನೀಡಲಾಗುತ್ತದೆ. ಆದರೆ ಇಲಾಖೆ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಇಲಾಖೆಯ ಕೆಳಮಟ್ಟದ ಸಿಬ್ಬಂದಿಗಳನ್ನು ಹೊರಗುತ್ತಿಗೆಗೆ ಎಂದು ಮಾರ್ಪಡಿಸಿ ಕ್ಷಿಪ್ರ ಕಾರ್ಯಪಡೆ, ಆನೆ ಕಾರ್ಯಪಡೆ, ದಿನಗೂಲಿ ೪ಐದÀನೇ ಪುಟಕ್ಕೆ
(ಮೊದಲ ಪುಟದಿಂದ) ನೌಕರರೆಂದು ಯಾವುದೇ ತರಬೇತಿ ನೀಡದೆ ಸೇರ್ಪಡೆ ಮಾಡಿಕೊಂಡು ೨೪ ಗಂಟೆಗಳ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಮೇಲಧಿಕಾರಿಗಳು ಮನೆ ಕೆಲಸಗಳಿಗೂ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಂಕೇತ್ ದೂರಿದರು. ರಾಜ್ಯದಲ್ಲಿ ೩೨ ವನ್ಯಜೀವಿ ವಲಯ, ೫ ಹುಲಿ ಸಂರಕ್ಷಿತ ಪ್ರದೇಶಗಳಿವೆ. ಕೊಡಗು ಸೇರಿದಂತೆ ಹಾಸನ, ಚಿಕ್ಕಮಗಳೂರು, ಹೆಚ್.ಡಿ. ಕೋಟೆಗಳಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಕೂಡ ೧೩೮ ಹುಲಿಗಳಿದ್ದು, ಅವುಗಳಿಗೆ ಅರಣ್ಯದಲ್ಲಿ ಜಾಗ ಸಾಕಾಗುವುದಿಲ್ಲ. ಈ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಚಿಂತಿಸಿ ಕ್ರಮ ಕೈಗೊಳ್ಳಬೇಕಿದೆ. ೧೭ ರಾಜ್ಯಗಳಲ್ಲಿ ವನ್ಯಜೀವಿ ಹಾವಳಿಯಿಂದಾಗಿ ೫೬ ಸಾವಿರ ಮಂದಿ ಆಸ್ಪತ್ರೆಯಲ್ಲಿದ್ದಾರೆ. ಇದನ್ನು ತಡೆಯುವಲ್ಲಿ ಸರಕಾರದ ಜವಾಬ್ದಾರಿ ಇದೆ ಎಂದು ಸಂಕೇತ್ ಹೇಳಿದರು.