ವೀರಾಜಪೇಟೆ, ಜೂ. ೨೮: ಅಂತರರಾಷ್ಟಿçÃಯ ಮಾದಕ ವಸ್ತುಗಳ ವ್ಯಸನ ವಿರೋಧಿ ದಿನದಂದೇ ಪುಂಡಪೋಕರಿಗಳ ಅಡ್ಡಕ್ಕೆ ಪುರಸಭೆ ವತಿಯಿಂದ ಸಿ.ಸಿ ಕ್ಯಾಮರಾ ಅಳವಡಿಸಲಾಗಿದೆ. ಪುಂಡ ಪೋಕರಿಗಳ ಅಡ್ಡವಾಗಿದ್ದ ವೀರಾಜಪೇಟೆಯ ಗಡಿಯಾರ ಕಂಬದಿAದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ತೆರಳುವ ಕಾಲುದಾರಿಯಲ್ಲಿ ಮರ ಗಿಡಗಳು ಬೆಳೆದು ನಿಂತಿದ್ದು ಪ್ರತಿದಿನ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಚರಿಸುತ್ತಾರೆ.
ಆದರೆ ಇಲ್ಲಿ ಪ್ರತಿಯೊಬ್ಬರಿಗೂ ಕಾಣಸಿಗುವ ವಿಚಾರ ಎಂದರೆ ಪುಂಡ ಪೋಕರಿಗಳ ಸಮಸ್ಯೆ. ಇದನ್ನು ತಡೆ ಹಿಡಿಯಲು ಪೊಲೀಸ್ ಇಲಾಖೆ ಹಾಗೂ ಪುರಸಭೆ ಆಗಿನಿಂದಲೂ ಪ್ರಯತ್ನ ಮಾಡುತ್ತ ಬರುತ್ತಿತ್ತು, ಸಲ್ಪ ದಿನ ಸರಿಯಾಗುತ್ತಿತ್ತು ಮತ್ತೆ ಪ್ರಾರಂಭವಾಗುತ್ತಿತ್ತು.
ಪುರಸಭೆಯ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಈ ಸಮಸ್ಯೆಯನ್ನು ಬಗೆಹರಿಸುವ ದೃಷ್ಟಿಯಿಂದ ಸಹ ಸದಸ್ಯರೊಂದಿಗೆ ಚರ್ಚಿಸಿ ಸಿಸಿ ಕ್ಯಾಮರಾ ಅಳವಡಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.
ಇದರಿಂದ ಕಾಲುದಾರಿಯಲ್ಲಿ ನಡೆಯುವ ಪ್ರತಿ ಚಲನವಲನಗಳನ್ನು ಸೆರೆ ಹಿಡಿದು ಪುಂಡ ಪೋಕರಿಗಳ ಅಡ್ಡಕ್ಕೆ ಕಡಿವಾಣ ಹಾಕಲಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಯಾವುದೇ ಭಯವಿಲ್ಲದೆ ಸಂಚರಿಸಬಹುದು. ಸಾರ್ವಜನಿಕರು ಸಹ ಪುರಸಭೆಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸಿಸಿ ಕ್ಯಾಮರಾ ಅಳವಡಿಸುವ ಸ್ಥಳಕ್ಕೆ ಭೇಟಿ ನೀಡಿದ ಪುರಸಭೆಯ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಮಾತನಾಡಿ, ಅಂತರರಾಷ್ಟಿçÃಯ ಮಾದಕವಸ್ತುಗಳ ವ್ಯಸನಗಳ ವಿರುದ್ಧ ದಿನದಂದೇೆ ಪುರಸಭೆಯ ವತಿಯಿಂದ ಹಲವಾರು ವರ್ಷಗಳಿಂದ ಸಮಸ್ಯೆಯಾಗುತ್ತಿದ್ದ ಕಾಲುದಾರಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಎರಡು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದರಿಂದ ಅಕ್ರಮ ಚಟುವಟಿಕೆಗಳು ನಡೆಯುವುದನ್ನು ಧ್ವನಿ ಸಮೇತ ಸೆರೆ ಹಿಡಿಯಲಾಗುತ್ತದೆ.
ಪುರಸಭೆಯ ಮುಖ್ಯ ಅಧಿಕಾರಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಇದರ ನಿರ್ವಹಣೆ ಮಾಡುತ್ತಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ನಾಚಪ್ಪ, ಸದಸ್ಯರಾದ ಎಸ್.ಎಚ್. ಮತೀನ್, ಮಹಮ್ಮದ್ ರಾಫಿ, ಪುರಸಭೆಯ ಆರೋಗ್ಯ ಅಧಿಕಾರಿ ಕೋಮಲ ಸೇರಿದಂತೆ ಪುರಸಭೆಯ ಸಿಬ್ಬಂದಿಗಳು ಹಾಜರಿದ್ದರು.