ಕೂಡಿಗೆ, ಜೂ. ೨೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಸಮೀಪದಲ್ಲಿರುವ ಮಾವಿನಹಳ್ಳಿದಿಂದ ಬ್ಯಾಡಗೊಟ್ಟ ಗ್ರಾಮದವರೆಗಿನ ಗ್ರಾಮಗಳಿಗೆ ತೆರಳುವ ರಸ್ತೆ ಕೆಸರುಮಯವಾಗಿದ್ದು, ವಾಹನಗಳ ಚಾಲನೆ ಮತ್ತು ಸಾರ್ವಜನಿಕ ತಿರುಗಾಟಕ್ಕೆ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಸರಿಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಹಾರಂಗಿ ನಾಲೆ ಮೇಲಿನ ರಸ್ತೆಯು ಸರ್ವಿಸ್ ರಸ್ತೆಯಾಗಿರುವ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯಲ್ಲಿ ೫೦ಕ್ಕೂ ಹೆಚ್ಚು ಕುಟುಂಬಗಳು ಉಪ ಗ್ರಾಮಗಳಲ್ಲಿ ಇರುವುದರಿಂದ ಈ ನಾಲೆ ಮೇಲಿನ ರಸ್ತೆಯೇ ಮುಖ್ಯವಾಗಿದ್ದು ಸರಿಪಡಿಸುವಂತೆ ಗ್ರಾಮಸ್ಥರ ಒತ್ತಾಯವಾಗಿದೆ.