ವೀರಾಜಪೇಟೆ, ಜೂ. ೨೯: ವೀರಾಜಪೇಟೆ ಪೊಮ್ಮಕ್ಕಡ ಒಕ್ಕೂಟದ ೨೦೨೫-೨೬ನೇ ಸಾಲಿನ ಆಡಳಿತ ಮಂಡಳಿಯ ಮೊದಲ ಸಭೆ ಇತ್ತೀಚೆಗೆ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ತಾತಂಡ ಜ್ಯೋತಿ ಪ್ರಕಾಶ್ ಅವರು, ಬೈಲಾ ಮತ್ತು ವರ್ಷದ ಕಾರ್ಯಕ್ರಮಗಳ ಬಗ್ಗೆ ಸದಸ್ಯರ ಅಭಿಪ್ರಾಯ ಕೋರಿ ಚರ್ಚಿಸಿದರು. ಹಲವಾರು ವಿಚಾರಗಳನ್ನು, ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿ ಅದರಂತೆ ಮುಂದೆ ನಡೆಸಿಕೊಂಡು ಹೋಗುವಂತೆ ತೀರ್ಮಾನಿಸಲಾಯಿತು. ಕಾರ್ಯದರ್ಶಿ ಕುಞÂ್ಞÃರ ಚಿತ್ರಾ ಚರ್ಮಣ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ತಾತಂಡ ಯಶು ಕಬೀರ್ ಲೆಕ್ಕಪತ್ರ ಮಂಡಿಸಿದರು. ಇದೇ ಸಂದರ್ಭ ಕಳೆದ ಆಡಳಿತ ಮಂಡಳಿಯ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು.
ಮೂಕೊಂಡ ಪ್ರೀತ್ ಈರಪ್ಪ, ಮುರುವಂಡ ಉಷಾ ನೀಲಕಂಠ ಸೇರಿದಂತೆ ಸಭೆಯಲ್ಲಿ ಎಲ್ಲಾ ಸದಸ್ಯರು ಹಾಜರಿದ್ದರು.