ಮಡಿಕೇರಿ,ಜೂ.೨೭; ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ಪ್ರಮಾಣದಲ್ಲಿ ಇಂದು ಕೊಂಚ ಇಳಿಕೆ ಕಂಡು ಬಂದಿತು. ಮುಂಜಾನೆ ವೇಳೆ ಮಳೆ ಸುರಿಯುತ್ತಿತ್ತಾದರೂ ಹಗಲಿನಲ್ಲಿ ಬಿಡುವು ನೀಡುವದರೊಂದಿಗೆ ಅಲ್ಲಲ್ಲಿ ಕೆಲಕಾಲ ಸೂರ್ಯ ತನ್ನ ಮೊಗವ ತೋರುವದರೊಂದಿಗೆ ಕೊಂಚ ಬಿಸಿಲು ಕೂಡ ಕಂಡುಬAದಿತು. ಆದರೆ, ಮಧ್ಯಾಹ್ನದ ಬಳಿಕ ಎಂದಿನAತೆ ಮೋಡ ಕವಿದ ವಾತಾವರಣದೊಂದಿಗೆ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ. ಆದರೂ ಕಳೆದ ಮಳೆಯ ರಭಸಕ್ಕೆ ಅಲ್ಲಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಹಾಗೆಯೇ ಮುಂದುವರಿದಿದೆ. ಕೆಲವು ಕಡೆಗಳಲ್ಲಿ ಮನೆ, ಮರ ಬಿದ್ದು, ಮನೆಗೆ ನೀರು ನುಗ್ಗಿ ಹಾನಿ ಕೂಡ ಸಂಭವಿಸಿದೆ.

(ಮೊದಲ ಪುಟದಿಂದ) ಕಳೆದ ನಾಲ್ಕು ದಿನಗಳಿಗೆ ಹೋಲಿಕೆ ಮಾಡಿದಲ್ಲಿ ಜಿಲ್ಲೆಯಾದ್ಯಂತ ಎಲ್ಲ ಕಡೆಗಳಲ್ಲೂ ಮಳೆಯ ಪ್ರಮಾಣ ಕಡಿಮೆಯಾಗಿದೆ. ಕಳೆದ ೨೪ ಗಂಟೆಗಳಲ್ಲಿ ಹೋಬಳಿವಾರು ಸರಾಸರಿ ಮಳೆ ಪರಿಗಣನೆಗೆ ತೆಗೆದುಕೊಂಡರೆ ಶಾಂತಳ್ಳಿ ಹೋಬಳಿ ಯಲ್ಲಿ ೪.೭೨ ಅತಿ ಹೆಚ್ಚು ಮಳೆ ದಾಖಲಾಗಿದೆ. ಇನ್ನುಳಿದಂತೆ ಭಾಗಮಂಡಲ ಹೋಬಳಿಗೆ ೩.೭೪ ಇಂಚು, ನಾಪೋಕ್ಲು, ಮಡಿಕೇರಿ, ಶ್ರೀಮಂಗಲ ಹೋಬಳಿಗಳಲ್ಲಿ ೨ ಇಂಚುಗಳಿಗೂ ಅಧಿಕ ಮಳೆ ದಾಖಲಾಗಿದೆ.

ಮಡಿಕೇರಿ: ಶಾಂತಳ್ಳಿ ಹೋಬಳಿಯ ಕುಮಾರಳ್ಳಿ ಬಾಚಳ್ಳಿ ಗ್ರಾಮದ ಕುಂದಳ್ಳಿ - ಪುಷ್ಪಗಿರಿ ಸಂಪರ್ಕಿಸುವ ರಸ್ತೆಯ ಮೇಲೆ ಬರೆ ಕುಸಿದಿದ್ದು ಒಂದು ವಿದ್ಯುತ್ ಕಂಬ ಮುರಿದು ಹೋಗಿ ವಿದ್ಯುತ್ ಸಂಪರ್ಕ ಕಡಿತವಾಗಿದೆ.

ಮಡಿಕೇರಿ: ನಿಟ್ಟೂರು ಗ್ರಾಮದ ವ್ಯಾಪ್ತಿಯ ಚಿಣ್ಣರ ಹಾಡಿ ಸಂಪರ್ಕ ಸೇತುವೆ ಪಕ್ಕದಲ್ಲಿ ಬರೆ ಕುಸಿದಿದ್ದು ಈ ಕುರಿತು ಸ್ಥಳ ಪರಿಶೀಲಿಸಲಾಗಿದೆ.

ಐಗೂರು: ಗಾಳಿ ಮಳೆಗೆ ಕಾಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ತಡೆಗೋಡೆಯ ಸನಿಹದಲ್ಲಿದ್ದ, ಮರವೊಂದು ರಸ್ತೆ ಬದಿಯ ಬಸ್ ತಂಗುದಾಣದ ಸನಿಹದಲ್ಲಿ ಬಿದ್ದಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ಮರವನ್ನು ಕಡಿದು ತೆರವುಗೊಳಿಸಿದರು. ಸಿದ್ದಾಪುರ : ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ನೆಲ್ಲಿಹುದಿಕೇರಿ ಗ್ರಾಮದ ಕುಂಬಾರಗುAಡಿ ಭಾಗದ ನದಿ ತೀರದ ನಿವಾಸಿ ಸಿದ್ದ ಎಂಬವರ ಗುಡಿಸಲು ಮನೆಗೆ ನದಿ ನೀರು ನುಗ್ಗಿ ಸಮಸ್ಯೆ ಎದುರಾಗಿತ್ತು. ಈ ಹಿನ್ನಲೆಯಲ್ಲಿ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಮಾರ್ಗದರ್ಶನದಲ್ಲಿ ಗ್ರಾಮ ಆಡಳಿತ ಅಧಿಕಾರಿ ಸಚಿನ್ ಕುಲಕರ್ಣಿ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮನೆಗೋಡೆ ಕುಸಿತ

*ಗೋಣಿಕೊಪ್ಪ, ಜೂ. ೨೭: ದೇವರಪುರ ಗ್ರಾ.ಪಂ. ವ್ಯಾಪ್ತಿಯ ದೇವಮಚ್ಚಿ ಕಾಲೋನಿಯಲ್ಲಿ ವಾರದಿಂದ ಸುರಿಯುತ್ತಿರುವ ಮಳೆಗೆ ಎರಡು ಮನೆಗಳ ಗೋಡೆಗಳು ಕುಸಿದು ಬಿದ್ದಿದೆ. ಕಾಲೋನಿ ನಿವಾಸಿ ಕಾಮಾಕ್ಷಿಯವರ ಮನೆಯ ಗೋಡೆ ಶಿಥಿಲಗೊಂಡು ನೆಲಕ್ಕುರುಳಿದೆ. ಮಂಜುಳ ಅವರ ಮನೆಯ ಗೋಡೆ ಕುಸಿದು ಬಿದ್ದು ಅಪಾರ ನಷ್ಟ ಸಂಭವಿಸಿದೆ.

ಕಾಮಾಕ್ಷಿಯವರ ಮನೆಯ ಗೋಡೆ ಕುಸಿತ ಸಂದರ್ಭ ಮನೆಯೊಳಗಿದ್ದ ಕಪಾಟು, ಪಾತ್ರೆಗಳು ಮತ್ತು ಇನ್ನಿತರ ಗೃಹೋಪಯೋಗಿ ವಸ್ತುಗಳು ಹಾನಿಗೊಂಡಿದೆ. ಸ್ಥಳಕ್ಕೆ ತಿತಿಮತಿ ಗ್ರಾಮ ಲೆಕ್ಕಿಗ ಹನುಮಂತ ಭೇಟಿ ನೀಡಿ ಪರಿಶೀಲನೆ ನಡೆಸಿ ಕಂದಾಯ ಪರಿವೀಕ್ಷಕ ಮತ್ತು ತಹಶೀಲ್ದಾರ್ ರವರಿಗೆ ಮಾಹಿತಿ ನೀಡಿದ್ದಾರೆ.