ಮಡಿಕೇರಿ, ಜೂ. ೨೮: ಪ್ರಥಮ ವರ್ಷದ ೧೮ ವರ್ಷದೊಳಗಿನ ರಾಷ್ಟಿçÃಯ ಕಬಡ್ಡಿ ಚಾಂಪಿಯನ್ ಶಿಪ್ಗೆ ಕರ್ನಾಟಕ ರಾಜ್ಯ ಬಾಲಕರ ತಂಡಕ್ಕೆ ಕುಶಾಲನಗರ ಮಾರುತಿ ಬಡಾವಣೆಯ ಎಸ್.ಎಸ್. ಅಯಾಜ್ ಅಹ್ಮದ್ ಮತ್ತು ನಸರಿನ ಅಯಾಜ್ ಅವರ ಪುತ್ರ ಶೇಕ್ ಹರ್ಶ್ ಅಯಾಜ್ ಅವರು ಆಯ್ಕೆಯಾಗಿದ್ದಾರೆ. ಕಬಡ್ಡಿ ಪಂದ್ಯಾಟ ತಾ. ೨೮ ರಿಂದ ಜುಲೈ ೧ ರವರೆಗೆ ಹರಿದ್ವಾರ್ ರಾಜ್ಯದ ರಾಣಿಪುರ್ಮಾಡ ಬಳಿಯ ಪ್ರೇಮ್ನಗರ್ನಲ್ಲಿ ನಡೆಯಲಿದೆ ಎಂದು ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಕಪಿಲ್ ಕುಮಾರ್ ಬಿ.ಡಿ. ತಿಳಿಸಿದ್ದಾರೆ.