ಮಡಿಕೇರಿ, ಜೂ. ೨೭: ಕಳೆದ ವಾರ ಕಾಡಾನೆ ದಾಳಿಯಿಂದ ಪಾರಾಗಿ ಗಂಭೀರವಾದ ಗಾಯಗೊಂಡ ನಲ್ವತ್ತೇಕರೆ ನಿವಾಸಿ ಪದ್ಮನಾಭ (ಪುಪ್ಪ) ಎಂಬವರ ಪತ್ನಿ ಕವಿತ ಅವರ ಮನೆಗೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಅಲ್ಲದೆ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಅಪೋಲೊ ಆಸ್ಪತ್ರೆಗೆ ದಾಖಲಿಸಲು ಸೂಚಿಸಲಾಗುವುದು ಹಾಗೂ ಸೂಕ್ತ ಪರಿಹಾರ ನೀಡಲಾಗುವುದೆಂದು ಭರವಸೆ ನೀಡಿದರು.