ಮಡಿಕೇರಿ, ಜೂ. ೨೮: ಐತಿಹಾಸಿಕ ದೇಗುಲಗಳಾದ ಮಡಿಕೇರಿಯ ಶ್ರೀ ಓಂಕಾರೇಶ್ವರ , ಆಂಜನೇಯ ಹಾಗೂ ಕೋಟೆ ಮಹಾಗಣಪತಿ ದೇಗುಲಗಳಲ್ಲಿ ಉತ್ತಮ ಪರಿಸರ ಸಂರಕ್ಷಣೆಯೊAದಿಗೆ ಆಗಿಂದಾಗ್ಗೆ ವಿಶೇಷ ಉತ್ಸವಗಳನ್ನು ನಡೆಸಲು ಕಾರ್ಯೋನ್ಮು ಖರಾಗುವಂತೆ ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಅವರು ಈ ದೇವಾಲಯಗಳ ವ್ಯವಸ್ಥಾಪನಾ ಸಮಿತಿಯ ಪ್ರಮುಖರಿಗೆ ಸಲಹೆ ನೀಡಿದರು.
ನಿನ್ನೆ ಸಂಜೆ ದೇವಾಲಯಕ್ಕೆ ಆಗಮಿಸಿದ್ದ ಅವರು, ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ದೇವಾಲಯ ಆವರಣದ ಸುತ್ತ ಪರಿವೀಕ್ಷಣೆ ನಡೆಸಿದರು. ದೇವಾಲಯ ಆವರಣ ಭಾಗಗಳಲ್ಲಿ ಅಲ್ಲಲ್ಲಿ ನೀರು ನಿಂತಿದ್ದು, ಕೆಸರಿನಿಂದ ಆವೃತವಾದ ಪರಿಸರವನ್ನು ಗಮನಿಸಿದ ಅವರು, ದೇವಾಲಯದ ಆವರಣಗಳಲ್ಲಿ ಮುಖ್ಯವಾಗಿ ಉತ್ತಮ ಪರಿಸರಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆಯಿತ್ತರು.
ಭಕ್ತಾದಿಗಳು ಭಾವಪೂರ್ಣ ರಾಗಿ ದೇವಾಲಯಕ್ಕೆ ಆಗಮಿಸುವಾಗ ಪ್ರವೇಶ ಸಂದರ್ಭದಲ್ಲಿಯೇ ಉತ್ತಮ ಪರಿಸರವಿದ್ದರೆ, ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಅಲ್ಲದೆ, ಕೆಸರು- ಹುಲ್ಲಿನಿಂದ ಆವೃತವಾದ ಪ್ರದೇಶದಲ್ಲಿ ನೀರು ನಿಂತಿದ್ದು, ಜಾರುವ ಸನ್ನಿವೇಶವೂ ಇದ್ದು, ಅಪಾಯಕಾರಿ ಯಾಗುತ್ತದೆ ಎಂದು ಮುನ್ನೆಚ್ಚರಿಕೆಯಿತ್ತರು.
ಜೊತೆಗೆ ದೇವಾಲಯದ ಪ್ರವೇಶ ಆವರಣದಲ್ಲಿ ಉತ್ತಮ ಉದ್ಯಾನವನ್ನು ಅಭಿವೃದ್ಧಿಗೊಳಿಸುವ ಮೂಲಕ ಭಕ್ತಾದಿಗಳಿಗೆ ಹೆಚ್ಚಿನ ಮನೋಲ್ಲಾಸ ವನ್ನು ಉಂಟುಮಾಡುವAತಹ ವಾತಾವರಣವನ್ನು ಸೃಷ್ಟಿಸಬೇಕಾಗಿದೆ. ಇದೇ ಅಲ್ಲದೇ ಇಂತಹ ಐತಿಹಾಸಿಕ ದೇವಾಲಯಗಳಲ್ಲಿ ಆಗಿಂದಾಗ್ಗೆ ಉತ್ಸವಾದಿಗಳು ಜರುಗುತ್ತಿದ್ದರೆ, ಒಂದೆಡೆ ಭಕ್ತಾದಿಗಳ ಸಂಖ್ಯೆಯೂ ಹೆಚ್ಚಾಗುವುದರಿಂದ ಆದಾಯವೂ ಇಮ್ಮಡಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಶಾಸಕರ ಆಗಮನದ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಚುಮ್ಮಿ ದೇವಯ್ಯ ಹಾಗೂ ಸದಸ್ಯರುಗಳಾದ ಪ್ರಕಾಶ್ ಆಚಾರ್ಯ, ಜಿ. ರಾಜೇಂದ್ರ ಮೊದಲಾದವರು ಹಾಜರಿದ್ದರು.
ಶಾಸಕರೊಂದಿಗೆ ಕುಶಾಲನಗರದ ಮಂಜುನಾಥ್ ಗುಂಡೂರಾವ್ ಅವರು ಆಗಮಿಸಿ, ಪೂಜಾದಿಗಳಲ್ಲಿ ಪಾಲ್ಗೊಂಡರು. ಸಮಿತಿ ಸದಸ್ಯರೊಂದಿಗೆ ಮಾತನಾಡಿದ ಶಾಸಕ ಮಂತರ್ ಗೌಡ ಅವರು, ಈ ದೇವಾಲಯಗಳ ಅಭಿವೃದ್ಧಿಗೆ ರಾಜ್ಯ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳಲು ನಿಯೋಗ ತೆರಳುವಂತೆಯೂ ತಾನು ಈ ಬಗ್ಗೆ ಸಹಕರಿಸುವುದಾಗಿಯೂ ಭರವಸೆಯಿತ್ತರು. ಅಲ್ಲದೆ, ನಗರದ ಕೆಲವು ಪ್ರಮುಖ ಭಕ್ತಾದಿಗಳ ಸಭೆಯೊಂದನ್ನು ಕರೆದು ಸಲಹೆಗಳನ್ನು ಪಡೆಯುವಂತೆಯೂ ಸೂಚಿಸಿದರು.