ಮಡಿಕೇರಿ, ಜೂ. ೨೮: ನಗರದ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ವತಿಯಿಂದ ಪತ್ರಿಕಾ ವಿತರಕರಿಗೆ ಜರ್ಕಿನ್ ವಿತರಿಸಲಾಯಿತು.

ಈ ವೇಳೆ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ರಾಜೇಶ್ ಕುಮಾರ್ ಮಾತನಾಡಿ, ಪತ್ರಿಕಾ ವಿತರಕರಿಗೆ ಬ್ಯಾಂಕ್‌ನಿAದ ಸಿಗುವ ಸೌಲಭ್ಯಗಳ ಕುರಿತು ಹಾಗೂ ವಿಮಾ ಪಾಲಿಸಿಗಳ ಕುರಿತು ಅರಿವು ಮೂಡಿಸಿದರು.

ಪ್ರಾದೇಶಿಕ ವ್ಯವಸ್ಥಾಪಕರುಗಳಾದ ಜಯಶ್ರೀ, ಕುಮಾರ್ ಬಾಬು, ಎಂ.ಎಸ್. ಪ್ರತಿಭಾ, ಮಡಿಕೇರಿ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಟಿ.ಜಿ. ಸತೀಶ್, ನಿರ್ದೇಶಕ ಪ್ರಸಾದ್ ಇದ್ದರು.