ಶನಿವಾರಸಂತೆ, ಜೂ. ೨೫: ಇಲ್ಲಿನ ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆಯೂರು ಗ್ರಾಮದ ಸಾರ್ವಜನಿಕರು ಸೋಮವಾರ ಕೊಟೆಯೂರು ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿದ್ದ ಕಳೆ ಗಿಡಗಳನ್ನು ತೆಗೆದು ಶ್ರಮದಾನ ನಡೆಸಿದರು.
ಸೋಮವಾರಪೇಟೆ ಶನಿವಾರಸಂತೆ ಮುಖ್ಯರಸ್ತೆ ಮಳೆಗಾಲದಲ್ಲಿ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಅಡಚಣೆಯಾದ ಸಂದರ್ಭದಲ್ಲಿ ಬದಲಿ ರಸ್ತೆಯಾಗಿ ಕೋಟೆಯೂರು, ಹಣಸೆ, ಈಚಲ ಬೀಡು ಮಾರ್ಗವಾಗಿ ಶನಿವಾರಸಂತೆ ತಲುಪಲು ಪರ್ಯಾಯ ರಸ್ತೆಯಾಗಿದೆ. ರಸ್ತೆಯ ಕೆಲವು ಕಡೆಯಲ್ಲಿ ಗುಂಡಿಗಳಾಗಿದ್ದವು. ಆ ಗುಂಡಿಗೆ ಮಣ್ಣು ಹಾಕಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಬಸವನಕೊಪ್ಪ ಸೇತುವೆ ತಡೆಗೋಡೆ ಸಂಪೂರ್ಣವಾಗಿ ಕಾಡು ಬೆಳೆದಿತ್ತು. ಸೇತುವೆ ಸಮೀಪ ತಿರುವು ರಸ್ತೆ ಇದ್ದಿದ್ದರಿಂದ ಸಂಚಾರ ಮಾಡುವ ವಾಹನಗಳ ಚಾಲಕರಿಗೆ ಎದುರು ಬರುವ ವಾಹನಗಳಿಗೆ ಕಾಣದಂತಿತ್ತು. ಗ್ರಾಮಸ್ಥರು ಸೇರಿ ಕಳೆ ಗಿಡಗಳನ್ನು ಕಡಿದ್ದು ಮುಂದೆ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಶ್ರಮದಾನ ನಡೆಸಿದರು.
ಈ ವೇಳೆ ಕೋಟೆಯುರು ಗ್ರಾಮದ ಅಧ್ಯಕ್ಷ ಸುರೇಶ್, ಗ್ರಾಮಸ್ಥರಾದ ಉದಯ, ಭರತ್, ನಿತಿನ್, ಲೋಕೇಶ್, ನವೀನ್ ಅಜಳ್ಳಿ, ಮತ್ತಿತರರು ಶ್ರಮಾದಾನದಲ್ಲಿ ಭಾಗವಹಿಸಿದ್ದರು.