ವೀರಾಜಪೇಟೆ, ಜೂ. ೨೫: ಕೊಡಗಿನ ಕವಿ, ಬರಹಗಾರ, ಕೊಡಗು ಜಿಲ್ಲಾ ದಸಾಪ ಅಧ್ಯP್ಷÀ ಅರ್ಜುನ್ ಮೌರ್ಯ ಅವರ ಸಾಹಿತ್ಯ ಸೇವೆ ಗುರುತಿಸಿ ೨೦೨೫ರ ರಾಷ್ಟçಮಟ್ಟದ "ಇಂಡಿಯನ್ ಐಕಾನಿಕ್ ಆಥರ್ -೨೦೨೫" ಅವಾರ್ಡ್ ಅನ್ನು "ಪ್ರೆöÊಡ್ ಇಂಡಿಯಾ ಅವಾರ್ಡ್ ಸಂಸ್ಥೆಯು ನೀಡಿ ಗೌರವಿಸಿತು. ಹೈದರಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಬಾಲಿವುಡ್ ತಾರೆ ಕಾವ್ಯ ತಾಪರ್ ಹಾಗೂ ಪ್ರೆöÊಡ್ ಇಂಡಿಯಾ ಅವಾರ್ಡ್ ಸಂಸ್ಥೆಯ ಸಿ.ಇ.ಓ. ವಿನಯ್ ಕುಮಾರ್ ಅವರು ಅರ್ಜುನ್ ಮೌರ್ಯ ಅವರಿಗೆ ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು. ಇತ್ತೀಚೆಗಷ್ಟೇ ಅರ್ಜುನ್ ಮೌರ್ಯ ಅವರ "ಬೆಂದೊಡಲ ಕುಣಿತ" ಕಾವ್ಯ ಸಂಕಲನ ಬಿಡುಗಡೆಗೊಂಡಿತ್ತು.
ಅರ್ಜುನ್ ಮೌರ್ಯ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ವೀರಾಜಪೇಟೆ ಸೈಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ಭಾಷಾ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.