ಮಡಿಕೇರಿ, ಜೂ. ೨೫: ಸೋಷಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಡಿಕೇರಿ ನಗರ ಸಮಿತಿ ವತಿಯಿಂದ ಪಕ್ಷದ ಸಂಸ್ಥಾಪನಾ ದಿನಾಚರಣೆಯನ್ನು ಪಕ್ಷದ ಜಿಲ್ಲಾ ಕಚೇರಿ ಆವರಣದಲ್ಲಿ ಆಚರಿಸಲಾಯಿತು.
ಎಸ್.ಡಿ.ಪಿ.ಐ. ಅಪರ ಜಿಲ್ಲಾಧ್ಯಕ್ಷÀ ಮನ್ಸೂರ್ ಅಲಿ ಮತ್ತು ನಗರಾಧ್ಯಕ್ಷÀ ರಿಜ್ವಾನ್ ಅಹಮ್ಮದ್ ಜಂಟಿಯಾಗಿ ಧ್ವಜಾರೋಹಣ ನೆರವೇರಿಸಿದರು. ಪ್ರಾಸ್ತಾವಿಕವಾಗಿ ಮಡಿಕೇರಿ ನಗರಾಧ್ಯಕ್ಷರು ಮಾತನಾಡಿದರು. ಅಪರ ಜಿಲ್ಲಾಧ್ಯಕ್ಷ ಮನ್ಸೂರ್ ಅಲಿ ಸಂದೇಶ ಭಾಷಣ ಮಾಡಿದರು. ಜಿಲ್ಲಾ ಕಾರ್ಯದರ್ಶಿ ಬಷೀರ್ ಅಹಮದ್ ದಿನದ ಮಹತ್ವವನ್ನು ವಿವರಿಸಿ, ಮಾತನಾಡಿದರು. ನಗರ ಸಹ ಕಾರ್ಯದರ್ಶಿ ಇಬ್ರಾಹಿಂ ಸ್ವಾಗತಿಸಿ, ನಗರ ಕಾರ್ಯದÀರ್ಶಿ ಉಬೈದ್ ಕಾರ್ಯಕ್ರಮವವನ್ನು ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಜಲೀಲ್ ಅಹ್ಮದ್, ಜಿಲ್ಲಾ ನಾಯಕರು, ನಗರ ಸಮಿತಿ ಪದಾಧಿಕಾರಿಗಳು, ಬ್ರಾö್ಯಂಚ್ ಪದಾಧಿಕಾರಿಗಳು, ವಿಮೆನ್ ಇಂಡಿಯಾ ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರು ಹಾಜರಿದ್ದರು.