ಮಡಿಕೇರಿ, ಜೂ. ೨೪: ಗೃಹಲಕ್ಷಿö್ಮ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.೨ ಸಾವಿರಗಳನ್ನು ಅವರ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರ ನಗದು ಜಮೆ ಮಾಡಲಾಗುತ್ತಿದೆ. ಇದುವರೆಗೂ ೧,೨೦,೬೪೧ ಫಲಾನುಭವಿಗಳು ನೊಂದಾಯಿಸಿಕೊAಡಿದ್ದು, ಏಪ್ರಿಲ್-೨೦೨೫ರ ಅಂತ್ಯಕ್ಕೆ ೧,೧೬,೭೭೨ ಫಲಾನುಭವಿಗಳಿಗೆ ರೂ.೨೩,೩೫,೪೪,೦೦೦ ಹಣ ಪಾವತಿಯಾಗಿದೆ. ಆಗಸ್ಟ್ ೨೦೨೩ ರಿಂದ ಮೇ-೨೦೨೫ರವರೆಗೆ ಒಟ್ಟು ರೂ. ೪೪೧,೬೦,೪೮,೦೦೦ ಹಣ ಪಾವತಿಯಾಗಿದೆ. (ಪ್ರಧಾನ ಕಚೇರಿಯಿಂದ ಫೆಬ್ರವರಿ-೨೦೨೫ ಮತ್ತು ಮಾರ್ಚ್-೨೦೨೫ ಮಾಹೆಯ ಹಣ ಪಾವತಿ ಬಾಕಿ ಉಳಿದಿರುತ್ತದೆ). ಮೇ-೨೦೨೫ರ ಅಂತ್ಯಕ್ಕೆ ೭೧,೫೫೧ ಫಲಾನುಭವಿಗಳ ಖಾತೆಗೆ ಹಣ ಪಾವತಿಯಾಗಿದ್ದು ಉಳಿದ ಫಲಾನುಭವಿಗಳಿಗೆ ಹಣ ಪಾವತಿ ಪ್ರಕ್ರಿಯೆ ಚಾಲನೆಯಲ್ಲಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.