ಕೂಡಿಗೆ, ಜೂ. ೨೪: ಕೂಡಿಗೆ ಯಲ್ಲಿರುವ ಯೂನಿಯನ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ನಿರುದ್ಯೋಗಿ ಯುವಕ, ಯುವತಿಯರಿಗೆ ಉಚಿತವಾಗಿ ಸ್ವ ಉದ್ಯೋಗ ತರಬೇತಿಯನ್ನು ಮುಂದಿನ ಮೂರು ತಿಂಗಳವರೆಗೆ ವಿವಿಧ ವಿಭಾಗದಲ್ಲಿ ನೀಡಲಾ ಗುವುದು ಎಂದು ಸಂಸ್ಥೆಯ ನಿರ್ದೇಶಕ ಚಂದ್ರಶೇಖರ್ ತಿಳಿಸಿದ್ದಾರೆ.
ತರಬೇತಿಯಲ್ಲಿ ಆಹಾರ ತಯಾರಿಸುವ ಉದ್ಯಮ ಬ್ಯೂಟಿ ಪಾರ್ಲರ್, ಸೇರಿದಂತೆ ಸ್ವ ಉದ್ಯೋಗಕ್ಕೆ ಸಂಬAಧಿಸಿದ ತರಬೇತಿಯನ್ನು ನೀಡಲಾಗುತ್ತದೆ ೧೮ ರಿಂದ ೪೫ ವರ್ಷ ವಯೋಮಿತಿ ಯೊಳಗಿನ ಯುವಕ-ಯುವತಿಯರು ತರಬೇತಿಯನ್ನು ಪಡೆಯಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ೯೬೮೬೪೦೬೧೮೧, ೮೬೧೮೪೭೧೮೦೧ ಸಂಪರ್ಕಿಸಬಹುದಾಗಿದೆ.