ಚೆಯ್ಯಂಡಾಣೆ, ಜೂ. ೨೪: ಎಸ್.ವೈ.ಎಸ್. ಕೊಡಗು ಜಿಲ್ಲಾ ಸಮಿತಿ ವತಿಯಿಂದ ಕೊಂಡAಗೇರಿ ಯಲ್ಲಿ ಇಗ್ನೆöÊಟ್ ಮೀಟ್ ಲೀಡರ್ಸ್ ಕ್ಯಾಂಪ್ ನಡೆಯಿತು.
ಕೊಂಡAಗೇರಿಯ ಶಾದಿ ಮಹಲ್ ಸಭಾಂಗಣದಲ್ಲಿ ಎಸ್.ವೈ.ಎಸ್. ಕೊಡಗು ಜಿಲ್ಲಾಧ್ಯಕ್ಷ ಮುನೀರ್ ಮಹ್ಳರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್.ವೈ.ಎಸ್. ರಾಜ್ಯ ಸಮಿತಿಯ ನೇತಾರ ಅಹ್ಮದ್ ಮದನಿ ಉದ್ಘಾಟಿಸಿದರು.
ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಬಷೀರ್ ಸಅದಿ ಬೆಂಗಳೂರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಸಂಘಟನೆಯಿAದಾಗುವ ಪ್ರಯೋಜನ ಹಾಗೂ ಕೊಡಗು ಜಿಲ್ಲಾ ಸಮಿತಿ ಆಯೋಜಿಸಿರುವ ಇಗ್ನೆöÊಟ್ ಮೀಟ್ ನಿಜಕ್ಕೂ ಶ್ಲಾಘನೀಯವಾದ ಕಾರ್ಯಕ್ರಮ ಎಂದರು.
ಎಸ್.ವೈ.ಎಸ್. ರಾಜ್ಯ ಸಮಿತಿಯ ಉಪಾಧ್ಯಕ್ಷ ಸಯ್ಯದ್ ಇಲ್ಯಾಸ್ ಅಲ್ ಹೈದ್ರೊಸಿ ತಂಙಳ್ ಶುಭ ಹಾರೈಸಿ ಮಾತನಾಡಿದರು. ನಂತರ ತರಗತಿಗೆ ಜಿ.ಎಂ. ಮೊಹಮ್ಮದ್ ಖಾಮಿಲ್ ಸಖಾಫಿ ಹಾಗೂ ರಶೀದ್ ಮಾಸ್ಟರ್ ನರಿಕ್ಕೋಡ್ ನೇತೃತ್ವ ನೀಡಿ ಸಂಘಟನೆ ಮತ್ತು ಅದರ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಮಖಾಂ ಝಿಯಾರತ್‌ಗೆ ಕೊಂಡAಗೇರಿ ಜುಮಾ ಮಸೀದಿಯ ಖತೀಬ್ ಹಾಫೀಝ್ ಆಸೀಫ್ ಸಖಾಫಿ ನೇತೃತ್ವ ವಹಿಸಿದ್ದರು.
ಈ ಸಂದರ್ಭ ಮುಖ್ಯ¸್ಥÀ ಕುಂಞಅಹ್ಮದ್ ಮುಸ್ಲಿಯಾರ್, ಕೊಂಡAಗೇರಿ ಸುನ್ನಿ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಪಿ.ಇ. ಶಾದುಲಿ, ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ, ಕೋಶಾಧಿಕಾರಿ ಕರೀಂ ಹಾಜಿ, ಎಸ್.ವೈ.ಎಸ್. ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್, ಕೋಶಾಧಿಕಾರಿ ಶರೀಫ್ ಮಾಸ್ಟರ್, ಎಸ್. ಎಸ್.ಎಫ್. ಪ್ರಧಾನ ಕಾರ್ಯದರ್ಶಿ ಜುನೈದ್, ಎಸ್.ವೈ.ಎಸ್. ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಝೋನ್ ಸಮಿತಿಯ ಪದಾಧಿಕಾರಿಗಳು, ಸರ್ಕಲ್ ಸಮಿತಿಯ ಪದಾಧಿಕಾರಿಗಳು ಹಾಗೂ ಯೂನಿಟ್ ಸಮಿತಿಯ ಪಿ.ಎಸ್.ಟಿ.ಗಳು ಪಾಲ್ಗೊಂಡಿದ್ದರು. ಷಂಶುದ್ದೀನ್ ಅಂಜ್ಜದಿ ಕಾರ್ಯಕ್ರಮ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಸ್ವಾಗತಿಸಿ, ಹನೀಫ್ ರಹ್ಮಾನಿ ವಂದಿಸಿದರು.