ಗೋಣಿಕೊಪ್ಪಲು, ಜೂ. ೨೧: ಅರಣ್ಯ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಸಾರ್ವಜನಿಕರ ದೂರು ಬಂದ ಕೂಡಲೇ ಪರಸ್ಪರ ಹೊಂದಾಣಿಕೆಯ ಮೂಲಕ ಕರ್ತವ್ಯ ನಿರ್ವಹಿಸಬೇಕು ಇದರಿಂದ ಸಾರ್ವಜನಿಕರ ಸಮಸ್ಯೆಗೆ ಕೂಡಲೇ ಸ್ಪಂದಿಸುವ ಕೆಲಸವಾಗುತ್ತದೆ ಎಂದು ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಹೇಳಿದರು.

ದ.ಕೊಡಗಿನ ಕೋತೂರು ಬಳಿಯ ಮಹಾದೇವರ ದೇವಾಲಯದ ಆವರಣದ ಸಭಾಂಗಣದಲ್ಲಿ ಶ್ರೀಮಂಗಲ, ಪೊನ್ನಂಪೇಟೆ ಹಾಗೂ ನಾಗರಹೊಳೆ ವಲಯ ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.

ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಲಿ ಹಾಗೂ ಕಾಡಾನೆಗಳ ಉಪಟಳ ಇರುವ ಹಿನ್ನೆಲೆಯಲ್ಲಿ ಗ್ರಾಮಸ್ಥರೊಂದಿಗೆ ಇಲಾಖೆಯ ಸಿಬ್ಬಂದಿಗಳು ಹೊಂದಾಣಿಕೆಯ ಮೂಲಕ ಕೆಲಸ ನಿರ್ವಹಿಸಬೇಕು, ಅರಣ್ಯ ವ್ಯಾಪ್ತಿಯ ವಿಚಾರದಲ್ಲಿ ಯಾರಿಗೂ ಗೊಂದಲ ಬೇಡ ಹುಲಿ ಹಾಗೂ ಕಾಡಾನೆ ತೊಂದರೆ ವಿಷಯ ತಿಳಿದೊಡನೆ ಮೂರು ವಲಯಗಳ ಅಧಿಕಾರಿಗಳು ಒಟ್ಟು ಸೇರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಇಂದಿನಿAದಲೇ ಆಗಬೇಕು ಎಂದು ಸೂಚಿಸಿದರು.

ಕಳೆದೆರಡು ದಿನಗಳಿಂದ ಕೋತೂರು ಭಾಗದಲ್ಲಿ ಹುಲಿಯ ಘರ್ಜನೆ ಹಾಗೂ ಹೆಜ್ಜೆ ಗುರುತು ಪತ್ತೆಯಾದ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿಗಳು ಕೂಂಬಿAಗ್ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಹುಲಿಯ ಸಂಚಾರದ ಹಾಗೂ ಚಲನವಲನಗಳನ್ನು ವೀಕ್ಷಣೆ ಮಾಡುವ ಸಲುವಾಗಿ ಹಲವೆಡೆ ಕ್ಯಾಮರಾ ಅಳವಡಿಕೆ ಮಾಡಲು ಮೇಲ್ವಿಚಾರಣೆ ಮಾಡುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಕಾರ್ಯಾಚರಣೆ ವೇಳೆ ಬೇಕಾದ ಪರಿಕರಗಳನ್ನು ನೀಡುವ ಸಲುವಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿದ್ದ ಪ್ರಮುಖರು ಪ್ರಸ್ತಾಪ ಸಲ್ಲಿಸಿದರು.

ಈ ಬಗ್ಗೆ ಸಂಬAಧಿಸಿದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ಸಂಕೇತ್ ಪೂವಯ್ಯ ನೀಡಿದರು.

ಕಾನೂರು ವಲಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಮೇಶ್, ಕಾಂಗ್ರೆಸ್ ಪಕ್ಷದ ಮುಖಂಡ ಸಿದ್ದು ನಾಚಪ್ಪ, ಗ್ರಾ.ಪಂ. ಮಾಜಿ ಸದಸ್ಯ ಕೆ.ಆರ್. ಸುರೇಶ್ ಸಲಹೆಗಳನ್ನು ನೀಡಿದರು.

ಸಭೆಯಲ್ಲಿ ನಾಗರಹೊಳೆ ವಲಯ ಅರಣ್ಯ ಅಧಿಕಾರಿ ಮಂಜುನಾಥ್, ಶ್ರೀಮಂಗಲ ವಲಯ ಅರಣ್ಯ ಅಧಿಕಾರಿ ಅರವಿಂದ್, ಪೊನ್ನಂಪೇಟೆ ವಲಯದ ಡಿಆರ್‌ಎಫ್‌ಒ ಮಂಜು ನಾಥ್ ಸೇರಿದಂತೆ ಮೂರು ವಲಯ ಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.