ಚೆಯ್ಯಂಡಾಣೆ, ಜೂ. ೨೧: ನಾಪೋಕ್ಲುವಿನ ಎಸ್.ಎನ್.ಡಿ.ಪಿ. ಶಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಕೊಡೆಗಳನ್ನು ವಿತರಿಸಲಾಯಿತು. ನಾಪೋಕ್ಲುವಿನ ಶ್ರೀರಾಮ ಮಂದಿರದ ಶ್ರೀ ಗುರು ಪೊನ್ನಪ್ಪ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಎಸ್.ಎನ್.ಡಿ.ಪಿ. ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಿಷಾ ಸುರೇಂದ್ರನ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಎಲ್.ಕೆ.ಜಿ.ಯಿಂದ ಪದವಿಪೂರ್ವ ಕಾಲೇಜಿನವರೆಗೆ ವ್ಯಾಸಂಗ ಮಾಡುತ್ತಿರುವ ಎಸ್.ಎನ್.ಡಿ.ಪಿ. ನಾಪೋಕ್ಲು ಶಾಖೆಯ ಸದಸ್ಯರ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಕೊಡೆಗಳನ್ನು ವಿತರಿಸಲಾಯಿತು. ಇದೇ ಸಂದರ್ಭ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಘದ ಸದಸ್ಯೆ ವಿಲಾಸಿನಿ ಅವರ ಚಿಕಿತ್ಸೆಗಾಗಿ ೫೮ ಸಾವಿರ ರೂಪಾಯಿಗಳ ಧನ ಸಹಾಯವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭ ಎಸ್.ಎನ್.ಡಿ.ಪಿ. ಜಿಲ್ಲಾ ಮಹಿಳಾ ಘಟಕದ ನಿರ್ದೇಶಕಿ ಬಬಿತ, ನಾಪೋಕ್ಲು ಶಾಖೆಯ ಅಧ್ಯಕ್ಷ ಟಿ.ಸಿ. ಲವ, ಕಾರ್ಯದರ್ಶಿ ಕಿಶೋರ್, ಎಸ್.ಎನ್.ಡಿ.ಪಿ. ಜಿಲ್ಲಾ ನಿರ್ದೇಶಕ ಟಿ.ಸಿ. ರಾಜೀವನ್, ನಾಪೋಕ್ಲು ಶ್ರೀ ಪೊನ್ನು ಮುತ್ತಪ್ಪ ದೇವಾಲಯದ ಅಧ್ಯಕ್ಷ ಎ.ಕೆ. ಚಂದ್ರನ್, ನಾಪೋಕ್ಲು ಶಾಖೆಯ ಸಹ ಕಾರ್ಯದರ್ಶಿ ಅಜಿತ್, ಉಪಾಧ್ಯಕ್ಷ ತಂಗನ್, ಹರಿದಾಸ್, ಸಂಘಟನಾ ಕಾರ್ಯದರ್ಶಿ ರಿತೇಶ್, ಮನೋಹರ, ಕೋಶಾಧಿಕಾರಿ ಸುದೀಶ್ ಉಪಸ್ಥಿತರಿದ್ದರು.