ಮಡಿಕೇರಿ, ಜೂ. ೨೧: ಗೃಹ ಸಚಿವಾಲಯದ ನಾಗರಿಕ ರಕ್ಷಣಾ ನಿರ್ದೇಶನಾಲಯವು ಮಾಜಿ ಸೈನಿಕರನ್ನು ನಾಗರಿಕರ ರಕ್ಷಣೆಗೆ ಭರ್ತಿ ಮಾಡಲು ನಿರ್ದೇಶಿಸಿದೆ.

ನೋಂದಣಿ ಪ್ರಕ್ರಿಯೆಯನ್ನು ಸುಗಮಗೊಳಿಸಲು (ಡಿಜಿಸಿಡಿ, ಎಂಎಚ್‌ಎ) ಜಾಲತಾಣ ತಿತಿತಿ ಛಿiviಟಜeಜಿeಟಿಛಿeತಿಚಿಡಿಡಿioಡಿs. gov.iಟಿ ವನ್ನು ಅನಾವರಣಗೊಳಿಸಿದ್ದು, ಇಚ್ಚೆ ಇರುವ ಮಾಜಿ ಸೈನಿಕರು ಜಾಲತಾಣದಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.