ಮಡಿಕೇರಿ, ಜೂ. ೨೧: ಪ್ರಸಕ್ತ (೨೦೨೫-೨೬) ಸಾಲಿಗೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆ, ಕಾಲೇಜು, ಕ್ಯಾತೆ ಗ್ರಾಮ, ಕೊಡ್ಲಿಪೇಟೆ, ಸೋಮವಾರಪೇಟೆ ತಾಲೂಕು, ಕೊಡಗು ಜಿಲ್ಲೆ ಇಲ್ಲಿಗೆ ವಿಜ್ಞಾನ ವಿಭಾಗದ ಭೌತಶಾಸ್ತç (೦೧ ಹುದ್ದೆ) ಮತ್ತು ರಸಾಯನಶಾಸ್ತç (೦೧ ಹುದ್ದೆ) ವಿಷಯಗಳಿಗೆ ಅತಿಥಿ ಉಪನ್ಯಾಸಕರ ಸೇವೆಯನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯನ್ನು ತಾ.೨೭ ರೊಳಗೆ ಸಲ್ಲಿಸಬಹುದು (ವಸತಿ ಹಾಗೂ ಊಟದ ಸೌಲಭ್ಯ ಒದಗಿಸಲಾಗುವುದು). ವೇತನ ಶ್ರೇಣಿ ರೂ.೧೮,೧೫೦. ಎಂಎಸ್ಸಿ, ಬಿ.ಇಡಿ ವಿದ್ಯಾರ್ಹತೆ ಹೊಂದಿರಬೇಕು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಮೌಲಾನಾ ಆಜಾದ್ ಭವನ, ಎಫ್.ಎಂ.ಸಿ. ಕಾಲೇಜು ಹತ್ತಿರ, ಮಡಿಕೇರಿ, ಕಚೇರಿ ದೂ.ಸಂ. ೦೮೨೭೨-೨೨೫೫೨೮, ೯೬೮೬೧೩೮೬೮೮ ಹಾಗೂ ಪ್ರಾಂಶುಪಾಲರು, ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ, ಖ್ಯಾತೆ ಗ್ರಾಮ, ಕೊಡ್ಲಿಪೇಟೆ, ಸೋಮವಾರಪೇಟೆ ತಾಲೂಕು ದೂ.ಸಂ. ೭೬೭೬೪೭೩೭೬೭ ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಆರ್. ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.