ಮಡಿಕೇರಿ, ಜೂ. ೨೦: ಸಂಸತ್‌ನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ಮಡಿಕೇರಿಯ ಜಿಲ್ಲಾಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿ.ಜಿ. ಮೋಹನ್ ಅವರ ನೇತೃತ್ವದಲ್ಲಿ ರೋಗಿಗಳನ್ನು ಭೇಟಿಯಾದ ಪಕ್ಷದ ಪ್ರಮುಖರು ಆರೋಗ್ಯ ವಿಚಾರಿಸಿ ಹಣ್ಣು ಹಂಪಲು ವಿತರಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ಡಿಸಿಸಿ ಸದಸ್ಯರಾದ ಖಲೀಲ್ ಬಾಷ, üಹಬೀಬ್, ಅರ್ಜುನ್, ಸೂರ್ಯ, ಕಿರಣ್, ಮೊಹಮ್ಮದ್ ಕೌಸರ್, ಕವನ್, ದಿನೇಶ್, ಹಜೀಜ್, ಜಾನ್ಸನ್ ಪಿಂಟೋ, ಮೋಹನ್ ಮೌರ್ಯ, ಸುಬ್ರಮಣಿ ಮತ್ತಿತರ ಪ್ರಮುಖರು ಹಾಗೂ ಕಾರ್ಯಕರ್ತರು ಹಾಜರಿದ್ದರು.