ಸಿದ್ದಾಪುರ, ಜೂ ೨೦: ಮರದ ಕೊಂಬೆಗಳನ್ನು ಕಡಿಯುತ್ತಿದ್ದ ಸಂದರ್ಭ ಮರದ ಮೇಲಿನಿಂದ ಬಿದ್ದು ಕಾರ್ಮಿಕ ನೋರ್ವ ಸಾವನ್ನ ಪ್ಪಿರುವ ಘಟನೆ ನೆಲ್ಲಿ ಹುದಿಕೇರಿ ಗ್ರಾಮದ ಬೆಟ್ಟದ ಕಾಡುವಿನಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ಬೆಂಗಳೂರಿನಲ್ಲಿ ನೆಲೆಸಿರುವ ಮಹೇಶ್ ಎಂಬವರಿಗೆ ಸೇರಿದ ನೆಲ್ಲಿಹುದಿಕೇರಿ ಬೆಟ್ಟದ ಕಾಡುವಿನಲ್ಲಿ ಇರುವ ಕಾಫಿ ತೋಟದಲ್ಲಿ ಮರ ಕಸಿ ಮಾಡುತ್ತಿದ್ದ ಸಂದರ್ಭ ಪಿರಿಯಾಪಟ್ಟಣ ತಾಲೂಕಿನ ಮುತ್ತೂರು ಕಾಲೋನಿಯ ರಾಜೀವ್ ಗ್ರಾಮ ನಿವಾಸಿ ದಿನೇಶ್ (೫೫) ಎಂಬ ಕಾರ್ಮಿಕ ಮರದ ಮೇಲಿನಿಂದ ಬಿದ್ದು ಗಂಭೀರ ಗಾಯ ಗೊಂಡಿದ್ದರು. ಕೂಡಲೇ ಜೊತೆಗಿದ್ದ ಇತರ ಕಾರ್ಮಿಕರು ಗಾಯಾಳು ವನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆಂದು ಕರೆತರುವಷ್ಟçರಲ್ಲಿ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯ ಸಂಬAಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ದಿನೇಶ್ ಅವರ ಮೃತದೇಹವನ್ನು ಸಿದ್ದಾಪುರದ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.