ಚೆಟ್ಟಳ್ಳಿ, ಜೂ. ೨೦: ಕೇಂದ್ರ ಸಾಹಿತ್ಯ ಅಕಾಡೆಮಿಯು ೨೦೨೫ನೇ ಸಾಲಿನ ಪ್ರತಿಷ್ಠಿತ ಯುವ ಪುರಸ್ಕಾರ ಹಾಗೂ ಬಾಲ ಸಾಹಿತ್ಯ ಪುರಸ್ಕಾರವನ್ನು ಪ್ರಕಟಿಸಿದ್ದು, ಕೊಡಗಿನ ಅಮ್ಮತ್ತಿಯ ಮೂಕೋಂಡ ನಿತಿನ್ ಕುಶಾಲಪ್ಪ ಸೇರಿದಂತೆ ಮೂವರು ಕನ್ನಡಿಗರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ದೇಶದ ವಿವಿಧ ಭಾಷೆಗಳ ಒಟ್ಟು ೨೩ ಲೇಖಕರು ಯುವ ಪುರಸ್ಕಾರಕ್ಕೆ ಭಾಜನರಾಗಿದ್ದು ನಿತಿನ್ ಕುಶಾಲಪ್ಪ ಎಂ.ಪಿ. ಅವರ ದಕ್ಷಿಣ್ ಸೌಥ್ ಇಂಡಿಯನ್ ಫೇಬಲ್ಸ್ ರೀಟೋಲ್ಡ್' ಕಥಾಸಂಕಲನಕ್ಕೆ ಇಂಗ್ಲಿಷ್' ವಿಭಾಗದಲ್ಲಿ ಬಾಲ ಸಾಹಿತ್ಯ ಪುರಸ್ಕಾರ ದೊರಕಿದೆ. ಪ್ರಶಸ್ತಿ ಪುರಸ್ಕೃತರು ೫೦ ಸಾವಿರ ನಗದು ಹಾಗೂ ಫಲಕಗಳನ್ನು ಪಡೆಯಲಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ನಿತಿನ್ ಅಮ್ಮತ್ತಿಯ ಮೂಕೋಂಡ ಪೂಣಚ್ಚ ಹಾಗೂ ಪುಷ್ಪ ದಮಯಂತಿ ದಂಪತಿ ಪುತ್ರ ದಿ. ಅರ್ಲಿ ಕೂರ್ಗ್ಸ್, (೨೦೧೩), ಲಾಂಗ್ ಆಗೋ ಇನ್ ಕೂರ್ಗ್ (೨೦೧೩), ಕೊಡವ ಮಕ್ಕಡ ಕೂಟದ ವತಿಯಿಂದ ೧೭೮೫ ಕೂರ್ಗ್, (ಟಿಪ್ಪು ಡೈರಿ), (೨೦೧೮), ಕೊಡಗು ಪ್ರಿನ್ಸಿಪಾಲಿಟಿ ಬ್ರಿಟಿಷ್ ಎಂಪೈರ್, (೨೦೧೮), ದಿ ಮೇಜರ್ ಹೂ ಕೆಪ್ಟ್ ಹಿಸ್ ಕೂಲ್ ಡ್ರಿಂಕ್ಸ್ (೨೦೧೯), ದಿ ಹೌಸ್ ಆಫ್ ಅವಧ್, ಬಿಗ್‌ಫೂಟ್ ಪಬ್ಲಿ ಕೇಶನ್ಸ್, (೨೦೧೯), ದಿ ಗಾಂಧಿ ಆಫ್ ಕೊಡಗು (೨೦೨೦) ದಕ್ಷಿಣ್ : ಸೌತ್ ಇಂಡಿಯನ್ ಮೈತ್ಸ್ ಅಯಿಂಡ್ ಫೆಬಲ್ಸ್ ರಿಟೋಲ್ಡ್ ಪಫಿನ್ ಬುಕ್ (೨೦೨೩)ಪುಸ್ತಕ ಬರೆದಿದ್ದಾರೆ.