ಮಡಿಕೇರಿ, ಜೂ. ೧೯: ಈ ಬಾರಿ ದೆಹಲಿಯಲ್ಲಿ ನಡೆಯುವ ಸ್ವಾತಂತ್ರೊö್ಯÃತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೊಡಗು ಜಿಲ್ಲೆಯ ಮೂರ್ನಾಡು ಕೋಡಂಬೂರುವಿನ ಯಶಸ್ ರೈ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾನೆ.
ದೇಶದ ಪ್ರತಿ ರಾಜ್ಯದಿಂದ ೧೫ ವರ್ಷದಿಂದ ೨೮ ವರ್ಷ ವಯೋಮಿತಿವರೆಗಿನ ಈ ಅವಕಾಶದಲ್ಲಿ ಕರ್ನಾಟಕ ರಾಜ್ಯದಿಂದ ಈ ಬಾರಿ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಸ್ಥಾನ ಪಡೆದುಕೊಂಡಿದೆ. ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವಕೇಂದ್ರದ ಮೈ ಭಾರತ್ ಪೋರ್ಟಲ್ ಮೂಲಕ ನೋಂದಣಿಗೊAಡ ಯುವಕರಲ್ಲಿ ಯಶಸ್ ಆಯ್ಕೆಗೊಂಡಿದ್ದಾನೆ. ಈತ ಈ ಬಾರಿಯ ಸ್ವಾತಂತ್ರö್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿಶೇಷ ರಾಯಭಾರಿಯಾಗಿ ಕರ್ನಾಟಕದಿಂದ ಪಾಲ್ಗೊಳ್ಳಲಿದ್ದಾರೆ.
ಬಿ.ಎನ್. ಲವಕುಮಾರ್ ಹಾಗೂ ಜಯಂತಿ ಬಿ.ಬಿ. ಅವರ ದ್ವಿತೀಯ ಪುತ್ರನಾಗಿರುವ ಈತ ಸುಳ್ಯ ಕೆ.ವಿ.ಜಿ. ಇಂಜಿನಿಯರಿAಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದಾನೆ. ಪ್ರಧಾನ ಮಂತ್ರಿಗಳ ಈ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆ ಕರ್ನಾಟಕವನ್ನು ಪ್ರತಿನಿಧಿಸಿರುವುದು ಕೊಡಗು ಜಿಲ್ಲೆಯ ಯುವ ಜನತೆಗೆ ಹೆಮ್ಮೆ ತಂದಿದೆ. ಇತ್ತೀಚಿನ ಈ ವಯಸ್ಸಿನ ಯುವ ಸಮೂಹ ಜಿಲ್ಲಾ ಯುವ ಒಕ್ಕೂಟ ಮುಖಂತಾರ ರಾಷ್ಟç ಯುವಜನೋತ್ಸವ ಸಾಂಸ್ಕೃತಿಕದAತಹ ಕಾರ್ಯಕ್ರಮದಲ್ಲಿ ಕೊಡಗನ್ನು ಪ್ರತಿನಿಧಿಸಿರುವುದು ಹೆಮ್ಮೆ ತಂದಿದೆ ಎಂದು ಕೊಡಗು ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷ ಪಿ.ಪಿ. ಸುಕುಮಾರ್ ತಿಳಿಸಿದ್ದಾರೆ.