ಕೂಡಿಗೆ, ಜೂ. ೧೯: ಕೂಡಿಗೆ ಸೈನಿಕ ಶಾಲೆಯ ವತಿಯಿಂದ ಕೂಡಿಗೆಯ ಕ್ರೀಡಾ ಶಾಲೆಯ ಆಸ್ಟೊçÃಟರ್ಫ್ ಹಾಕಿ ಮೈದಾನದಲ್ಲಿ ಅಖಿಲ ಭಾರತೀಯ ಸೈನಿಕ ಶಾಲೆಗಳ ಗುಂಪು- ಹೆಚ್ ವಿಭಾಗದ ಹಾಕಿ ಪಂದ್ಯಾವಳಿ ಆಯೋಜಿಸಲಾಗಿತ್ತು.

ಪಂದ್ಯಾವಳಿಯಲ್ಲಿ ಕೇರಳದ ಸೈನಿಕ ಶಾಲೆ ಕಝಕೂಟಂ, ಆಂಧ್ರಪ್ರದೇಶದ ಸೈನಿಕ ಶಾಲೆ ಕಲಿಕಿರಿ, ತಮಿಳುನಾಡಿನ ಸೈನಿಕ ಶಾಲೆ ಅಮರಾವತಿನಗರ, ಸೈನಿಕ ಶಾಲೆ ಕೊಡಗು ಭಾಗವಹಿಸಿದ್ದವು.

ಇದರೊಂದಿಗೆ ಪಂದ್ಯಾವಳಿಯಲ್ಲಿ ಪ್ರತಿ ಶಾಲೆಯಿಂದ ಬಾಲಕರ ಜೂನಿಯರ್, ಬಾಲಕರ ಸಬ್ ಜೂನಿಯರ್ ಹಾಗೂ ಬಾಲಕಿಯರ ಜೂನಿಯರ್ ತಂಡಗಳು ಭಾಗವಹಿಸಿದ್ದವು.

ಶಾಲೆಯ ಪ್ರಬಾರ ಪ್ರಾಂಶುಪಾಲ ಸ್ಕಾ÷್ವಡ್ರನ್ ಲೀಡರ್ ಮೊಹಮ್ಮದ್ ಶಾಜಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಸ್ಪರ್ಧೆಯು ಕ್ರೀಡಾಸ್ಫೂರ್ತಿ ಹಾಗೂ ಸಾಂಘಿಕ ಹೋರಾಟದಿಂದ, ಆರೋಗ್ಯಯುತ ಮನಸ್ಸಿನೊಂದಿಗೆ ಕೂಡಿರಬೇಕು. ಇದರೊಂದಿಗೆ ಸ್ಪರ್ಧಾಳುಗಳು ತಮ್ಮೆಲ್ಲಾ ಸ್ಪರ್ಧೆಗಳಲ್ಲಿ ಸ್ನೇಹಪೂರ್ವಕವಾದ ಹಾಗೂ ನ್ಯಾಯಯುತವಾದ ಆಟದ ಮೌಲ್ಯಗಳನ್ನು ಪಾಲಿಸಲು ಸ್ಪರ್ಧಾಳುಗಳಿಗೆ ಕರೆ ನೀಡಿದರು.

ಪಂದ್ಯಾವಳಿಯ ಸಮಾರೋಪ ಸಮಾರಂಭಕ್ಕೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಾಲೆಯ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್ ಆಗಮಿಸಿ ಮಾತನಾಡಿದರು. ಈ ಪಂದ್ಯಾವಳಿಯಲ್ಲಿ ಜೂನಿಯರ್ ವಿಭಾಗದಿಂದ ಸೈನಿಕ ಶಾಲೆ ಕಝಕೂಟಂ, ಸಬ್ ಜೂನಿಯರ್ ವಿಭಾಗದಿಂದ ಸೈನಿಕ ಶಾಲೆ ಅಮರಾವತಿನಗರ ಹಾಗೂ ಬಾಲಕಿಯರ ಜೂನಿಯರ್ ವಿಭಾಗದಿಂದ ಸೈನಿಕ ಶಾಲೆ ಕಲಿಕಿರಿ ಪ್ರಥಮ ಸ್ಥಾನವನ್ನು ಪಡೆದವು. ಸೈನಿಕ ಶಾಲೆ ಕೊಡಗು ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿತು.

ಈ ಸಂದರ್ಭದಲ್ಲಿ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿ, ಭಾಗವಹಿಸಿದ ಸೈನಿಕ ಶಾಲೆಗಳ ಮೇಲ್ವಿಚಾರಕರು, ಶಾಲೆಯ ಎನ್‌ಸಿಸಿ ಸಿಬ್ಬಂದಿ ವರ್ಗ, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.