ಮಡಿಕೇರಿ. ಜೂ. ೧೯:ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶದ ಸೂರ್ಲಬ್ಬಿ ವ್ಯಾಪ್ತಿಯಲ್ಲಿ ಪ್ರಸ್ತುತ ವರ್ಷಾರಂಭದಿAದ ಇದುವರೆಗೆ ಒಟ್ಟು ೧೦೦.೧೩ ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ ಈ ವ್ಯಾಪ್ತಿಯಲ್ಲಿ ೪೯.೬೩ ಇಂಚು ಮಳೆ ಆಗಿತ್ತು. ಗುಡ್ಡಗಾಡುಗಳಿಂದ ಕೂಡಿದ ಗ್ರಾಮಾಂತರ ಪ್ರದೇಶದಲ್ಲಿ ಮಳೆಯ ಪ್ರಮಾಣ ಅಧಿಕ ಆಗುತ್ತಿರುವ ಪರಿಣಾಮ ಹಾರಂಗಿ ಜಲಾಶಯದ ನೀರಿನ ಮಟ್ಟ ಕೂಡ ಏರಿಕೆ ಕಂಡು ಬಂದಿದೆ.

ಹಾರAಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ ೨೮೫೯ ಅಡಿ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಈ ಜಲಾಶಯದ ನೀರಿನ ಮಟ್ಟ ೨೮೪೯.೩೮ ಅಡಿ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೨೮೨೧.೪೧ ಅಡಿಯಷ್ಟು ಗೋಚರಿಸಿತ್ತು.ಪ್ರಸ್ತುತ ಅವಧಿಗೆ ಕೊಡಗು ಜಿಲ್ಲೆಯಲ್ಲಿ ಸರಾಸರಿ ೪೧ ಇಂಚು ಮಳೆ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೨೮.೮೬ ಇಂಚು ಮಳೆ ದಾಖಲಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ ೨೦೨೫ನೇ ಸಾಲಿನಲ್ಲಿ ಈ ಅವಧಿಯಲ್ಲಿ ೬೨.೦೪ ಇಂಚು ಮಳೆಯಾಗಿದೆ. ಕಳೆದ ವರ್ಷ ಈ ವೇಳೆಗೆ ೨೭.೯೪ ಇಂಚು ಮಳೆ ಆಗಿತ್ತು.ಸೋಮವಾರ ಪೇಟೆ ತಾಲೂಕಿನಲ್ಲಿ ಈ ವರ್ಷಾರಂಭದಿAದ ಇದುವರೆಗೆ ಸರಾಸರಿ ೩೮.೫೫ ಇಂಚು ಮಳೆ ಬಿದ್ದಿದೆ. ಕಳೆದ ವರ್ಷ ಇದೇ ಅವಧಿಗೆ ೧೬.೫೪ ಇಂಚು ದಾಖಲಾಗಿತ್ತು. ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಪೊನ್ನಂಪೇಟೆ ತಾಲ್ಲೂಕಿನಲ್ಲಿ ವರ್ಷಾರಂಭದಿAದ ಇದುವರೆಗೆ ಸರಾಸರಿ ೩೮.೮೬ ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ ೧೮.೮೯ ಇಂಚು ಮಳೆ ಆಗಿತ್ತು.

ವೀರಾಜಪೇಟೆ ತಾಲೂಕಿನಲ್ಲಿ ಈ ವರ್ಷದ ಆರಂಭದಿAದ ಇಲ್ಲಿಯವರೆಗೆ ೪೨.೫೬ ಇಂಚು ಮಳೆ ಆಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ೧೭.೬೮ ಇಂಚು ಮಳೆಯಾಗಿದೆ. ಕುಶಾಲನಗರ ತಾಲೂಕಿನ ಬಯಲುಸೀಮೆಗೆ ಈ ವರ್ಷಾರಂಭದಿAದ ಈ ತನಕ೨೫. ೪೨ ಇಂಚು ಮಳೆ ಆಗಿದೆ. ಹಿಂದಿನ ಸಾಲಿನಲ್ಲಿ ಇದೇ ವೇಳೆಗೆ ೧೯.೨೧ ಇಂಚು ಮಳೆ ದಾಖಲಾಗಿತ್ತು. ಕೊಡಗಿನಲ್ಲಿ ಕಳೆದ ಸಾಲಿಗಿಂತ ಈ ಅವಧಿಗೆ ಮಳೆಯ ಪ್ರಮಾಣ ಅಧಿಕಗೊಂಡಿದ್ದು ಈಗಾಗಲೇ ಸಾಕಷ್ಟು ಸಾರ್ವಜನಿಕ ಹಾಗೂ ಸರ್ಕಾರಿ ಆಸ್ತಿ ಪಾಸ್ತಿ ಹಾನಿಯಾಗಿದೆ ಎಂದು ವಿದ್ಯುತ್, ಕಂದಾಯ ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ವರದಿಯಾಗಿದೆ. ಶ್ರೀಸುತ