ಮಡಿಕೇರಿ, ಜೂ. ೧೯: ಕರ್ನಾಟಕ ಯಕ್ಷಗಾನ ಅಕಾಡೆಮಿಯು ಯಕ್ಷಗಾನ (ತೆಂಕು, ಬಡಗು ಬಡಾಬಡಗು, ಯಕ್ಷಗಾನ ಗೊಂಬೆಯಾಟ), ಮೂಡಲಪಾಯ ಯಕ್ಷಗಾನ, ಕೇಳಿಕೆ, ಘಟ್ಟದಕೋರೆ ಮತ್ತು ತಾಳಮದ್ದಲೆ, ಮತ್ತಿತರ ಕಲಾಪ್ರಕಾರಗಳಲ್ಲಿ ೨೦೨೪ನೇ ಸಾಲಿನ ಕ್ಯಾಲೆಂಡರ್ ವರ್ಷದಲ್ಲಿ (ದಿನಾಂಕ: ೦೧.೦೧.೨೦೨೪ರಿಂದ ೩೧.೧೨.೨೦೨೪ರ ಒಳಗೆ) ಪ್ರಕಟಿಸಿರುವ ಪುಸ್ತಕಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲು ಲೇಖಕರಿಂದ/ ಪ್ರಕಾಶಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಯ್ಕೆಯಾದ ಪುಸ್ತಕಕ್ಕೆ ರೂ. ೨೫ ಸಾವಿರಗಳ ಬಹುಮಾನವನ್ನು ನೀಡಲಾಗುವುದು. ಯಕ್ಷಗಾನ ಕ್ಷೇತ್ರದ ವಿವಿಧ ಆಯಾಮಗಳ ಬಗ್ಗೆ ಸಂಗೀತ, ಆಹರ‍್ಯ, ಅಭಿನಯ, ಸಂಶೋಧನೆ, ವಿಮರ್ಶೆ, ಜೀವನಚರಿತ್ರೆ, ಪ್ರಸಂಗ ಪುಸ್ತಕ ಇತ್ಯಾದಿ ಪ್ರಕಾರಗಳನ್ನು ಒಳಗೊಂಡ ಪುಸ್ತಕಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಿದೆ. ಪುಸ್ತಕ ಬಹುಮಾನಕ್ಕೆ ಸಲ್ಲಿಸುವ ಪುಸ್ತಕವನ್ನು ಪಠ್ಯಕ್ಕಾಗಿ ಸಿದ್ಧಪಡಿಸಿರಬಾರದು ಹಾಗೂ ಸಂಪಾದಿತ ಕೃತಿ ಅಥವಾ ಅಭಿನಂದನ ಕೃತಿಯಾಗಿರಬಾರದು, ಸ್ವರಚಿತವಾಗಿರಬೇಕು. ಪ್ರಥಮ ಮುದ್ರಣ ಆವೃತ್ತಿಯಾಗಿರಬೇಕು.
ಬಹುಮಾನಕ್ಕೆ ಪುಸ್ತಕಗಳನ್ನು ಕಳುಹಿಸುವವರು ರಿಜಿಸ್ಟಾçರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, ಎರಡನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ. ರಸ್ತೆ, ಬೆಂಗಳೂರು ೫೬೦೦೦೨, ಇವರಿಗೆ ೨೦೨೫ರ ಜುಲೈ ೧೦ ರೊಳಗೆ ಅರ್ಜಿಯೊಂದಿಗೆ ಪುಸ್ತಕದ ನಾಲ್ಕು ಪ್ರತಿಗಳನ್ನು ಕಡ್ಡಾಯವಾಗಿ ಕಳುಹಿಸುವುದು. ಯಾವುದೇ ಕಾರಣಕ್ಕೂ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ. ಹೆಚ್ಚಿನ ವಿವರಗಳನ್ನು ಹಾಗೂ ಅರ್ಜಿಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ವೆಬ್‌ಸೈಟ್ ತಿತಿತಿ.ಞಚಿಡಿಚಿಟಿಚಿಣಚಿಞಚಿಥಿಚಿಞshಚಿgಚಿಟಿಚಿಚಿಛಿಚಿಜemಥಿ.ಛಿo.iಟಿ ಮತ್ತು ಕಚೇರಿಯ ವೇಳೆಯಲ್ಲಿ ಅಕಾಡೆಮಿಯಿಂದ (ದೂ. ೦೮೦-೨೨೧೧೩೧೪೬) ಪಡೆಯಬಹುದು ಹಾಗೂ ಅರ್ಜಿಗಳನ್ನು ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿಕೇರಿ, ಕೊಡಗು ಜಿಲ್ಲೆ ಇಲ್ಲಿ ಪಡೆಯಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಏಲಕ್ಕಿ ಬೆಳೆಗಾರರಿಂದ ಸಹಾಯಧನಕ್ಕೆ
ಸೋಮವಾರಪೇಟೆ, ಜೂ. ೧೯: ಸಂಬಾರ ಮಂಡಳಿ ವತಿಯಿಂದ ೨೦೨೫-೨೬ನೇ ಸಾಲಿಗೆ ಏಲಕ್ಕಿ ತೋಟಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ವಿವಿಧ ಯೋಜನೆಗಳಡಿ ಬೆಳೆಗಾರರಿಂದ ಸಹಾಯಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ೩೦.೦೯.೨೦೨೫ ಕೊನೆಯ ದಿನವಾಗಿದ್ದು, ಮೊದಲು ಅರ್ಜಿ ಹಾಕಿದವರಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಏಲಕ್ಕಿ ಮರುನಾಟಿ ಯೋಜನೆಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್, ೨೦೨೪-೨೫ನೇ ಸಾಲಿನ ಪಹಣಿ, ತೋಟದ ನಕ್ಷೆ, ಏಲಕ್ಕಿ ಸಿ.ಆರ್.ಸಿ. / ತೋಟಗಾರಿಕೆ ಇಲಾಖೆಯಿಂದ ದೃಢೀಕರಣ ಪತ್ರ, ಜಾತಿ ಪ್ರಮಾಣ ಪತ್ರ (ಎಸ್.ಸಿ.-ಎಸ್.ಟಿ. ಬೆಳೆಗಾರರಿಗೆ).
ಏಲಕ್ಕಿ ನರ್ಸರಿ ಯೋಜನೆಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್, ೨೦೨೪-೨೫ನೇ ಸಾಲಿನ ಪಹಣಿ. ಕಾಳುಮೆಣಸು ಬಿಡಿಸುವ ಯಂತ್ರ ಮತ್ತು ಸ್ಪೆöÊಸ್ ಕ್ಲೀನರ್, ಗ್ರೇಡರ್‌ಗಳಿಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್, ೨೦೨೪-೨೫ನೇ ಸಾಲಿನ ಪಹಣಿ, ಕೊಟೇಷನ್ (ಅನುಮೋದಿತ ತಯಾರಕರಿಂದ).
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸಂಬಾರ ಮಂಡಳಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಕ್ಷೇತ್ರಾಧಿಕಾರಿ ಲೋಕೇಶ್ (ಮೊ. ೯೪೪೮೯೯೭೦೧೧) ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ
ಮಡಿಕೇರಿ, ಜೂ. ೧೯: ಪ್ರಸಕ್ತ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕಾಗಿ (ssಠಿ.ಠಿosಣmಚಿಣಡಿiಛಿ.ಞಚಿಡಿಟಿಚಿಣಚಿಞಚಿ.gov.iಟಿ) ನಲ್ಲಿ ಅರ್ಜಿ ಸಲ್ಲಿಸಲು ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ವ್ಯಾಪ್ತಿಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ (ಆದಾಯ ಮಿತಿ ೨.೫೦ ಲಕ್ಷ) ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಪ್ರತಿ (ಕಡ್ಡಾಯವಾಗಿ ಆಧಾರ್ ಸೀಡಿಂಗ್ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಿರತಕ್ಕದು, ಚಾಲ್ತಿಯಲ್ಲಿರುವ ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ (ಕಡ್ಡಾಯ), ಹಿಂದಿನ ವರ್ಷದ ಮಾರ್ಕ್ಸ್ಕಾರ್ಡ್ ಪ್ರತಿ, ಇತ್ತೀಚಿನ ಭಾವಚಿತ್ರ, ಅಧ್ಯಯನ/ ಬೋನಾಫೈಡ್ ಪ್ರಮಾಣ ಪತ್ರ (ssಣuಜಥಿ/boಟಿoಜಿiಜe ಛಿeಡಿಣiಜಿiಛಿಚಿಣe) ಮೆಟ್ರಿಕ್ ನಂತರದ ಕೋರ್ಸ್ಗಳಿಗೆ) ಶುಲ್ಕ ರಶೀದಿ (ಈಡಿees ಖeಛಿeiಠಿಣ) (ಮೆಟ್ರಿಕ್ ನಂತರದ ಕೋರ್ಸ್ಗಳಿಗೆ), ತಂದೆ/ತಾಯಿ/ಪೋಷಕರ ಆಧಾರ್ ಪ್ರತಿ ಈ ದಾಖಲಾತಿಗಳೊಂದಿಗೆ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಆದಾಯ ಮಿತಿ ೨.೫೦ ಲಕ್ಷಕ್ಕಿಂತ ಒಳಗಿರುವ ಸಿ.ಇ.ಟಿ. ಮೂಲಕ ಎಂ.ಬಿ.ಬಿ.ಎಸ್. ಬಿ.ಡಿ.ಎಸ್, ಬಿ.ಇ, ಬಿ.ಟೆಕ್, ಬಿ.ರ‍್ಕ್ ಕೋರ್ಸ್ಗಳಿಗೆ ಆಯ್ಕೆಯಾಗುವ ವಿದ್ಯಾರ್ಥಿಗಳು ಮಾತ್ರ ಸರ್ಕಾರಿ/ಅನುದಾನಿತ/ ಅನುದಾನರಹಿತ ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾನಿಲಯದ ಕಾಲೇಜು/ಸಂಸ್ಥೆಗಳಲ್ಲಿ ಪ್ರವೇಶ ಪಡೆದಿದ್ದಲ್ಲಿ ವಿದ್ಯಾರ್ಥಿಗಳು ಶೇ. ೧೦೦ ರಷ್ಟು ಆಯಾಯ ಸಂಸ್ಥೆಗಳಿಗೆ ನಿಗದಿಪಡಿಸಿದ ಶುಲ್ಕ ಪಡೆಯಲು ಅರ್ಹರಿರುತ್ತಾರೆ.
ಅರ್ಜಿ ಸಲ್ಲಿಸಬೇಕಾದ ವೆಬ್‌ಸೈಟ್ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕಾಗಿ ssಠಿ.ಠಿosಣmಚಿಣಡಿiಛಿ.ಞಚಿಡಿಟಿಚಿಣಚಿಞಚಿ.gov.iಟಿ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ ೦೮೦-೪೪೫೫೪೪೫೫ ಮತ್ತು ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಸೋಮವಾರಪೇಟೆ ಕಚೇರಿ ದೂ. ೯೪೮೦೮೪೩೧೫೬, ೦೮೨೭೬-೨೮೧೧೧೫ ನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.