ಮಡಿಕೇರಿ, ಜೂ. ೧೯: ಎಪಿಟಿ ೨.೦ ಅಡಿಯಲ್ಲಿ ಹೊಸ ತಂತ್ರಾAಶವನ್ನು ಜೂನ್, ೨೩ ರಂದು ಅಳವಡಿಸುತ್ತಿರುವ ಕಾರಣ ನಗರದ ಪ್ರಧಾನ ಅಂಚೆ ಕಚೇರಿ ಮತ್ತು ಅದರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಉಪ ಅಂಚೆ ಕಚೇರಿಗಳು ಮತ್ತು ಅದರ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಖಾ ಅಂಚೆ ಕಚೇರಿಗಳಲ್ಲಿ ಜೂನ್ ೨೧ ರಂದು ಯಾವುದೇ ರೀತಿಯ ಅಂಚೆ ವಹಿವಾಟು ಇರುವುದಿಲ್ಲ.

ಮಡಿಕೇರಿ ಪ್ರಧಾನ ಅಂಚೆ ಕಚೇರಿ ಹಾಗೂ ಉಪ ಅಂಚೆ ಕಚೇರಿಗಳಾದ ಮಡಿಕೇರಿ(ಡಿಒಸಿ), ವಿದ್ಯಾನಗರ, ಅಮ್ಮತ್ತಿ, ಭಾಗಮಂಡಲ, ಬಾಳೆಲೆ, ಚೆಟ್ಟಳ್ಳಿ, ಚೆಯ್ಯಂಡಾಣೆ, ಗೋಣಿಕೊಪ್ಪಲು, ಹುದಿಕೇರಿ, ಕೊಡ್ಲಿಪೇಟೆ, ಕೂಡಿಗೆ ಕುಶಾಲನಗರ, ಕುಟ್ಟ, ಮಾದಾಪುರ, ಮೂರ್ನಾಡು, ನಾಪೋಕ್ಲು, ಪಾಲಿಬೆಟ್ಟ, ಪೊನ್ನಂಪೇಟೆ, ಶನಿವಾರಸಂತೆ, ಸಿದ್ದಾಪುರ, ಸೋಮವಾರಪೇಟೆ, ಶ್ರೀಮಂಗಲ, ಸುಂಟಿಕೊಪ್ಪ, ತಿತಿಮತಿ, ವೀರಾಜಪೇಟೆ, ಅಂಚೆ ಕಚೇರಿಗಳು ಜೂನ್ ೨೧ ರಂದು ಯಾವುದೇ ಅಂಚೆ ವಹಿವಾಟು ನಡೆಸುವುದಿಲ್ಲ ಎಂದು ಕೊಡಗು ಅಂಚೆ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.