ಐಗೂರು, ಜೂ. ೧೯: ಐಗೂರಿನಲ್ಲಿ ಒಂದು ತಿಂಗಳ ಹಿಂದೆ ಕೇಬಲ್ ಗುಂಡಿಯನ್ನು ನಿರ್ಮಿಸಿದ್ದು, ಇಲಾಖಾ ವತಿಯಿಂದ ಅಪಾಯದ ಗುಂಡಿಯನ್ನು ಮುಚ್ಚಿರುವುದಿಲ್ಲ. ಈ ಬಗ್ಗೆ ಗ್ರಾಮಸ್ಥರು ಗುಂಡಿಯ ಬದಿಯಲ್ಲಿ ಕಂಬ ನೆಟ್ಟು ಗೋಣಿ ಚೀಲವನ್ನು ನೇತು ಹಾಕಿ ಎಚ್ಚರಿಕೆಯ ಮುನ್ಸೂಚನೆ ನೀಡಿರುವುದು ಐಗೂರಿನಲ್ಲಿ ಕಂಡು ಬಂದಿದೆ.

ಸ್ಥಳೀಯ ಬ್ಯಾಂಕ್ ಆಫ್ ಬರೋಡ ಶಾಖೆಯ ಮುಂಭಾಗದ ಹೆದ್ದಾರಿ ರಸ್ತೆ ಬದಿಯಲ್ಲಿ ನಿರ್ಮಿಸಿರುವ ಈ ಅಪಾಯದ ಗುಂಡಿಯಲ್ಲಿ ವಾರದ ಹಿಂದೆ ಕಾರಿನ ಮುಂಭಾಗದ ಚಕ್ರ ಸಿಲುಕಿಕೊಂಡು ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಇತ್ತೀಚೆಗೆ ಬ್ಯಾಂಕಿಗೆ ಬರುವ ಗ್ರಾಹಕರು ಅಪಾಯದ ಗುಂಡಿಯೊಳಗೆ ಸಿಲುಕಿಕೊಂಡ ದೃಶ್ಯವನ್ನು ಕಂಡ ಸ್ಥಳೀಯರು ಗುಂಡಿಯ ಬದಿಯಲ್ಲಿ ಕಲ್ಲುಗಳನ್ನಿಟ್ಟು, ಕಂಬವೂAದರಲ್ಲಿ ಗೋಣಿಚೀಲ ಅಳವಡಿಸಿ ಅಪಾಯದ ಮುನ್ಸೂಚನೆ ನೀಡಿದ್ದಾರೆ.