ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮಹತ್ವವಾದದ್ದು. ತಾಯಿಯಾದವಳು ಉದರದೊಳಗೆ ಮಕ್ಕಳನ್ನು ಪೋಷಿಸಿದರೆ ತಂದೆಯಾದವನು ಜೀವನ ಪರ್ಯಂತ ತನ್ನ ಮಕ್ಕಳ ಏಳಿಗೆಗೆ ದುಡಿಯುವವನು.
ತಂದೆ ಎಂದರೆ ಮನೆಗೆ ಆಧಾರಸ್ತಂಭ ಎಂದರೆ ತಪ್ಪಾಗಲಾರದು. ಮಕ್ಕಳಿಗೆ ತಂದೆ ಪ್ರೀತಿ ಎಂದರೆ ತುಂಬಾ ವಿಶೇಷವಾದದ್ದು. ತಂದೆಯ ಸಿಡುಕು ನೋಟ ಕಂಡರೆ ಇಂದಿಗೂ ಹೆದರುವ ಮಕ್ಕಳು ಇರುತ್ತಾರೆ.
ವಿಶೇಷವಾಗಿ ಹೆಣ್ಣು ಮಕ್ಕಳಿಗೆ ತಂದೆ ಎಂದರೆ ವಿಶೇಷವಾದ ಪ್ರೀತಿ. ಬಹುಶಃ ತಂದೆಯAದಿರಿಗೂ ಕೂಡ ಮಗಳಲ್ಲಿ ಅಕ್ಕರೆ ಹೆಚ್ಚು. ತಂದೆ ತಮ್ಮ ಮಗಳನ್ನು ತಾಯಿಯಂತೆ ಗೌರವಿಸುವುದು ಕೂಡ ತಂದೆ - ಮಗಳ ಬಾಂಧವ್ಯಕ್ಕೆ ಕಾರಣ ಎಂದರೆ ತಪ್ಪಲ್ಲ.
ತಂದೆಯಾದವನು ಸಂಸಾರದ ಹೊರೆಯನ್ನು ನಿರ್ವಹಿಸುವುದರ ಜೊತೆಗೆ ಮಕ್ಕಳ ಭವಿಷ್ಯದ ಬಗ್ಗೆಯೂ ಚಿಂತೆ ಮಾಡಬೇಕು. ಇದೆಲ್ಲದರ ಮಧ್ಯೆ ತನಗೆ ಏನೂ ಮಾಡದೆ ತನ್ನನ್ನು ಅವಲಂಬಿಸಿದವರಿಗೆ ಯಾವುದೇ ಕೊರತೆಯಿಲ್ಲದೆ ನೋಡಿಕೊಳ್ಳಬೇಕು. ಬಹುಶಃ ತಂದೆ ಎಂಬ ಸ್ಥಾನ ಬಹಳ ಪವಿತ್ರವಾದುದು ಎಂದರೆ ತಪ್ಪಾಗಲಾರದು.
ಮಕ್ಕಳಿಗೂ ಕೂಡ ತಂದೆಯ ಕಷ್ಟ ಅರಿವಾದಾಗ ಮಾತ್ರ ತಂದೆ - ಮಕ್ಕಳ ಬಾಂಧವ್ಯ ಉತ್ತಮವಾಗಿರಲು ಸಾಧ್ಯ. ಬದುಕಿನ ಎಲ್ಲಾ ಹಂತಗಳು ದಾಟಿ ಬಂದ ಮೇಲೆ ತಂದೆಯಾದವನಿಗೆ ಬೇಕಾದದು ಬದುಕಿನ ನೆಮ್ಮದಿ. ತಮ್ಮ ಮಕ್ಕಳು ಸಮಾಜದಲ್ಲಿ ಸತ್ಪçಜೆಯಾಗಿ ರೂಪುಗೊಂಡಾಗ ಮಾತ್ರ ತಂದೆಯ ಜವಾಬ್ದಾರಿ ಹೊರೆ ಇಳಿಯುತ್ತದೆ. ಮಕ್ಕಳು ಏನೂ ಕೇಳಿದರೂ ಇಲ್ಲವೆನ್ನುವ ತಂದೆಗೆ ಜೀವನದ ಇಳಿವಯಸ್ಸಿನಲ್ಲಿ ನಾವು ಆಸರೆಯಾಗಬೇಕು... ವೃದ್ಧಾಶ್ರಮವಲ್ಲ...!
- ಮೋಹಿನಿ ದಯಾನಂದ ರೈ, ಪಾಲಿಬೆಟ್ಟ.