ಇಸ್ರೇಲ್, ಜೂ. ೧೩: ನಿನ್ನೆ ತಡರಾತ್ರಿಯಿಂದ ಇಂದು ಮುಂಜಾನೆವರಗೆ ಇಸ್ರೇಲ್ ವಾಯು ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಇರಾನ್‌ನ ಪರಮಾಣು ಕೇಂದ್ರಗಳು ಸೇರಿದಂತೆ ಸೇನಾ ಕೇಂದ್ರಗಳೂ ಧ್ವಂಸಗೊAಡಿವೆ. ದಾಳಿಯಲ್ಲಿ ಇರಾನಿನ ಭೂ-ಸೇನೆಯ ಮುಖ್ಯಸ್ಥ, ಇರಾನಿನ ಐ.ಆರ್.ಜಿ.ಸಿ (ಇಸ್ಲಾಮಿಕ್ ರಿವಲ್ಯೂಷನರಿ ಗಾರ್ಡ್ ಕಾರ್ಪ್ಸ್)ನ ಮುಖ್ಯಸ್ಥ, ಪರಮಾಣು ಕೇಂದ್ರಗಳಲ್ಲಿನ ೬ ವಿಜ್ಞಾನಿಗಳು ಸೇರಿದಂತೆ ವಿವಿಧೆಡೆ ನಡೆಸಿದ ದಾಳಿಯ ಪರಿಣಾಮ ಕನಿಷ್ಟ ೭೮ ಮಂದಿ ಹತರಾಗಿದ್ದಾರೆ.

ಆಪರೇಷನ್ ರೈಸಿಂಗ್ ಲಯನ್

ಆಪರೇಷನ್ ರೈಸಿಂಗ್ ಲಯನ್ ಹೆಸರಿನ ಕಾರ್ಯಾಚರಣೆ ಮೂಲಕ ಇರಾನಿನ ಸೇನಾನೆಲೆಗಳು ಹಾಗೂ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಿದ ಇಸ್ರೇಲ್‌ನ ವಾಯುಪಡೆಯು, ೩೩೦ ಕ್ಕೂ ಅಧಿಕ ಕ್ಷಿಪಣಿ, ಬಾಂಬ್ ಇತ್ಯಾದಿಗಳನ್ನು ಹೊತ್ತ ೨೦೦ ವಿಮಾನಗಳನ್ನು ಕಾರ್ಯಾಚರಣೆಯಲ್ಲಿ ಬಳಸಿದ್ದು, ೧೦೦ ಕ್ಕೂ ಅಧಿಕ ಸ್ಥಳಗಳಲ್ಲಿನ ‘ಟಾರ್ಗೆಟ್’ಗಳನ್ನು ನಾಶಪಡಿಸಿದೆ.

ಪರಮಾಣು ಆಯುಧಗಳ ಸಿದ್ಧತೆಯಲ್ಲಿ ತೊಡಗಿದ್ದ ಆರೋಪ

ಪಾಲಿಸ್ಟೆöÊನ್‌ನಲ್ಲಿನ ಹಮಾಸ್ ಉಗ್ರಗಾಮಿ ಸಂಘಟನೆಯೊAದಿಗೆ ಕಳೆದ ಒಂದೂವರೆ ವರ್ಷದಿಂದಲೂ ಇಸ್ರೇಲ್ ಕಲಹದಲ್ಲಿದೆ. ೨೦೨೩ರ ಅಕ್ಟೋಬರ್ ೭ ರಂದು ಇಸ್ರೇಲ್‌ನ ಹಲವಾರು ಮಂದಿಯನ್ನು ಹಮಾಸ್ ಸಂಘಟನೆ ಒತ್ತೆಯಾಳಾಗಿ ಇರಿಸಿಕೊಂಡಿದ್ದು, ಇವರುಗಳನ್ನು ಬಿಡುಗಡೆ ಮಾಡುವ ವಿಚಾರದಲ್ಲಿ ಇಸ್ರೇಲ್ ನಿರಂತರವಾಗಿ ಹಮಾಸ್ ಮೇಲೆ ದಾಳಿ ನಡೆಸುತ್ತಿತ್ತು. ಈ ವಿಚಾರದಲ್ಲಿ ಇರಾನ್, ಹಮಾಸ್ ಉಗ್ರಗಾಮಿ ಸಂಘಟನೆಗೆ ಬೆಂಬಲ ವ್ಯಕ್ತಪಡಿಸಿತ್ತು. ಇದೇ ಇರಾನ್ ಈಗ ತನ್ನ ಪರಮಾಣು ಘಟಕಗಳಲ್ಲಿ ಪರಮಾಣು ಆಯುಧ ನಿರ್ಮಾಣದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ, ಅಂತಹ ಘಟಕಗಳ ಮೇಲೆ ಹಾಗೂ ಇರಾನಿನ ಇತರೆಡೆಗಳಲ್ಲಿ ಇಸ್ರೇಲ್ ದಾಳಿ ಮಾಡಿದ್ದಾಗಿ ಇಸ್ರೇಲ್ ರಕ್ಷಣಾ ಪಡೆಯು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನೂ ಕೆಲವೇ ದಿನಗಳಲ್ಲಿ ಈ ಆಯುಧಗಳು ತಯಾರಾಗುವ ಸಾಧ್ಯತೆಗಳಿದ್ದ ಕಾರಣ ಹಾಗೂ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಈ ಆಯುಧಗಳನ್ನು ಇಸ್ರೇಲ್ ಮೇಲೆ ಇರಾನ್ ಪ್ರಯೋಗಿಸುವ ಸಾಧ್ಯತೆಯ ಕಾರಣ, ಇಸ್ರೇಲ್ ನಾಗರಿಕರ ರಕ್ಷಣೆ ದೃಷ್ಟಿಯಿಂದ ಪರಮಾಣು ಘಟಕಗಳನ್ನೇ ಗುರಿಯಾಗಿಸಿ ದಾಳಿ ನಡೆಸಿದ್ದಾಗಿ ಇಸ್ರೇಲ್ ರಕ್ಷಣಾ ಪಡೆ ತಿಳಿಸಿದೆ.

ಪರಮಾಣು ಬಾಂಬ್‌ಗೆ ಅಗತ್ಯವಿರುವ ಯುರೇನಿಯಮ್ ಉತ್ಪಾದನೆ ಹೆಚ್ಚಳ

ಇರಾನ್‌ನ ಪ್ರಮುಖ ಪರಮಾಣು ಕೇಂದ್ರಗಳಲ್ಲಿ ಹಾಗೂ ಅಧಿಕವಾಗಿ ನಟಾನ್ಸ್ ಪರಮಾಣು ಘಟಕದಲ್ಲಿ ಸಾವಿರಾರು ಕೆ.ಜಿ ಎನ್‌ರಿಚ್ಡ್ ಯುರೇನಿಯಮ್ ಉತ್ಪಾದನೆಯ ಬಗ್ಗೆ ಖಚಿತ ಮಾಹಿತಿ ದೊರೆತಿದ್ದು, ಪರಮಾಣು ಘಟಕಗಳ ಮೇಲೆ ದಾಳಿ ನಡೆಸಿದ್ದಾಗಿ ಇಸ್ರೇಲ್ ರಕ್ಷಣಾಪಡೆ ತಿಳಿಸಿದೆ.

ಪರಮಾಣು ಕೇಂದ್ರಗಳಲ್ಲಿ ಯುರೇನಿಯಮ್ ಬಳಸಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ಆದರೆ ಎನ್‌ರಿಚ್ಡ್ ಯುರೇನಿಯಮ್ ಪರಮಾಣು ಬಾಂಬ್‌ಗಳಲ್ಲಿ ಬಳಸುವ ಕಾರಣ, ಪರಮಾಣು ಬಾಂಬ್ ತಯಾರಿಗೆ ಇರಾನ್ ಸಿದ್ಧತೆ ನಡೆಸುತ್ತಿದ್ದಾಗಿ ಇಸ್ರೇಲ್ ಹೇಳಿಕೊಂಡಿದೆ. ನಟಾನ್ಸ್ ಘಟಕದ ಅಂಡರ್‌ಗ್ರೌAಡ್ ಬಂಕರ್, ವಿದ್ಯುತ್ ಘಟಕಗಳು, ಹಲವು ತಾಂತ್ರಿಕ ಪರಿಕರಗಳು ಧ್ವಂಸಗೊAಡಿವೆ.

ಪ್ರಮುಖ ಸೇನಾಧಿಕಾರಿಗಳು ಹತ :ಇಸ್ರೇಲ್ ಇರಾನ್‌ನ ವಿವಿಧೆಡೆ ನಡೆಸಿದ ದಾಳಿಯಲ್ಲಿ ಇರಾನ್‌ನ ಇಸ್ಲಾಮಿಕ್ ರಿವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ ಕಮಾಂಡರ್ ಮೇಜರ್ ಜನರಲ್ ಹೊಸೈನ್ ಸಲಾಮಿ, ಭೂ-ಸೇನಾ ಮುಖ್ಯಸ್ಥ ಮೇಜರ್ ಜನರಲ್ ಮಹಮದ್ ಬಗೇರಿ ಹಾಗೂ ಇರಾನ್ ಸುಪ್ರೀಂ ಲೀಡರ್ ಆಲಿ ಖಮೇನಿಯ ಆಪ್ತರಾಗಿದ್ದ ಆಲಿ ಶಮ್ಖಾನಿ, ವಾಯುಪಡೆಯ ಕಮಾಂಡರ್ ಅಮೀರ್ ಅಲಿ ಹಜೀಸದೆ ಹತರಾಗಿದ್ದಾರೆ.ಇರಾನ್‌ನಿಂದ ಪ್ರತಿದಾಳಿ : ಇಸ್ರೇಲ್ ದಾಳಿಗೆ ಇರಾನ್ ಪ್ರತಿದಾಳಿ ನಡೆಸಿದ್ದು, ೧೦೦ಕ್ಕೂ ಅಧಿಕ ಡ್ರೋನ್‌ಗಳನ್ನು ಬಳಸಿ ಇಸ್ರೇಲ್ ಮೇಲೆ ದಾಳಿ ನಡೆಸಿದೆ. ಬಹುತೇಕ ಡ್ರೋನ್‌ಗಳನ್ನು ಇಸ್ರೇಲ್ ರಕ್ಷಣಾ ಸಿಸ್ಟಮ್‌ಗಳು ಧ್ವಂಸಗೊಳಿಸಿದೆ. ಪ್ರತಿದಾಳಿಯನ್ನು ತೀವ್ರಗೊಳಿಸುವುದಾಗಿ ಇರಾನ್‌ನ ಸುಪ್ರೀಂ ಲೀಡರ್ ಆಲಿ ಖಮೇನಿ ಇಸ್ರೇಲ್‌ಗೆ ಎಚ್ಚರಿಸಿದ್ದಾರೆ.

ಮೋದಿಗೆ ನೆತಾನ್ಯು ಕರೆ : ಇಸ್ರೇಲ್ ನಡೆಸಿದ ದಾಳಿ ಬಗ್ಗೆ ಅಲ್ಲಿನ ಪ್ರಧಾನಿ ಬೆಂಜಮಿನ್ ನೆತಾನ್ಯು ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ವಿಚಾರದ ಬಗ್ಗೆ ಭಾರತದ ನಿಲುವನ್ನು ಅವರೊಂದಿಗೆ ಮೋದಿ ವ್ಯಕ್ತಪಡಿಸಿದ್ದು, ಆ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಸ್ಥಾಪಿಸುವ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾಗಿ ಪ್ರಧಾನಿ ಮೋದಿ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊAಡಿದ್ದಾರೆ.