ಚೆಟ್ಟಳ್ಳಿ, ಜೂ. ೧೪: ಉರಿಯುವ ಬೆಂಕಿಕೆAಡದ ನಡುವೆ ಕೆಂಪಗೆಕಾದ ಕಬ್ಬಿಣವನ್ನು ಬಡಿದು ಕೃಷಿ ಪರಿಕರಗಳನ್ನು ತಯಾರಿಸುವ ಗ್ರಾಮೀಣ ಪುರಾತನ ದೇಶಿ ಪದ್ದತಿಯ ಕಮ್ಮಾರರ ಬದುಕಿಗೆ ಸಾಕ್ಷಿ ಎಂಬAತೆ ಚೆಟ್ಟಳ್ಳಿಯ ಕಾನನ್ ಕಾಡು ಎಂಬಲ್ಲಿ ರಸ್ತೆ ಬದಿಯ ಜೋಪುಡಿಯೊಳಗಿನ ೪೯ ವರ್ಷಗಳ ಕುಲುಮೆ ಕಾಯಕದ ಬದುಕು ಅಚ್ಚರಿ ಮೂಡಿಸುತ್ತದೆ.

೧೯೭೬ ರಲ್ಲಿ ಕೇರಳದ ಮಾನಂದವಾಡಿಯಿAದ ಕಾಯಕ ಅರಸಿ ಬಂದ ವಿಜಯನ್ ಹಾಗೂ ರಾಜಮ್ಮ ದಂಪತಿಗಳು ಕೊಡಗಿನ ಕುಟ್ಟಕ್ಕೆ ಬಂದು ಅಲ್ಲಿನ ಕಮ್ಮಾರನೊಂದಿಗೆ ಕೆಲಸ ಪ್ರಾರಂಭಿಸಿದರು. ಚೆಟ್ಟಳ್ಳಿಯ ಕಾನನ್ ಕಾಡಿನ ಮಾಲೀಕರೊಬ್ಬ ತೋಟದ ಬದಿಯಲ್ಲಿ ಜೋಪುಡಿ ನಿರ್ಮಿಸಲು ಸುತ್ತಲಿನ ಹಲವು ತೋಟದ ಮಾಲೀಕರು ಬಿದಿರು, ಮೇಲ್ಚಾವಣಿಗೆ ಬೇಕಾದ ಭತ್ತದ ಹುಲ್ಲನ್ನು ನೀಡಿದರು. ಅದೇ ಹುಲ್ಲಿನ ಜೋಪುಡಿಯೊಳಗೆಯೇ ಕುಲುಮೆ ಕಾಯಕ ಪ್ರಾರಂಭವಾಯಿತು.

ವಿಜಯನ್ ನಂತರದಲ್ಲಿ "ಕಾನನ್ ಕಾಡು ಕೊಲ್ಲ" ನೆಂದೇ ಫೇಮಸ್ಸಾದರು. ಕೃಷಿಕನಿಗೂ, ಕಾರ್ಮಿಕನಿಗೂ ಬೇಕಾದ ವಿವಿಧ ಕತ್ತಿ, ದಬ್ಬೆ, ಗುದ್ದಲಿಯಿಂದಿಡಿದು ಹಲವು ಬಗೆಯ ಪರಿಕರಗಳನ್ನು ಮಾಡತೊಡಗಿದ. ಕೊಡಗಿನ ಹಲವು ಗ್ರಾಮಗಳ ಪ್ರಾಚೀನ ಕಾಲದ ಕಮ್ಮಾರಿಕೆ ಮರೆಯಾದರೂ ವಿಜಯನ್ ತನ್ನ ಹಳೇಯ ಕಮ್ಮಾರಿಕೆಯನ್ನೇ ಮುಂದುವರೆಸಿದ್ದಾರೆ.

ಮನೆ ನಿರ್ಮಿಸುವ ಹಾಗಿಲ್ಲ

ಚೆಟ್ಟಳ್ಳಿ- ಸಿದ್ದಾಪುರ ಮುಖ್ಯರಸ್ತೆ ಬದಿಯಲ್ಲಿ ಕುಲುಮೆ ಕಾಯದ ಜೋಪುಡಿಯನ್ನು ಕೆಡವಿ ಯಾವುದೇ ಕಾರಣಕ್ಕೂ ಮನೆ ನಿರ್ಮಿಸಬಾರದು, ರಸ್ತೆ ಅಗಲೀಕರಣದ ಸಮಯದಲ್ಲಿ ಜೋಪುಡಿಯನ್ನು ತೆರವು ಗೊಳಿಸಬೇಕೆಂದು ಲೋಕೋಪಯೋಗಿ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯ ರಸ್ತೆಯ ಬದಿಯಲ್ಲಿದ್ದರೆ ಮಾತ್ರ ಜನಗಳು ಬರುವರು. ಬೇರೆಡೆ ಹೋಗುವಹಾಗಿಲ್ಲ. ವಿದ್ಯುತ್ ಇಲಾಖೆ ವಿದ್ಯುತ್ ಸಂಪರ್ಕ ನೀಡಲು ಶೀಟಿನ ಮೇಲ್ಛಾವಣಿ ಮಾಡಲಾಯಿತು.

ನಂತರದಲ್ಲಿ ಸ್ಥಳೀಯ ಕಾಫಿ ಬೆಳೆಗಾರರು ಚೆಟ್ಟಳ್ಳಿ ಬ್ಯಾಂಕಿನಲ್ಲಿ ರೂ. ೧೮ ಸಾವಿರ ಸಾಲಕ್ಕೆ ಜಾಮೀನು ನೀಡಿ ಕುಲುಮೆ ಕಾಯಕದ ಜೋಪುಡಿಗೆ ಸೋಲಾರ್ ವ್ಯವಸ್ಥೆ ಕಲ್ಪಿಸಲಾಗಿದೆ ಇನ್ನೂ ರೂ. ೫೦೦೦ ಸಾಲ ಪಾವತಿಸಲು ಬಾಕಿ ಇದೆ.

ಇದ್ದಿಲು ಸಿಗುವುದೇ ಕಷ್ಟ

ಹಿಂದೆ ಮರದ ದಿಮ್ಮಿಯನ್ನು ವಿವಿಧ ಹಂತದಲ್ಲಿ ಇದ್ದಿಲುಗಳಾಗಿ ಮಾಡಿ ಮಾರಾಟ ಮಾಡುತ್ತಿದ್ದರು. ಆದರೆ ಈಗ ಮನೆಗಳಲ್ಲಿ ಗ್ಯಾಸ್ ಬಳಕೆಯಿಂದ ಇದ್ದಿಲುಗಳೇ ಸಿಗುತ್ತಿಲ್ಲ. ಕುಲುಮೆ ಕಾಯಕಕ್ಕೆ ಸುತ್ತಲಿನ ಮನೆಮನೆಯಿಂದ ಇದ್ದಿಲನ್ನು ಸಂಗ್ರಹಿಸಿ ತಂದು ಕಾಯಕವನ್ನು ಮಾಡಲಾಗುತ್ತಿದೆ.

ಖಾಸಗಿಯಾಗಿ ಸಾಲ

ಕತ್ತಿ, ದಬ್ಬೆ ಇನ್ನಿತರೆ ಕಬ್ಬಿಣದ ಸಾಮಗ್ರಿಗಳನ್ನು ತಯಾರಿಸಲು ಬೇಕಾದ ವಸ್ತುಗಳನ್ನು ಖರೀದಿಸಲು ಹಣ ಇಲ್ಲದಿದ್ದಾಗ ಖಾಸಗಿ ಲೋನ್ ಖರೀದಿಸಿ ವಿವಿಧ ಹಂತದಲ್ಲಿ ಇದ್ದಿಲುಗಳಾಗಿ ಮಾಡಿ ಮಾರಾಟ ಮಾಡುತ್ತಿದ್ದರು. ಆದರೆ ಈಗ ಮನೆಗಳಲ್ಲಿ ಗ್ಯಾಸ್ ಬಳಕೆಯಿಂದ ಇದ್ದಿಲುಗಳೇ ಸಿಗುತ್ತಿಲ್ಲ. ಕುಲುಮೆ ಕಾಯಕಕ್ಕೆ ಸುತ್ತಲಿನ ಮನೆಮನೆಯಿಂದ ಇದ್ದಿಲನ್ನು ಸಂಗ್ರಹಿಸಿ ತಂದು ಕಾಯಕವನ್ನು ಮಾಡಲಾಗುತ್ತಿದೆ.

ಖಾಸಗಿಯಾಗಿ ಸಾಲ

ಕತ್ತಿ, ದಬ್ಬೆ ಇನ್ನಿತರೆ ಕಬ್ಬಿಣದ ಸಾಮಗ್ರಿಗಳನ್ನು ತಯಾರಿಸಲು ಬೇಕಾದ ವಸ್ತುಗಳನ್ನು ಖರೀದಿಸಲು ಹಣ ಇಲ್ಲದಿದ್ದಾಗ ಖಾಸಗಿ ಲೋನ್ ಖರೀದಿಸಿ