ಸಿದ್ದಾಪುರ, ಜೂ. ೧೩: ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಡಾನೆ ಉಪಟಳ ದಿನದಿಂದ ದಿನಕ್ಕೇ ಹೆಚ್ಚಾಗುತ್ತಿದ್ದು, ಗ್ರಾಮಸ್ಥರು ಕಂಗೆಟ್ಟಿದ್ದಾರೆ. ಪ್ರತಿನಿತ್ಯ ಕಾಡಾನೆಗಳಿಂದ ದಾಳಿ ನಡೆಯುತ್ತಿದೆ; ಕಾಡಿಗೆ ಅಟ್ಟಲ್ಪಟ್ಟ ಆನೆಗಳು ಕೆಲ ದಿನಗಳಲ್ಲೇ ಮರಳಿ ತೋಟಗಳಿಗೆ ಬರುತ್ತಿದ್ದು, ಸೂಕ್ತ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.
ಬೈಕ್ ಮೇಲೆ ಕಾಡಾನೆ ದಾಳಿ
ಒಂಟಿ ಸಲಗ ಬೈಕ್‌ಮೇಲ್ ದಾಳಿ ನಡೆಸಿ ಜಖಂಗೊಳಿಸಿದ ಘಟನೆ ಮಾಲ್ದಾರೆ ಗ್ರಾಮದಲ್ಲಿ ಗ್ರಾಮದ ಅಸ್ತಾನ ನಿವಾಸಿ ರಮೇಶ ಎಂಬವರಿಗೆ ಸೇರಿದ ಬೈಕನ್ನು ಮಾಲ್ದಾರೆ ಗ್ರಾಮದ ನಿವಾಸಿ ನಾಯಡ ವಿಜು ಎಂಬವರ ಕಾಫಿ ತೋಟದ ಬಳಿ ನಿಲ್ಲಿಸಿದ್ದರು.
೪ಐದನೇ ಪುಟಕ್ಕೆ
ಬೈಕ್ ಮೇಲೆ ಕಾಡಾನೆ ದಾಳಿ
ಒಂಟಿ ಸಲಗ ಬೈಕ್‌ಮೇಲ್ ದಾಳಿ ನಡೆಸಿ ಜಖಂಗೊಳಿಸಿದ ಘಟನೆ ಮಾಲ್ದಾರೆ ಗ್ರಾಮದಲ್ಲಿ ಗ್ರಾಮದ ಅಸ್ತಾನ ನಿವಾಸಿ ರಮೇಶ ಎಂಬವರಿಗೆ ಸೇರಿದ ಬೈಕನ್ನು ಮಾಲ್ದಾರೆ ಗ್ರಾಮದ ನಿವಾಸಿ ನಾಯಡ ವಿಜು ಎಂಬವರ ಕಾಫಿ ತೋಟದ ಬಳಿ ನಿಲ್ಲಿಸಿದ್ದರು.
೪ಐದನೇ ಪುಟಕ್ಕೆ
ಬೈಕ್ ಮೇಲೆ ಕಾಡಾನೆ ದಾಳಿ
(ಮೊದಲ ಪುಟದಿಂದ) ಶುಕ್ರವಾರ ಬೆಳಿಗ್ಗೆ ೮.೩೦ ರ ಸಮಯಕ್ಕೆ ಕಾಡಾನೆಯು ಬೈಕ್‌ನ ಮೇಲೆ ದಾಳಿ ನಡೆಸಿ ಹಾನಿಗೊಳಿಸಿದೆ. ಅಲ್ಲದೆ ಮಾಲ್ದಾರೆ ಹೊಸಳ್ಳಿ ಕಾಫಿ ತೋಟಕ್ಕೆ ಬೆಳಿಗ್ಗೆ ಕೆಲಸಕ್ಕೆ ತೆರಳುತ್ತಿದ್ದ
ಕಾರ್ಮಿಕರ ಮೇಲೆ ಕೂಡ ದಾಳಿಗೆ ಮುಂದಾಗಿದೆ. ಕಾಡಾನೆ ದಾಳಿಯನ್ನು ತಪ್ಪಿಸಿಕೊಳ್ಳಲು ಕಾರ್ಮಿಕರು ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿಯಿದ್ದು, ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಾರ್ಮಿಕರು ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳಲು ಭಯಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಬೈಕಿನ ಮೇಲೆ ಕಾಡಾನೆ ದಾಳಿ ನಡೆಸಿ ಹಾನಿಗೊಳಿಸಿರುವ ಸ್ಥಳಕ್ಕೆ ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾರಿಗೆ ಹಾನಿ
ಮನೆಯ ಬಳಿ ನಿಲ್ಲಿಸಿದ್ದ ಕಾರಿನ ಮೇಲೆ ತಡರಾತ್ರಿ ಒಂಟಿ ಸಲಗ ತೆಂಗಿನ ಮರವನ್ನು ಗುದ್ದಿದ ಪರಿಣಾಮ ಕಾರು ಸಂಪೂರ್ಣ ಜಖಂಗೊAಡಿರುವ ಘಟನೆ ಬಾಡಗ ಬಾಣಂಗಾಲ ಗ್ರಾಮದ ಮಠ ಪೈಸಾರಿಯಲ್ಲಿ ಗುರುವಾರ ನಡೆದಿದೆ.
ಬಾಡಗ ಬಾಣಂಗಾಲ ಗ್ರಾಮದ ನಿವಾಸಿ ಹೇಮಂತ್ ಎಂಬವರ ಮನೆಯ ಸಮೀಪದಲ್ಲಿ ನಿಲ್ಲಿಸಿದ ಕಾರಿನ ಮೇಲೆ ತೆಂಗಿನ ಮರವನ್ನು ದಕ್ಷ ಎಂಬ ರೇಡಿಯೋ ಕಾಲರ್ ಅಳವಡಿಸಿರುವ ಕಾಡಾನೆಯು ದೂಡಿ ಹಾಕಿದ ಪರಿಣಾಮ ಮರವು ಕಾರಿನ ಮೇಲೆ ಬಿದ್ದು ಕಾರು ಸಂಪೂರ್ಣ ಜಖಂಗೊAಡಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯ ಮೊಹಮ್ಮದ್ ಆಲಿ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ೪ಐದನೇ ಪುಟಕ್ಕೆ
ಕಾರಿಗೆ ಹಾನಿ
(ಮೊದಲ ಪುಟದಿಂದ) ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ತಿತಿಮತಿ ವಲಯ ಉಪವಲಯ ಅರಣ್ಯ ಅಧಿಕಾರಿ ಶಶಿ ಪಿ.ಟಿ. ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮೊಹಮ್ಮದ್ ಆಲಿ ಹಾಗೂ ರೈತ ಸಂಘದ ಕಾನೂನು ಸಲಹೆಗಾರ ಹೇಮಚಂದ್ರ ಕೆ.ಬಿ. ಅವರು ಮಾತನಾಡಿ, ಈ ಭಾಗದಲ್ಲಿ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಹಾಗೂ ಕಾಡಾನೆ ದಾಳಿಯಿಂದ ಜಖಂಗೊAಡಿರುವ ಕಾರಿನ ಮಾಲೀಕನಿಗೆ ಸೂಕ್ತ ರೀತಿಯ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಉಪವಲಯ ಅರಣ್ಯ ಅಧಿಕಾರಿ ಶಶಿ ಕಾರಿಗೆ ಹಾನಿಯಾಗಿರುವ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದೆಂದು ಹಾಗೂ ಸೂಕ್ತ ಪರಿಹಾರದ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದರು.
ಕಳೆದ ಕೆಲವು ತಿಂಗಳ ಹಿಂದೆ ಬಾಡಗ ಬಾಣಂಗಾಲ ಗ್ರಾಮದಲ್ಲಿ ಉಪಟಳ ನೀಡುತ್ತಿದ್ದ ಒಂಟಿ ಸಲಗವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದು ಅದಕ್ಕೆ ರೇಡಿಯೋ ಕಾಲರ್ ಅಳವಡಿಸಿ ದಕ್ಷ ಎಂದು ಹೆಸರಿಟ್ಟು ನಾಗರಹೊಳೆಯ ಅಂತರಸAತೆ ಅರಣ್ಯಕ್ಕೆ ಬಿಟ್ಟಿದರು. ಆದರೆ ನಾಲ್ಕು ದಿನಗಳಲ್ಲಿ ಹಿಂತಿರಿಗಿ ಬಂದ ದಕ್ಷ ಎಂಬ ಹೆಸರಿನ ಕಾಡಾನೆಯು ಬಾಡಗ ಬಾಣಂಗಾಲ ಗ್ರಾಮದ ಮಠದ ವ್ಯಾಪ್ತಿಯಲ್ಲಿ ಹಲವಾರು ಮನೆಗಳ ಬಳಿ ನಿಲ್ಲಿಸಿದ್ದ ವಾಹನಗಳ ಮೇಲೆ ದಾಳಿ ನಡೆಸುವುದು ಹಾಗೂ ದ್ವಿಚಕ್ರ ವಾಹನಗಳಲ್ಲಿ ತೆರಳುವ ಸವಾರರ ಮೇಲೆ ದಾಳಿ ನಡೆಸುತ್ತಿದೆ. ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮದ ವ್ಯಾಪ್ತಿಯಲ್ಲಿ ಕಾಫಿ ತೋಟಗಳಲ್ಲಿ ಸುತ್ತಾಡುತ್ತಾ ದಾಂಧಲೆ ನಡೆಸುತ್ತಿದೆ. ಅಳವಡಿಸಿದ ರೇಡಿಯೋ ಕಾಲರ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಮಾಹಿತಿ ಲಭಿಸಿದೆ. ಕೂಡಲೇ ಇದನ್ನು ಸೆರೆಹಿಡಿದು ಸ್ಥಳಾಂತರ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. - ವಾಸು