ಮಡಿಕೇರಿ, ಜೂ.೧೩ : ಭಾರತ ದೇಶಕ್ಕೆ ಸ್ವಾತಂತ್ರö್ಯ ಲಭಿಸಿ ೭೫ ವರ್ಷಗಳು ಕಳೆದು ಅಮೃತ ಮಹೋತ್ಸವ ಆಚರಿಸಿಕೊಂಡರೂ ಇನ್ನೂ ಕೂಡ ಮೂಲಭೂತ ಸೌಕರ್ಯಗಳಿಲ್ಲದೆ ಗ್ರಾಮವೊಂದು ಕುಗ್ರಾಮವಾಗಿ ಉಳಿದುಕೊಂಡಿದೆ ಎಂದರೆ ನಂಬಲಸಾಧ್ಯ., ಹಿಂದಿನಿAದಲೇ ಅನಾದರಕ್ಕೊಳಗಾಗಿ ನಿರ್ಲಕ್ಷö್ಯಕ್ಕೆ ತುತ್ತಾಗಿರುವ ಈ ಗ್ರಾಮಕ್ಕೆ ತೆರಳಲು ಸರಿಯಾದ ರಸ್ತೆ ಇಲ್ಲ., ಇರುವ ರಸ್ತೆ ಕೂಡ ಹಳ್ಳ ಹಿಡಿದಿದೆ. ಕುಡಿಯುವ ನೀರಿನ ವ್ಯವಸ್ಥೆ ಕಂಡಿಲ್ಲ., ಪ್ರತಿನಿತ್ಯ ವಿದ್ಯುತ್ ಕಣ್ಣಾ ಮುಚ್ಚಾಲೆಯಾಡುತ್ತಿದ್ದರೆ ನೆಟ್ವರ್ಕ್ ಸಮಸ್ಯೆಯಿಂದಾಗಿ ಇಲ್ಲಿ ಸಂಪರ್ಕ ಸಾಧನ ಮರೀಚಿಕೆಯಾಗಿದೆ..!

ಈ ಒಂದು ಕರಾಳ ಚಿತ್ರಣ ಕಂಡು ಬರುವುದು ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಕ್ಕೋಡ್ಲು ಗ್ರಾಮದಲ್ಲಿ. ಮುಕ್ಕೋಡ್ಲುವಿನ ತಂತಿಪಾಲ-ಕಲ್ಲುಕೊಟ್ಟು ವ್ಯಾಪ್ತಿಯಲ್ಲಿ ನೆಲೆಸಿರುವ ಮಂದಿ ಸಮಸ್ಯೆಗಳ ನಡುವೆ ಬದುಕು ಸಾಗಿಸುತ್ತಿದ್ದಾರೆ. ಪ್ರಮುಖ ಸಂಪರ್ಕ ಸೇತುವಾಗಿರುವ ರಸ್ತೆಗಳು ತೀರಾ ಹದಗೆಟ್ಟಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಸಲುವಾಗಿ ನಿರ್ಮಿಸಿರುವ ಯೋಜನೆ ಮೂಲೆಗುಂಪಾಗಿದೆ. ವಿದ್ಯುತ್ ವೋಲ್ಟೇಜ್ ಸಮಸ್ಯೆಯಿಂದಾಗಿ ಪರಿತಪಿಸುವಂತಾಗಿದೆ. ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದಾಗಿ ತುರ್ತು ಸಂದರ್ಭಗಳಲ್ಲಿ ಸಂಪರ್ಕ ಸಾಧ್ಯವಾಗದೆ ಪರದಾಡಬೇಕಾದಂತಹ ಪರಿಸ್ಥಿತಿ ಇಲ್ಲಿದೆ.

ಹಳ್ಳ ಹಿಡಿದ ರಸ್ತೆ..!

ತಂತಿಪಾಲ-ಕಲ್ಲುಕೊಟ್ಟು-ಮಾAದಲಪಟ್ಟಿಯನ್ನು ಸಂಪರ್ಕಿಸುವ ರಸ್ತೆ ವ್ಯಾಪ್ತಿಯಲ್ಲಿ ಸುಮಾರು ೬೦ಮನೆಗಳಿದ್ದು, ವಯಸ್ಕರು, ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು ೨೫೦ರಿಂದ ೩೦೦ ಮಂದಿ ನೆಲೆಸಿದ್ದಾರೆ. ತಮ್ಮ ತೋಟದ ನಡುವೆ ಮನೆ ಮಾಡಿಕೊಂಡಿರುವವರಿಗೆ ಏನೇ ಅವಶ್ಯಕತೆಗಳಿದ್ದರೂ ಅಂಗಡಿ, ನಗರ ಪ್ರದೇಶಗಳಿಗೆ, ಕಚೇರಿಗಳಿಗೆ, ಶಾಲಾ- ಕಲೇಜುಗಳಿಗೆ ತೆರಳಬೇಕಿದ್ದರೂ ಇದೇ ರಸ್ತೆಯನ್ನು ಅವಲಂಬಿಸಬೇಕಾಗಿದೆ. ಈ ಕಾಡು ಪ್ರದೇಶದಿಂದ ಮುಖ್ಯ ರಸ್ತೆಯನ್ನು ತಲಪಬೇಕಾದರೆ ೪ರಿಂದ ೫ಕಿ.ಮೀ. ಕ್ರಮಿಸಬೇಕಿದೆ. ಆದರೆ., ರಸ್ತೆ ತೀರಾ ಹಾಳಾಗಿದ್ದು ವಾಹನ ಸಂಚಾರ ತೀರಾ ದುಸ್ತರವಾಗಿದೆ. ಇಲ್ಲಿ ಸಂಚರಿಸುವಾಗ ‘ಆಫ್ ರೋಡ್’ ರ‍್ಯಾಲಿಯಲ್ಲಿ ಪಾಲ್ಗೊಂಡAತಹ ಅನುಭವವಾಗುತ್ತದೆ. ನಡೆದಾಡುವುದು ಕೂಡ ಕಷ್ಟವೇ., ಮಳೆಗಾಲದಲ್ಲಂತೂ ಪರಿಸ್ಥಿತಿ ಹೇಳತೀರದು. ಗುಡ್ಡಗಾಡು ಪ್ರದೇಶವಾಗಿರುವದರಿಂದ ಸಾಧಾರಣ ಗುಣಮಟ್ಟದ ವಾಹನಗಳಿಗೆ ಇಲ್ಲಿ ಸಂಚಾರ ಅಸಾಧ್ಯ..!

ಕಾಡು ಕೂಡಿಕೊಂಡಿದೆ..!

ರಸ್ತೆ ನಿರ್ವಹಣೆ ಕಾಣದೆ ದಶಕಗಳೇ ಕಳೆದಿದೆ ಎಂದು ಅಲ್ಲಿನ ಗ್ರಾಮಸ್ಥರು ಹೇಳುತ್ತಾರೆ. ಉದಾಹರಣೆಯೆಂಬAತೆ ರಸ್ತೆ ಬದಿಯ ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಕಾಡುಗಳನ್ನು ಕಡಿಯದೇ ಇರುವದರಿಂದ ಕಾಡುಗಳು ರಸ್ತೆಗೆ ಬಾಗಿಕೊಂಡು ಅರ್ಧ ರಸ್ತೆಯನ್ನೇ ಆವರಿಸಿಕೊಂಡಿದೆ. ರಸ್ತೆ ಬದಿಯಲ್ಲಿನ ಚರಂಡಿಗಳ ದುರಸ್ತಿ ಮಾಡದೇ ಇರುವದರಿಂದ ಚರಂಡಿಯಲ್ಲಿ ಮಣ್ಣು, ಕಾಡು ತುಂಬಿಕೊAಡು ಚರಂಡಿಯಲ್ಲಿ ಹರಿಯಬೇಕಾದ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದಾಗಿ ರಸ್ತೆ ಮತ್ತಷ್ಟು ಹಾನಿಗೀಡಾಗುತ್ತಿದೆ.

ಲೋಕೋಪಯೋಗಿ ಇಲಾಖೆ ರಸ್ತೆ

ಈ ಹಿಂದೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿದ್ದ ಈ ರಸ್ತೆಯನ್ನು ಜಿ.ಪಂ., ತಾ.ಪಂ., ಅನುದಾನದೊಂದಿಗೆ ಗ್ರಾಮ ಪಂಚಾಯ್ತಿ ಮೂಲಕ ಸಣ್ಣ ಕಾಮಗಾರಿಗಳೊಂದಿಗೆ ದುರಸ್ತಿ ಪಡಿಸಲಾಗಿದೆ. ಅಲ್ಲಲ್ಲಿ ಕೆಲವು ಕಡೆಗಳಲ್ಲಿ ಸ್ವಲ್ಪ ಡಾಮರು ಹಾಗೂ ಇಳಿಜಾರು ಪ್ರದೇಶದಲ್ಲಿ ಕಾಂಕ್ರಿಟ್ ಹಾಕಲಾಗಿದೆಯಾದರೂ ಅವುಗಳು ಸಂಪೂರ್ಣ ಕಿತ್ತು ಹೋಗಿವೆ. ನಂತರದಲ್ಲಿ ರಸ್ತೆಗೆ ಹೆಚ್ಚಿಗೆ ಅನುದಾನದ ಅವಶ್ಯಕತೆಯಿರುವದರಿಂದ ಈ ಹಿಂದೆ ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಅವರು ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಒಳಪಡಿಸಿದ್ದಾರೆ. ಆದರೆ ಇಲಾಖೆಯಿಂದಲೂ ಯಾವದೇ ಸ್ಪಂದನ ಸಿಗುತ್ತಿಲ್ಲವೆಂಬದು ಗ್ರಾಮಸ್ಥರ ಆರೋಪವಾಗಿದೆ.

ವಿದ್ಯುತ್ ಕಣ್ಣಾಮುಚ್ಚಾಲೆ..!

ನಾಗರಿಕತೆಯ ನಾಗಾಲೋಟದಲ್ಲಿ ಎಲ್ಲೆಡೆ ಆಧುನಿಕ ತಂತ್ರಜ್ಞಾನಗಳಡಿ ಸವಲತ್ತುಗಳನ್ನು ಒದಗಿಸಲಾಗುತ್ತಿದ್ದರೂ ಈ ಗ್ರಾಮದಲ್ಲಿ ಇಂದಿಗೂ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದಾರೆ. ತೋಟಗಳ ನಡುವೆ ವಿದ್ಯುತ್ ಮಾರ್ಗ ಹಾದು ಹೋಗಿದ್ದು, ಮರಗಳು ಬಿದ್ದು ವಿದ್ಯುತ್ ಅಡಚಣೆಯಾಗುವುದು ಸಾಮಾನ್ಯವಾಗಿದೆ. ಇರುವ ವಿದ್ಯುತ್ ಮಾರ್ಗದಲ್ಲಿ ‘ಸಿಂಗಲ್ ಫೇಸ್’ ವಿದ್ಯುತ್ ಪ್ರಹರಿಸುತ್ತಿದ್ದು, ಗ್ರಾಮದ ಕೊನೆಯ ಮನೆಗಳಿಗೆ ಬೆಳಕು ತಲಪುವದೇ ಇಲ್ಲ. ವಿದ್ಯಾರ್ಥಿಗಳಿಗೆ ಓದಿಕೊಳ್ಳಲು, ಕಚೇರಿ ಕೆಲಸಕ್ಕೆ ಹೋಗುವವರಿಗೆ ತಯಾರಿ ಮಾಡಿಕೊಳ್ಳಲು ಸಮಸ್ಯೆಯಾಗುತ್ತಿದೆ.

ನೀರಿನ ಸಮಸ್ಯೆ..!

ಸುಂದರ ಪರಿಸರದ ನಡುವೆ ಈ ಗ್ರಾಮವಿದ್ದರೂ ಜಲ ಸಂಪನ್ಮೂಲ ಹೇರಳವಾಗಿದ್ದರೂ ಸಮರ್ಪಕವಾದ ಕುಡಿಯುವ ನೀರಿನ ಸಮಸ್ಯೆಯೂ ಇಲ್ಲಿ ಕಾಡುತ್ತಿದೆ. ಮನೆ ಮನೆಗೆ ನೀರೊದಗಿಸುವ ಉದ್ದೇಶದೊಂದಿಗೆ ನಿರ್ಮಿಸಲಾಗಿರುವ ಯೋಜನೆಯೂ ಮೂಲೆಗುಂಪಾಗಿದೆ.

ಗ್ರಾಮಗಳ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯಾಗಲಿದೆ ಎಂಬ ಧ್ಯೇಯ ವಾಕ್ಯದೊಂದಿಗೆ ದೇಶ ಮುನ್ನಡೆಯುತ್ತಿದ್ದರೆ ಕೆಲವೊಂದು ಇಂತಹ ಗ್ರಾಮಗಳು ಮತ್ತೆ ಅನಾದಿಕಾಲದತ್ತ ವಾಲುತ್ತಿರುವದು ಸೋಜಿಗದ ಸಂಗತಿಯೇ ಸರಿ..! -ಕುಡೆಕಲ್ ಸಂತೋಷ್‌ಶಾಲಾ ಮಕ್ಕಳಿಗೆ ಕಷ್ಟ

ಕಳೆದ ೧೦-೧೨ ವರ್ಷಗಳಿಂದ ಸಮಸ್ಯೆ ಅನುಭವಿಸಿಕೊಂಡು ಬರುತ್ತಿದ್ದೇವೆ. ಹಲವು ಬಾರಿ ಸಂಬAಧಿಸಿದವರಿಗೆ ಮನವಿ ಸಲ್ಲಿಸಿದರೂ ಯಾವದೇ ಪ್ರಯೋಜನವಾಗಿಲ್ಲ. ಸದ್ಯಕ್ಕೆ ರಸ್ತೆ ಗುಂಡಿ ಮುಚ್ಚುವ ಕೆಲಸವನ್ನಾದರೂ ಮಾಡಿ ಎಂದರೆ ಗುಂಡಿಗಳಿಗೆ ಮಣ್ಣು ಸುರಿದು ಹೋಗುತ್ತಾರೆ. ಅದು ಮತ್ತೆ ಕಿತ್ತು ಬರುತ್ತಿದೆ ಎಂದು ಗ್ರಾಮಸ್ಥ ಮಹಿಳೆ ಗೌತಮಿ ಆರೋಪಿಸಿದರು. ಇಲ್ಲಿ ಮನೆಗಳು ದೂರ ದೂರ ಇರುವದರಿಂದ ಯಾರಾದರೂ ಅನಾರೋಗ್ಯಕ್ಕೀಡಾದರೆ ಆಸ್ಪತ್ರೆಗೆ ಕರೆದೊಯ್ಯಲು ಕೂಡ ಸಮಸ್ಯೆಯಾಗುತ್ತದೆ, ನೆಟ್ವರ್ಕ್, ವಿದ್ಯುತ್ ಸಮಸ್ಯೆ ಇದೆ. ಅದರಲ್ಲೂ ಶಾಲಾ ಮಕ್ಕಳನ್ನು ಸುಮಾರು ೫ಕಿ.ಮೀ.ವರೆಗೆ ಕರೆದುಕೊಂಡು ಹೊಗಿ ಬಿಟ್ಟುಬರುವಂತಹ ಪರಿಸ್ಥಿತಿ ಇದೆ ಎಂದರು.ತAತಿಪಾಲ-ಕಲ್ಲುಕೊಟ್ಟು ರಸ್ತೆ ಇಂದು ನಿನ್ನೆಯದಲ್ಲ., ಆ ಗ್ರಾಮದ ಪೂರ್ವಜರು ಸಂಚಾರಕ್ಕೊಸ್ಕರ ೪೦ವರ್ಷಗಳಿಗೂ ಹಿಂದೆ ನಿರ್ಮಿಸಿಕೊಂಡAತಹ ರಸ್ತೆಯಾಗಿದೆ. ಗ್ರಾಮಸ್ತರೇ ಹೇಳುವಂತೆ ಅಂದಿನ ಕಾಲದಲ್ಲಿ ಗುದ್ದಲಿ, ಪಿಕಾಸಿಯಿಂದ ನಿರ್ಮಿಸಿದ ರಸ್ತೆ. ಅದೂ ಇಂದಿಗೂ ಅಭಿವೃದ್ಧಿ ಕಾಣದೆ ದುರಸ್ತಿಗೀಡಾಗಿರುವ ಬಗ್ಗೆ ಗ್ರಾಮಸ್ಥರಲ್ಲಿ ವಿಷಾದವಿದೆ. ಒಂದು ರೀತಿಯ ಅವಿನಾಭಾವ ಸಂಬAಧವಿದೆ. ಹಿಂದೆ ಇದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದುದನ್ನು ಮೆಲುಕು ಹಾಕಿದ ಗ್ರಾಮದ ಹಿರಿಯರು ಆಧುನಿಕತೆ ಮುಂದುವರಿದಿದ್ದರೂ ಇಂದಿಗೂ ರಸ್ತೆ ಹಿಂದಿಗಿAತ ಹಾಳಾಗಿರುವದನ್ನು ಕಂಡು ಮರುಗುತ್ತಿದ್ದುದು ಕಂಡು ಬಂದಿತು..!ಕೂಡಲೇ ದುರಸ್ತಿ ಕಾರ್ಯ

ಮಕ್ಕಂದೂರು-ತAತಿಪಾಲ-ಕಲ್ಲುಕೊಟ್ಟು-ಮಾAದಲಪಟ್ಟಿ-ಹೆಬ್ಬೆಟ್ಟಗೇರಿವರೆಗೆ ಒಟ್ಟು ೩೦ಕಿ.ಮೀ.ವರೆಗಿನ ರಸ್ತೆ ೨೦೨೨-೨೩ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಗೆ ನೀಡಲಾಗಿದೆ. ಕೆಲವು ಕಡೆ ತೀರಾ ಅಗತ್ಯವಿದ್ದ ಕಡೆ ಕೆಲಸ ಮಾಡಲಾಗಿದೆ. ಇನ್ನುಳಿದಂತೆ ಈಗಾಗಲೇ ೮ಕಿಮೀ. ರಸ್ತೆ ಕಾಮಗಾರಿಗೆ ರೂ.೧೦ ಕೋಟಿ ಮೊತ್ತದ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ ೪ಕಿ.ಮೀ.ಡಾಮರು ಹಾಗೂ ೪.ಕಿಮೀ. ಕಾಂಕ್ರಿಟ್ ರಸ್ತೆ ಒಳಗೊಂಡಿದೆ. ಅನುದಾನ ಬಿಡುಗಡೆಯಾದ ಕೂಡಲೇ ಕಾಮಗಾರಿ ಆರಂಭಿಸಲಾಗುವದೆAದು ಸ್ಥಳದಲ್ಲಿ ಹಾಜರಿದ್ದ ಲೋಕೋಪಯೋಗಿ ಇಲಾಖಾ ಅಭಿಯಂತರ ಗಿರೀಶ್ ಹೇಳಿದರು. ಈ ಸಂದರ್ಭ ನಮ್ಮ ಗ್ರಾಮದ ಕಡೆಯಿಂದಲೇ ರಸ್ತೆ ಆರಂಭಿಸುವAತೆ ಗ್ರಾಮಸ್ಥರು ಕೋರಿಕೊಂಡ ಮೇರೆಗೆ ಅದಕ್ಕೆ ಸಮ್ಮತಿಸಿದರು. ಇನ್ನುಳಿದಂತೆ ಕೂಡಲೇ ರಸ್ತೆ ಬದಿ ಕಾಡು ಕಡಿಯುವದು ಹಾಗೂ ಚರಂಡಿ ದುರಸ್ತಿ ಕಾರ್ಯ ಆರಂಭಿಸುವದಾಗಿ ಭರವಸೆ ನೀಡಿದರು.ಮನೆ ಮನೆಗೆ ಕುಡಿಯುವ ನೀರನ್ನೊದಗಿಸುವ ಉದ್ದೇಶದೊಂದಿಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಜಲ್‌ಜೀವನ್ ಯೋಜನೆ ಇಲ್ಲಿ ಕಾಡು ಪಾಲಾಗಿದೆ. ಬೆಟ್ಟದ ಮೇಲೆ ಟ್ಯಾಂಕ್ ನಿರ್ಮಿಸಲಾಗಿದ್ದು, ಅದು ಈಗ ಕಾಡಿನೊಳಗೊಂದು ಪಳೆಯುಳಿಕೆ ಯಂತೆ ಗೋಚರಿಸುತ್ತಿದೆ. ಟ್ಯಾಂಕ್ ನಿರ್ಮಿಸಿ, ರಸ್ತೆ ಬದಿಯ ಚರಂಡಿಗಳಲ್ಲಿ ಪೈಪ್‌ಗಳನ್ನು ಅಳವಡಿಸಿ ಗುತ್ತಿಗೆದಾರರು ರೂ.೮೭,೩೬,೦೦೦ ಹಣ ಪಡೆದುಕೊಂಡು ತೆರಳಿಯಾಗಿದೆ. ಇತ್ತ ಟ್ಯಾಂಕ್‌ಗೆ ನೀರಿನ ಸಂಪರ್ಕವಾಗಲಿ, ವಿದ್ಯುತ್ ಸಂಪರ್ಕವಾಗಲಿ, ಮನೆಗಳಿಗೆ ನಲ್ಲಿ ಸಂಪರ್ಕವಾಗಲೀ ಕಲ್ಪಿಸಲಾಗಿಲ್ಲ. ೨೦೨೨ರಲ್ಲೇ ಕಾಮಗಾರಿ ಪೂರ್ಣಗೊಂಡಿದ್ದು ಇದೀಗ ಟ್ಯಾಂಕ್‌ನ ಅಡಿಪಾಯದಲ್ಲಿ ಬಿರುಕು ಬಿಟ್ಟಿದೆ. ಕಾಮಗಾರಿಯ ಮಾಹಿತಿಯನ್ನೊಳಗೊಂಡ ಫಲಕ ನೆಲಕ್ಕುರುಳಿದ್ದು, ಗ್ರಾಮಸ್ಥರು ಅದನ್ನು ಇಂದು ಎತ್ತಿ ನಿಲ್ಲಿಸಿದ ಪ್ರಸಂಗ ಎದುರಾಯಿತು. ನಿರ್ಜೀವವಾಗಿರುವ ಈ ಯೋಜನೆಯ ಹಣ ನೀರಿನಲ್ಲಿ ಹೋಮವಾಗಿದೆ..!ಹೆದ್ದಾರಿ ತಡೆ ಎಚ್ಚರಿಕೆ..!

ಕಳೆದ ಹಲವು ದಶಕಗಳಿಂದ ಈ ಗ್ರಾಮದ ಜನತೆ ಸಮಸ್ಯೆಗಳನ್ನು ಎದುರಿಸುತ್ತಾ ಬದುಕು ಸಾಗಿಸುತ್ತಿದ್ದು, ಸಮಸ್ಯೆ ಬಗೆಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಮಕ್ಕಂದೂರು ಗ್ರಾಮ ಪಂಚಾಯ್ತಿ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಗ್ರಾಮದ ಪ್ರಮುಖರಾದ ನಂದಿರ ರೇಣು ತಿಮ್ಮಯ್ಯ ನೇತೃತ್ವದಲ್ಲಿ ಸ್ಥಳಕ್ಕೆ ಮಾಧ್ಯಮದವರನ್ನು ಕರೆಸಿಕೊಂಡು ತಮ್ಮ ಸಮಸ್ಯೆಗಳನ್ನು ಮುಂದಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರ ಪರವಾಗಿ ಮಾತನಾಡಿದ ನಂದಿರ ಸಜನ್; ನಮ್ಮ ಅಜ್ಜಂದಿರ ಕಾಲದಲ್ಲಿ ನಿರ್ಮಾಣವಾಗಿರುವ ರಸ್ತೆ ಇಂದಿಗೂ ಅಭಿವೃದ್ಧಿ ಕಾಣದೆ ಹಾಗೆಯೇ ಉಳಿದುಕೊಂಡಿದೆ. ರೈತರು, ಕಾರ್ಮಿಕರು, ಶಾಲಾ ಮಕ್ಕಳಿಗೆ ತೀರಾ ತೊಂದರೆಯಾಗುತ್ತಿದೆ. ಬೆಳೆಗಾರರು ಬೆಳೆದ ಬೆಳೆಯನ್ನು ಸಾಗಾಟ ಮಾಡಲು ಕೂಡ ಕಷ್ಟವಾಗುತ್ತಿದೆ. ರಸ್ತೆ, ಚರಂಡಿ ದುರಸ್ತಿ ಕಾರ್ಯ ಕೂಡ ಆಗುತ್ತಿಲ್ಲ. ವಿದ್ಯುತ್, ನೆಟ್ವರ್ಕ್ ಸಮಸ್ಯೆಗಳೊಂದಿಗೆ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವದೇ ಸ್ಪಂದನ ದೊರಕುತ್ತಿಲ್ಲ. ಈ ಸಮಸ್ಯೆ ಬಗೆಹರಿಸದಿದ್ದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವದಾಗಿ ಹೇಳಿದರು.ರಾಜ್ಯ-ಜಿಲ್ಲೆಯನ್ನಾಳಿದ ಗ್ರಾಮ...!

ಮುಕ್ಕೋಡ್ಲು ಇಂದಿಗೂ ಕುಗ್ರಾಮವೆಂಬ ಹಣೆ ಪಟ್ಟಿ ಕಟ್ಟಿಕೊಂಡಿದ್ದರೂ ಈ ಪುಟ್ಟ ಗ್ರಾಮ ಜಿಲ್ಲೆ ಹಾಗೂ ರಾಜ್ಯಕ್ಕೆ ರಾಜಕೀಯವಾಗಿ ಸಾಕಷ್ಟು ಕೊಡುಗೆಯನ್ನೇ ಕೊಟ್ಟಿದೆ. ಈ ಪ್ರದೇಶದಿಂದ ಶಾಂತೆಯAಡ ಕುಶಾಲಪ್ಪ ಮಂಡಲ ಪಂಚಾಯಿತಿ ಅಧ್ಯಕ್ಷರಾಗಿದ್ದರು., ನಂತರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಹೊಟ್ಟೆಂಗಡ ಬೆಳ್ಯಪ್ಪ ಆಯ್ಕೆಯಾದರು, ಜಿಲ್ಲಾ ಪರಿಷತ್ ಅಧ್ಯಕ್ಷರಾಗಿ, ಮುಂದೆ ಜಿಲ್ಲಾ ಪಂಚಾಯ್ತಿಯಾದಾಗಲು ಶಾಂತೆಯAಡ ವೀಣಾ ಅಚ್ಚಯ್ಯ ಕೆಲಸ ಮಾಡಿದ್ದರು, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕೊಕ್ಕಲೆರ ಸುಜು ತಿಮ್ಮಯ್ಯ ಇದ್ದರು, ನಂತರದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ರವಿ ಕುಶಾಲಪ್ಪ ಬಂದರು.., ಸರಕಾರ ಬದಲಾಗುತ್ತಿದ್ದಂತೆ ಶಾಂತೆಯAಡ ವೀಣಾ ಅಚ್ಚಯ್ಯ ವಿಧಾನ ಪರಿಷತ್ ಸದಸ್ಯರಾದರು., ಈ ನಡುವೆ ಇದೇ ಗ್ರಾಮದ ಸದಸ್ಯ ಕನ್ನಿಕಂಡ ಶ್ಯಾಂ ಸುಬ್ಬಯ್ಯ ಪಂಚಾಯ್ತಿ ಅಧ್ಯಕ್ಷರೂ ಆದರು, ಇಷ್ಟೆಲ್ಲ ಮಹನೀಯರನ್ನ ಕೊಡುಗೆಯಾಗಿ ಕೊಟ್ಟಿರುವ ಈ ಒಂದು ಪುಟ್ಟ ಗ್ರಾಮಕ್ಕೆ ನಿಮಗಳ ಕೊಡುಗೆ ಏನೆಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

ಸಿದ್ದಾಪುರ, ಜೂ. ೧೩: ಮನೆಯ ಅಡುಗೆ ಕೋಣೆಯ ಕಬೋರ್ಡ್ನ ಒಳಗಿದ್ದ ಬೃಹತ್ ಗಾತ್ರದ ನಾಗರಹಾವನ್ನು ಸೆರೆ ಹಿಡಿಯುವಲ್ಲಿ ಮಾಲ್ದಾರೆ ಅರಣ್ಯ ಇಲಾಖೆಯ ಸಿಬ್ಬಂದಿ ಶಶಿ ಯಶಸ್ವಿಯಾಗಿದ್ದಾರೆ. ಮಾಲ್ದಾರೆಯ ಘಟ್ಟದಳ ಸಮೀಪದ ಗಣಪತಿ ಎಂಬವರ ಮನೆಯ ಅಡುಗೆ ಕೋಣೆಯ ಕಬೋರ್ಡ್ನ ಒಳಗೆ ನಾಗರಹಾವು ಸೇರಿಕೊಂಡ ಬಗ್ಗೆ ಗಣಪತಿ ಅವರ ತೋಟದ ಉಸ್ತುವಾರಿ ಉತ್ತಯ್ಯ ಅವರು ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಶಶಿ ತೆರಳಿ ಕೋಣೆಯ ಒಳಗಿನಿಂದ ಸೆರೆ ಹಿಡಿದು ಮಾಲ್ದಾರೆ ಅರಣ್ಯದೊಳಗೆ ಬಿಟ್ಟಿರುತ್ತಾರೆ.