ಮಡಿಕೇರಿ, ಜೂ. ೧೦: ಕರ್ನಾಟಕ ರಾಜ್ಯ ಮಹಿಳೆಯರ ಸಬ್ ಜೂನಿಯರ್ ಹಾಕಿ ತಂಡಕ್ಕೆ ಆಯ್ಕೆ ಪ್ರಕ್ರಿಯೆ ತಾ.೧೪ ರಂದು ಬೆಂಗಳೂರಿನ ಶಾಂತಿನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೯:೩೦ ರಿಂದ ನಡೆಯಲಿದೆ.
ಜಾರ್ಖಂಡದ ರಾಂಚಿಯಲ್ಲಿ ಜುಲೈ ೩ ರಿಂದ ೧೪ ರವರೆಗೆ ಹಾಕಿ ಇಂಡಿಯಾ ಸಬ್ ಜೂನಿಯರ್ ಮಹಿಳೆಯರ ರಾಷ್ಟ್ರೀಯ ಚಾಂಪಿಯನ್ ಶಿಪ್ ನಡೆಯಲಿದ್ದು, ಆಯ್ಕೆಯಾದ ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸಲಿದ್ದಾರೆ. ೨೦೦೯ರ ಜನವರಿ ೧ ಹಾಗೂ ನಂತರದಲ್ಲಿ ಜನಿಸಿದವರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಹಾಕಿ ಕರ್ನಾಟಕದ ಪ್ರಕಟಣೆ ತಿಳಿಸಿದೆ.