ವೀರಾಜಪೇಟೆ, ಜೂ. ೧೦: ರಸ್ತೆ ದಾಟುತ್ತಿದ್ದ ಸಂದರ್ಭ ಬೈಕ್ ಡಿಕ್ಕಿಯಾಗಿ ಬಾಲಕ ಸಾವನ್ನಪ್ಪಿದ ಘಟನೆ ಸಮೀಪದ ನಲ್ವತ್ತೊಕ್ಲು ಗ್ರಾಮದಲ್ಲಿ ನಡೆದಿದೆ.

ವೀರಾಜಪೇಟೆ ತಾಲೂಕು ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ವತ್ತೊಕ್ಲು ನಿವಾಸಿ ಡಿ.ಎ ಹನೀಫ್ ಅವರ ಪುತ್ರ ಮಹಮ್ಮದ್ ಅಫ್ನಾಸ್ (೮) ಮೃತಪಟ್ಟ ಬಾಲಕ.

ಘಟನೆ ಹಿನ್ನೆಲೆ

ನಲ್ವತ್ತೊಕ್ಲು ರಸ್ತೆ ಬದಿಯಲ್ಲಿ ಹನೀಫ್ ಅವರ ಮನೆಯಿದ್ದು, ತಾ. ೯ ರಂದು ಮಧ್ಯಾಹ್ನ ವೇಳೆಗೆ ಸಮೀಪದಲ್ಲಿರುವ ಸಂಬAಧಿ ಮನೆಗೆ ಮನೆಯವರು ಹೊರಟ್ಟಿದ್ದ ಸಂದರ್ಭ ಮಹಮ್ಮದ್ ಅಫ್ನಾಸ್ ದಿಢೀರ್ ಆಗಿ ರಸ್ತೆಗೆ ಬಂದಿದ್ದಾನೆ. ಇದೇ ವೇಳೆಯಲ್ಲಿ ನಲ್ವತ್ತೊಕ್ಲು ಗ್ರಾಮದ ಎಂ.ಎ. ವಿನೋದ್ ಚಂಗಪ್ಪ ಎಂಬವರ ಪುತ್ರ ಇಂಜಿನಿಯರಿAಗ್ ವಿದ್ಯಾರ್ಥಿ ಚಮನ್ ಅಯ್ಯಣ್ಣ ಪರೀಕ್ಷೆ ಮುಗಿಸಿಕೊಂಡು ತನ್ನ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ (ಕೆಎ-೧೨ಡಬ್ಲುö್ಯ- ೭೭೭೮) ಬರುತ್ತಿದ್ದ ಸಂದರ್ಭ ಅಡ್ಡಲಾಗಿ ಬಂದ ಬಾಲಕನಿಗೆ ಬೈಕ್ ಗುದ್ದಿದೆ. ಪರಿಣಾಮ ಸುಮಾರು ೨೦ ಅಡಿಗಳ ಅಂತರಕ್ಕೆ ಬಿದ್ದು ದೇಹದ ಹಲವು ಭಾಗಗಳಿಗೆ ಗಾಯಗಳಾಗಿವೆ.

ಬಾಲಕನನ್ನು ತಕ್ಷಣ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಗೆ ದಾಖಲಿಸಲು ಸೂಚಿಸಿದ್ದಾರೆ. ನಂತರ ಮಡಿಕೇರಿಗೆ ಕರೆತಂದು ಮಂಗಳೂರುವಿಗೆ ಕರೆದೊಯ್ಯುವ ಸಂದರ್ಭ ಮಾರ್ಗ ಮಧ್ಯೆ ಬಾಲಕ ಮೃತಪಟ್ಟಿದ್ದಾನೆ. ಮೃತ ಬಾಲಕನ ತಂದೆ ಹನೀಫ್ ಅವರು ನೀಡಿರುವ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಚಮನ್ ಅಯ್ಯಣ್ಣ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬೈಕ್ ವಶಕ್ಕೆ ಪಡೆಯಲಾಗಿದೆ.

-ಕಿಶೋರ್ ಕುಮಾರ್ ಶೆಟ್ಟಿ