ಸೋಮವಾರಪೇಟೆ, ಜೂ. ೯: ಕಾಫಿ ತೋಟದಲ್ಲಿ ಮರ ಕಪಾತು ಮಾಡುತ್ತಿದ್ದ ಸಂದರ್ಭ ಮರದಿಂದ ಬಿದ್ದು ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ದೊಡ್ಡಹಣಕೋಡು ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.
ತಮಿಳುನಾಡಿನ ಕಾರ್ಮಿಕ ಪೊನ್ನುಸ್ವಾಮಿ(೬೦) ಮೃತಪಟ್ಟವರು. ಗ್ರಾಮದ ಸುಶೀಲ ಎಂಬವರ ಕಾಫಿ ತೋಟದಲ್ಲಿ ಪೊನ್ನುಸ್ವಾಮಿ ಮರವೇರಿದ ಸಂದರ್ಭ ಆಯಾತಪ್ಪಿ ಬಿದ್ದು ತೀವ್ರ ಗಾಯಗೊಂಡಿದ್ದು, ಸೋಮವಾರಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.